ವಿಕ್ಟೋರಿಯಾ ಆಸ್ಪತ್ರೆಗೆ ಬೇಕಿದೆ ಚಿಕಿತ್ಸೆ; ಕೋವಿಡ್‌ ಇಳಿಕೆಯಾದರೂ ಬೆಡ್‌ ಕಾಯ್ದಿರಿಸಿರುವುದಕ್ಕೆ ಆಕ್ಷೇಪ!

ಆಸ್ಪತ್ರೆಯಲ್ಲಿ ವೈದ್ಯರು, ಶುಶ್ರೂಷಕರ ಕೊರತೆ ಇಲ್ಲ. ನಿಷ್ಠೆಯಿಂದ ಕೆಲಸ ಮಾಡುವರಿಲ್ಲದೆ ರೋಗಿಗಳು ನರಳಾಡುವಂತಾಗಿದೆ. ಹಬ್ಬ ಹರಿದಿನ, ಸರಕಾರಿ ರಜೆಗಳಿದ್ದರೆ ಭದ್ರತಾ ಸಿಧಿಬ್ಬಂದಿ ಬಿಟ್ಟರೆ ಬೇರೆ ಸಿಬ್ಬಂದಿ ಕಾಣ ಸಿಗುವುದೇ ಇಲ್ಲ. ಹೊರಗಿನಿಂದ ಬರುವ ರೋಗಿಗಳಿಗೆ ಕೂರಲು ಸೂಕ್ತ ವ್ಯವಸ್ಥೆ ಇಲ್ಲ. ಪರಿಣಾಮ, ರೋಗಿಗಳು ಮೆಟ್ಟಿಲ ಮೇಲೆಯೇ ಗೋಳಾಡುವಂತಾಗಿದೆ.

ವಿಕ್ಟೋರಿಯಾ ಆಸ್ಪತ್ರೆಗೆ ಬೇಕಿದೆ ಚಿಕಿತ್ಸೆ; ಕೋವಿಡ್‌ ಇಳಿಕೆಯಾದರೂ ಬೆಡ್‌ ಕಾಯ್ದಿರಿಸಿರುವುದಕ್ಕೆ ಆಕ್ಷೇಪ!
Linkup
ಬೆಂಗಳೂರು: ನಗರದ ಅತಿದೊಡ್ಡ ಆಸ್ಪತ್ರೆ ಎನ್ನುವ ಹೆಗ್ಗಳಿಕೆ ಪಾತ್ರವಾದ ಅವ್ಯವಸ್ಥೆಯ ಆಗರವಾಗಿದೆ. ಕೇವಲ ರಾಜ್ಯದೊಳಗಿನ ಮಾತ್ರವಲ್ಲದೆ, ನೆರೆಯ ತಮಿಳುನಾಡು, ಆಂಧ್ರಪ್ರದೇಶದಿಂದಲೂ ಸಾಕಷ್ಟು ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ. ವಿಕ್ಟೋರಿಯಾ ಆಸ್ಪತ್ರೆ ಎಲ್ಲಾ ಕಾಯಿಲೆಗಳಿಗೂ ನೀಡುವಷ್ಟು ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದ್ದರೂ ಆಡಳಿತ ವರ್ಗದ ವೈಫಲ್ಯದಿಂದ ಜನರಿಗೆ ಸರಿಯಾದ ವೈದ್ಯಕೀಯ ನೆರವು ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ವೈದ್ಯರು, ಶುಶ್ರೂಷಕರ ಕೊರತೆ ಇಲ್ಲ. ನಿಷ್ಠೆಯಿಂದ ಕೆಲಸ ಮಾಡುವರಿಲ್ಲದೆ ರೋಗಿಗಳು ನರಳಾಡುವಂತಾಗಿದೆ. ಹಬ್ಬ ಹರಿದಿನ, ಸರಕಾರಿ ರಜೆಗಳಿದ್ದರೆ ಭದ್ರತಾ ಸಿಬ್ಬಂದಿ ಬಿಟ್ಟರೆ ಬೇರೆ ಸಿಬ್ಬಂದಿ ಕಾಣ ಸಿಗುವುದೇ ಇಲ್ಲ. ಭಾನುವಾರ ಹೊರ ರೋಗಿ ವಿಭಾಗವನ್ನು ಒಂದು ಗಂಟೆಯವರೆಗೆ ತೆರೆದಿರಬೇಕು ಎನ್ನುವ ಆದೇಶವಿದ್ದರೂ 12.30ರ ನಂತರ ಸಿಬ್ಬಂದಿ ಒಬ್ಬೊಬ್ಬರಾಗಿ ಹೊರಡಲು ಸಿದ್ಧರಾಗುತ್ತಾರೆ. ಎಲ್ಲದಕ್ಕೂ ಕೋವಿಡ್‌ ನೆಪ ಸದ್ಯ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಟಿಸಿಸಿ ವಿಭಾಗದಲ್ಲಿ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯಗಳು ಇವೆ. ಕೋವಿಡ್‌ ಆಸ್ಪತ್ರೆಯನ್ನಾಗಿ ಬದಲಾಯಿಸಲಾಗಿದೆ ಎಂಬ ನೆಪವನ್ನೇ ಹೇಳಿಕೊಂಡು ಇತರೆ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ. ''ಕೋವಿಡ್‌ ಸಾಕಷ್ಟು ಕಡಿಮೆಯಾಗಿದ್ದು, ಐದಾರು ಜನ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ 35 ಐಸಿಯು ಬೆಡ್‌ಗಳ ಹಾಸಿಗೆಗಳನ್ನು ಕಾಯ್ದಿರಿಸಿರುವುದು ಅಗತ್ಯ ಏನಿದೆ,'' ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹೊರಗಿನಿಂದ ಬರುವ ರೋಗಿಗಳಿಗೆ ಕೂರಲು ಸೂಕ್ತ ವ್ಯವಸ್ಥೆ ಇಲ್ಲ. ಪರಿಣಾಮ, ರೋಗಿಗಳು ಮೆಟ್ಟಿಲ ಮೇಲೆಯೇ ಗೋಳಾಡುವಂತಾಗಿದೆ. ಸದ್ಯ ತುರ್ತು ಚಿಕಿತ್ಸೆ ಆಸ್ಪತ್ರೆಯನ್ನಾಗಿ ಬದಲಾಯಿಸಿರುವ ಶತಮಾನೋತ್ಸವ ಕಟ್ಟಡದಲ್ಲಿ ರೋಗಿಗಳನ್ನು ನೋಡಿಕೊಳ್ಳುವವರು ಆಸ್ಪತ್ರೆ ಎದುರಿನ ಕಟ್ಟೆಯ ಮೇಲೆ, ಅನ್ನ ದಾಸೋಹದ ಕೇಂದ್ರದಲ್ಲಿ ಕುಳಿತು ವಿಶ್ರಾಂತಿ ಪಡೆಯುವ ಸ್ಥಿತಿ ಇದೆ. ತಕ್ಷಣ ಸಿಗುತ್ತಿಲ್ಲ ಗಾಲಿ ಖುರ್ಚಿ ತುರ್ತು ಚಿಕಿತ್ಸೆ ಮತ್ತು ಅಪಘಾತ ವಲಯದಲ್ಲಿ ಒಬ್ಬ ರೋಗಿ ಗಾಲಿ ಖುರ್ಚಿ ತೆಗೆದುಕೊಂಡು ಹೋಗಿದ್ದು, ಮರಳಿ ತರುವುದು ತಡವಾದರೆ ಇನ್ನೊಂದು ರೋಗಿಗೆ ತಕ್ಷಣಕ್ಕೆ ಗಾಲಿ ಖುರ್ಚಿ ಸಿಗುವುದಿಲ್ಲ. ಆಂಬ್ಯುಲೆನ್ಸ್‌ ರೋಗಿಯನ್ನು ಕರೆತಂದು ಆಸ್ಪತ್ರೆಯ ಮುಂದೆ ನಿಂತರೂ ಕಾಳಜಿ ವಹಿಸುವವರಿಲ್ಲ. ಬೆಡ್‌ಗಳ ಲಭ್ಯತೆಗೆ ಸಂಬಂಧಿಸಿದಂತೆ ಯಾವ ಪೂರ್ವ ಸಿದ್ಧತೆಯಯನ್ನು ಇಲ್ಲಿಯ ಅಧಿಕಾರಿಗಳು ಮಾಡಿಕೊಳ್ಳುತ್ತಿಲ್ಲ ಎನ್ನುತ್ತಾರೆ ಸಿಬ್ಬಂದಿಯೊಬ್ಬರು. ಆಸ್ಪತ್ರೆ ಅಧ್ವಾನ ಇದೇ ಮೊದಲಲ್ಲ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲವು ತಿಂಗಳ ಹಿಂದೆ ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ನೀಡಲು ಮೀಸಲಿಟ್ಟಿದ್ದ 10 ವಯಲ್‌ ಚುಚ್ಚು ಮದ್ದು ಕದ್ದಿರುವ ಸಂಗತಿ ಬೆಳಕಿಗೆ ಬಂದಿತ್ತು. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಕೋವಿಡ್‌ ಸೋಂಕಿನಿಂದ ಮೃತಪಟ್ಟ ಇಬ್ಬರು ರೋಗಿಗಳನ್ನು ಒಂದೇ ಆಂಬ್ಯುಲೆನ್ಸ್‌ನಲ್ಲಿ ಸಾಗಿಸಿದ ಪ್ರಕರಣ ಕೂಡ ನಡೆದಿತ್ತು. ಹೀಗೆ ಸಾಲು ಸಾಲು ಪ್ರಕರಣಗಳು ನಡೆಯುತ್ತಲೇ ಇದ್ದರೂ ಆಡಳಿತ ಮಂಡಳಿ ಎಚ್ಚತ್ತುಕೊಳ್ಳದೇ ಇರುವುದು ಮಾತ್ರ ವಿಪರ್ಯಾಸ ಎಂಬ ಟೀಕೆ ಕೇಳಿ ಬಂದಿದೆ. ನಮ್ಮ ಸಂಬಂಧಿಕರೊಬ್ಬರು ಪೆಟ್ಟು ಮಾಡಿಕೊಂಡಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಚಿಕಿತ್ಸೆ ಹೇಗೆ ನಡೆಯುತ್ತಿದೆ ಎಂದು ತಿಳಿದುಕೊಳ್ಳುವುದಕ್ಕೆ ವೈದ್ಯರನ್ನು ಕೇಳಿದರೆ ಸರಿಯಾದ ಉತ್ತರ ಸಿಗುವುದಿಲ್ಲ. ನರ್ಸ್‌ಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಹೆಚ್ಚು ಮಾತನಾಡಿದರೆ ಬೇರೆ ಕಡೆ ಕರೆದುಕೊಂಡು ಹೋಗಿ ಎನ್ನುತ್ತಾರೆ. ಯಶೋದಾ, ರೋಗಿ ಸಂಬಂಧಿ