ಬೆಂಗಳೂರು: ಪಾರ್ಕ್‌ನಲ್ಲಿ ಮಲಗುವ ವಿಚಾರಕ್ಕೆ ಬರ್ಬರ ಕೊಲೆ: ಕೊಲೆಗಾರನ ಸುಳಿವು ಕೊಟ್ಟ ಚಪ್ಪಲಿ!

ಮೇ 15ರಂದು ಮಲಗುವ ಜಾಗದ ವಿಚಾರದಲ್ಲಿ ಸತೀಶ್‌ ಮತ್ತು ಅಶೋಕ್‌ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದ್ದು, ಸತೀಶ್‌ ಅಶೋಕನ ತಲೆಗೆ 12 ಬಾರಿ ಮಚ್ಚಿನಿಂದ ಕೊಚ್ಚಿ ಅಲ್ಲಿಂದ ಪರಾರಿಯಾಗಿದ್ದ. ಈ ಪ್ರಕರಣ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ಪ್ರಾಥಮಿಕ ತನಿಖೆ ಆರಂಭಿಸಿದ ಪೊಲೀಸರಿಗೆ ಒಂದು ಸುಳಿವು ಕೂಡ ಸಿಕ್ಕಿರಲಿಲ್ಲ. ಇದೀಗ ಆತನ ಚಪ್ಪಲಿಯಿಂದ ಸಿಕ್ಕಿಬಿದ್ದಿದ್ದಾನೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: ಪಾರ್ಕ್‌ನಲ್ಲಿ ಮಲಗುವ ವಿಚಾರಕ್ಕೆ ಬರ್ಬರ ಕೊಲೆ: ಕೊಲೆಗಾರನ ಸುಳಿವು ಕೊಟ್ಟ ಚಪ್ಪಲಿ!
Linkup
ಬೆಂಗಳೂರು: ಚಿಂದಿ ಆಯುವವನನ್ನು ಕೊಲೆ ಮಾಡಿದ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಮೂಲದ ಅಶೋಕ್‌ ಕೊಲೆಯಾದ ವ್ಯಕ್ತಿ. ಮಾಲೂರು ಮೂಲದ ಸತೀಶ್‌ ಕೊಲೆ ಮಾಡಿದ ಆರೋಪಿ. ಚಿಂದಿ ಆಯುವ ಈ ಇಬ್ಬರು ಪಾರ್ಕ್‌ನಲ್ಲಿ ತಾವು ಮಲಗುವ ಜಾಗಕ್ಕಾಗಿ ಕಿತ್ತಾಡಿಕೊಂಡಿದ್ದರು. ಕೊಲೆಗಾರನ ಡಿಸೈನ್‌ನಿಂದಲೇ ಆತ ಸಿಕ್ಕಿಬಿದ್ದಿರುವುದಾಗಿ ತಿಳಿದು ಬಂದಿದೆ. ಕಲಬುರಗಿ ಮೂಲದ ಅಶೋಕ್‌ ಮತ್ತು ಮಾಲೂರು ಮೂಲದ ಸತೀಶ್‌ ಚಿಂದಿ ಹಾಯ್ದು ಜೀವನ ಸಾಗಿಸುತ್ತಿದ್ದರು. ಅಶೋಕ್‌ ಮೊದಲಿನಿಂದಲೂ ಬಾಬುಸಾಬ್‌ ಪಾರ್ಕ್‌ನಲ್ಲಿ ಮಲಗುತ್ತಿದ್ದನಂತೆ. ಲಾಕ್‌ಡೌನ್‌ ಆರಂಭವಾದ ಬಳಿಕ ಸತೀಶ್‌ ಕೂಡ ಅಲ್ಲಿಗೆ ಮಲಗಲು ಬಂದಿದ್ದಾನೆ. ಮೇ 15ರಂದು ಮಲಗುವ ಜಾಗದ ವಿಚಾರದಲ್ಲಿ ಸತೀಶ್‌ ಮತ್ತು ಅಶೋಕ್‌ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದ್ದು, ಸತೀಶ್‌ ಅಶೋಕನ ತಲೆಗೆ 12 ಬಾರಿ ಮಚ್ಚಿನಿಂದ ಕೊಚ್ಚಿ ಅಲ್ಲಿಂದ ಪರಾರಿಯಾಗಿದ್ದ. ಈ ಪ್ರಕರಣ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿತ್ತು. ಪ್ರಾಥಮಿಕ ತನಿಖೆ ಆರಂಭಿಸಿದ ಪೊಲೀಸರಿಗೆ ಒಂದು ಸುಳಿವು ಕೂಡ ಸಿಕ್ಕಿರಲಿಲ್ಲ. ಬಳಿಕ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಲ್ಲಿ ರಕ್ತ ತುಳಿದುಕೊಂಡು ಹೋಗಿದ್ದ ಚಪ್ಪಲಿ ಗುರುತು ಕಂಡಿತ್ತು. ಅದರ ಆಧಾರದ ಮೇರೆಗೆ ಪ್ರತಿದಿನ ಪಾರ್ಕ್‌ಗೆ ಮಲಗಲು ಬರುವವರ ಮೇಲೆ ಕಣ್ಣಿಟ್ಟಿದ್ದಾರೆ. ಸುಮಾರು ಐವತ್ತು ಜನರನ್ನು ಗುರುತಿಸಿ ಅವರೆಲ್ಲರ ಚಪ್ಪಲಿ ಡಿಸೈನ್‌ ಪರಿಶೀಲಿಸಲಾಗಿತ್ತು. ನೀರಿನಲ್ಲಿ ಚಪ್ಪಲಿ ಇರಿಸಿ ಬಳಿಕ ಅದನ್ನು ಮರಳಿನ ಮೇಲೆ ಇರಿಸಿ ಡಿಸೈನ್‌ ನೋಡಲಾಗಿದೆ. ಈ ವೇಳೆ ಸತೀಶ್‌ ಚಪ್ಪಲಿ ಗುರುತು ಹಾಗೂ ಕೊಲೆಯಾದ ಜಾಗದಲ್ಲಿ ಸಿಕ್ಕಿದ್ದ ಚಪ್ಪಲಿ ಗುರುತು ಒಂದೇ ರೀತಿ ಇದ್ದದ್ದು ಬೆಳಕಿಗೆ ಬಂದಿದೆ. ಸತೀಶ್‌ನನ್ನು ವಶಕ್ಕೆ ಪಡೆದ ಪೊಲೀಸರು, ನಂತರ ಬಾಯಿಬಿಡಿಸಿದ್ದಾರೆ.