ಕೆಪಿ ಅಗ್ರಹಾರದಲ್ಲಿ ಕೊರೊನಾ ತೊಲಗಿಸಲು ಕೋಳಿ, ಕುರಿ ಬಲಿ: ಗಲ್ಲಿ-ಗಲ್ಲಿಯಲ್ಲಿ ಅಣ್ಣಮ್ಮ ಕಲ್ಲು ಸ್ಥಾಪಿಸಿ ಪೂಜೆ

ಕೊರೊನಾ ತೊಲಗಿಸಲು ಜನರು ಕೋಳಿ, ಕುರಿ ಬಲಿ ಕೊಟ್ಟಿರುವ ಘಟನೆ ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ನಡೆದಿದೆ. ಪೂಜೆ ನೆರವೇರಿಸುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ. ಇನ್ನೂ ಕೆಲವರಿಗೆ ಮಾಸ್ಕ್‌ ಕೂಡ ಧರಿಸಿರಲಿಲ್ಲ. ಗಲ್ಲಿ-ಗಲ್ಲಿಯಲ್ಲಿ ನಗರ ದೇವತೆ ಅಣ್ಣಮ್ಮ ಹೆಸರಿನಲ್ಲಿ ಕಲ್ಲುಸ್ಥಾಪನೆ ಮಾಡಿ ಅದಕ್ಕೆ ಪೂಜೆ ಸಲ್ಲಿಸಿಸಲಾಗಿದೆ.

ಕೆಪಿ ಅಗ್ರಹಾರದಲ್ಲಿ ಕೊರೊನಾ ತೊಲಗಿಸಲು ಕೋಳಿ, ಕುರಿ ಬಲಿ: ಗಲ್ಲಿ-ಗಲ್ಲಿಯಲ್ಲಿ ಅಣ್ಣಮ್ಮ ಕಲ್ಲು ಸ್ಥಾಪಿಸಿ ಪೂಜೆ
Linkup
ಬೆಂಗಳೂರು: ನಗರದ ಕೆಪಿ ಅಗ್ರಹಾರದಲ್ಲಿ ಕೊರೊನಾ ತೊಲಗಿಸಲು ಜನರು ಕೋಳಿ, ಕುರಿ ಬಲಿ ಕೊಟ್ಟಿದ್ದಾರೆ. ಈ ಬಡಾವಣೆಯ 16ನೇ ಕ್ರಾಸ್‌, 6ನೇ ಕ್ರಾಸ್‌, 17ನೇ ಕ್ರಾಸ್‌, 13ನೇ ಕ್ರಾಸ್‌ ಸೇರಿ ಹಲವು ಕಡೆಗಳಲ್ಲಿ ಪೂಜೆ ಸಲ್ಲಿಸಲಾಗಿದೆ. ಗಲ್ಲಿ-ಗಲ್ಲಿಯಲ್ಲಿ ನಗರ ದೇವತೆ ಅಣ್ಣಮ್ಮ ಹೆಸರಿನಲ್ಲಿ ಕಲ್ಲುಸ್ಥಾಪನೆ ಮಾಡಿ ಅದಕ್ಕೆ ಪೂಜೆ ಸಲ್ಲಿಸಿ ಕೊರೊನಾ ನಿವಾರಣೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಏರಿಯಾ ಬೀದಿಗಳಲ್ಲಿ ರಂಗೋಲಿ ಹಾಕಿ, ಮೂರು ಕಲ್ಲುಗಳನ್ನಿಟ್ಟು ಪೂಜೆ ಮಾಡಿ ಹರಕೆ ಸಲ್ಲಿಸಿದ್ದಾರೆ. ಪೂಜೆ ನೆರವೇರಿಸುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ. ಇನ್ನೂ ಕೆಲವರಿಗೆ ಮಾಸ್ಕ್‌ ಕೂಡ ಧರಿಸಿರಲಿಲ್ಲ. ಹಳ್ಳಿಗಳ ಜನರಿಗೆ ವಿಜ್ಞಾನ ತಂತ್ರಜ್ಞಾನದ ಬಗೆಗಿನ ಅರಿವು ಸ್ಪಲ್ಪ ಕಡಿಮೆ ಇರುತ್ತದೆ. ಹಾಗಾಗಿ, ಅಲ್ಲಿ ಕೆಲವೊಮ್ಮೆ ಮೌಢ್ಯ ಸಂಪ್ರದಾಯಗಳನ್ನು ಪಾಲಿಸುವುದನ್ನು ನಾವು ನೋಡಿದ್ದೇವೆ. ಆದರೆ, ಬೆಂಗಳೂರಿಗರಿಗೆ ಕೊರೊನಾ ಹೇಗೆ ಹರಡುತ್ತೆ. ಅದನ್ನು ತಡೆಗಟ್ಟಲು ನಾವು ಮಾಡಬೇಕಾಗಿರುವುದು ಏನು ಎಂಬುದರ ಬಗ್ಗೆ ಅರಿವಿದೆ. ಆದರೆ, ಇಂತಹ ಮೌಢ್ಯತೆ ಪ್ರದರ್ಶಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಮಾತುಗಳು ಕೇಳಿ ಬರುತ್ತಿವೆ.