''ವಾಜಿದ್ ಸಾಜಿದ್ ಕೈಯಲ್ಲಿ ಅರಳಿದ ರಾಯರ ಚಿತ್ರದಿಂದ ನಡೆದ ಪವಾಡ ಒಂದೆರಡಲ್ಲ'' - ಜಗ್ಗೇಶ್

ರಾಯರ ಆಶೀರ್ವಾದದಿಂದ ಸಹೋದರ ಕೋಮಲ್ ಕೋವಿಡ್‌ನಿಂದ ಗುಣಮುಖರಾದರು ಎಂದು ನಿನ್ನೆಯಷ್ಟೇ ನಟ ಜಗ್ಗೇಶ್ ಟ್ವೀಟ್ ಮಾಡಿದ್ದರು. ಇಂದು ರಾಯರ ಫೋಟೋ ಮೂಲಕ ಆಗಿರುವ ಪವಾಡದ ಬಗ್ಗೆ ನಟ ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

''ವಾಜಿದ್ ಸಾಜಿದ್ ಕೈಯಲ್ಲಿ ಅರಳಿದ ರಾಯರ ಚಿತ್ರದಿಂದ ನಡೆದ ಪವಾಡ ಒಂದೆರಡಲ್ಲ'' - ಜಗ್ಗೇಶ್
Linkup
ನವರಸ ನಾಯಕ ದೈವ ಭಕ್ತ. ಅದರಲ್ಲೂ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳೆಂದರೆ ಜಗ್ಗೇಶ್‌ಗೆ ಪರಮ ಭಕ್ತಿ. ಪ್ರತಿ ದಿನ, ಪ್ರತಿ ಕ್ಷಣ ರಾಯರ ಸ್ಮರಣೆ ಮಾಡುವ ಜಗ್ಗೇಶ್ ಆಗಾಗ ಮಂತ್ರಾಲಯಕ್ಕೂ ಭೇಟಿ ನೀಡುತ್ತಿರುತ್ತಾರೆ. ರಾಯರ ಆಶೀರ್ವಾದದಿಂದ ಸಹೋದರ ಕೋವಿಡ್‌ನಿಂದ ಗುಣಮುಖರಾದರು ಎಂದು ನಿನ್ನೆಯಷ್ಟೇ ನಟ ಜಗ್ಗೇಶ್ ಟ್ವೀಟ್ ಮಾಡಿದ್ದರು. ಇಂದು ರಾಯರ ಫೋಟೋ ಮೂಲಕ ಆಗಿರುವ ಪವಾಡದ ಬಗ್ಗೆ ನಟ ಜಗ್ಗೇಶ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಜಗ್ಗೇಶ್‌ಗೆ ಟ್ವೀಟ್ ಮಾಡಿದ ಕಲಾವಿದ ವಾಜಿದ್ ಸಾಜಿದ್ ಮಾರಣಾಂತಿಕ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ಕೋಮಲ್ ಆರೋಗ್ಯ ಸ್ಥಿತಿ ಸುಧಾರಿಸಿರುವ ಬಗ್ಗೆ ನಿನ್ನೆ (ಏಪ್ರಿಲ್ 27) ಜಗ್ಗೇಶ್ ಟ್ವೀಟ್ ಮಾಡಿದ್ದರು. ಕೋಮಲ್ ಆರೋಗ್ಯದ ಕುರಿತಾಗಿ ಜಗ್ಗೇಶ್‌ ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು. ಇದನ್ನು ಗಮನಿಸಿದ ಕಲಾವಿದ ವಾಜಿದ್ ಸಾಜಿದ್, ''ಕೋಮಲ್‌ರವರಿಗೆ ಕೋವಿಡ್ ಆವರಿಸಿ ಈಗ ಚೇತರಿಸಿಕೊಳ್ಳುತ್ತಿರುವ ಸಮಾಚಾರ ತಿಳಿದು ಹೃದಯ ತುಂಬಿ ಬಂದಿತು. ಆ ದೇವರು ಅವರ ಆರೋಗ್ಯ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದರು. ಪ್ರತಿಕ್ರಿಯೆ ನೀಡಿದ ಜಗ್ಗೇಶ್ ವಾಜಿದ್ ಸಾಜಿದ್ ಟ್ವೀಟ್ ಗಮನಿಸಿದ ಜಗ್ಗೇಶ್, ''ಹೇಗಿದ್ದೀರಾ.. ನೀವು ರಚಿಸಿಕೊಟ್ಟ ರಾಯರ ಚಿತ್ರ 32 ವರ್ಷವಾಗಿ ಅದ್ಭುತ ಪವಾಡ ನಡೆಯುತ್ತಿದೆ. ನನ್ನ 32 ವರ್ಷದ ಬೆಳವಣಿಗೆಯಲ್ಲಿ ಈ ಫೋಟೋ ಮೂಲಕ ಅನೇಕ ಪವಾಡ ಆಗಿದೆ. ಅದರಲ್ಲಿ ಕೋಮಲ್ ಉದಾಹರಣೆಯೂ ಒಂದು. ಧನ್ಯವಾದ ಸಾಜಿದ್ ನಿಮ್ಮ ನೆನಪಿನ ಪ್ರೀತಿಗೆ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ವಾಜಿದ್ ಸಾಜಿದ್‌ಗೂ ನಮಸ್ಕಾರ ಮಾಡುವೆ ಎಂದ ಜಗ್ಗೇಶ್ ''ನಾನು ಈ ಫೋಟೋ ಮುಟ್ಟಿ ನಮಸ್ಕಾರ ಮಾಡುವಾಗ ಇದ ರಚಿಸಿದ ನಿಮಗೂ ನಮಸ್ಕಾರ ಮಾಡುವೆ. ಕಾರಣ ಅರ್ಜುನನಿಗೆ ಶ್ರೀಕೃಷ್ಣ ಸಿಕ್ಕಂತೆ ನನ್ನ ಬದುಕಿಗೆ ಈ ಫೋಟೋ ನಿಮ್ಮಿಂದ ಸಿಕ್ಕಿತು. ಕಾಲಬಂದಾಗ ಭೇಟಿಯಾಗುವ. ಇದರಿಂದ ಆಗುವ ವಿಸ್ಮಯ ನೇರವಾಗಿ ವಿವರಿಸುವೆ'' ಎಂದು ವಾಜಿದ್ ಸಾಜಿದ್‌ರನ್ನು ಉಲ್ಲೇಖಿಸಿ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ''ಮುಖ್ಯವಾಗಿ ರಾಯರ ದಿವ್ಯ ಶಕ್ತಿ ನಮ್ಮ ಜೊತೆ ಇದೆ'' ಎಂದು ವಾಜಿದ್ ಸಾಜಿದ್ ಪ್ರತಿಕ್ರಿಯಿಸಿದ್ದಾರೆ. ರಾಯರ ಪೂರ್ವ ನಿರ್ಧಾರಿತ ಕೃಪೆ ''ನೀವು ತಾಯಿ ಶಾರದೆ ಸಂಜಾತ. ನಿಮಗೆ ಅಲ್ಲಾಹುವಿನ ಸಂಪೂರ್ಣ ಆಶೀರ್ವಾದ ಸಿಕ್ಕಿದೆ. ನೀವು ಹಿಂದಿನ ಜನ್ಮದ ನನ್ನ ಬಂಧು ಅಥವಾ ಮಿತ್ರ. ಇಲ್ಲದಿದ್ದರೆ ಗಾಂಧಿನಗರದ ಗಲ್ಲಿಯಲ್ಲಿ 1989ರಲ್ಲಿ ಸಿಕ್ಕಿ ಅದ್ಭುತ ಪವಾಡ ಬಿಂದು ರಾಯರ ಚಿತ್ರ ನನಗೆ ಏಕೆ ಕೊಟ್ಟಿರಿ? ಇದೆಲ್ಲ ರಾಯರ ಪೂರ್ವ ನಿರ್ಧಾರಿತ ಕೃಪೆ'' ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. (ಚಿತ್ರಕೃಪೆ: ಜಗ್ಗೇಶ್ ಟ್ವಿಟ್ಟರ್/ಪ್ರೊಫೈಲ್)