ಕನ್ನಡಕ್ಕಾಗುತ್ತಿರುವ ಅವಮಾನಗಳ ಹಿಂದೆ ಯಾರೋ ಕನ್ನಡ ವಿರೋಧಿ ಪಟ್ಟಭದ್ರರಿದ್ದಾರೆ: ಎಚ್‌ಡಿ ಕುಮಾರಸ್ವಾಮಿ

ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರೋದಿಲ್ಲ ಎಂದು ಈಗಾಗಲೇ ಕರ್ನಾಟಕದ ಜನತೆ ಸಾಬೀತುಪಡಿಸಿದೆ. ಈ ವೇಳೆ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದ ಡಾ ರಾಜ್‌ಕುಮಾರ್ ಅವರ ಕುರಿತು ತಪ್ಪು ಮಾಹಿತಿ ನೀಡಿದರೆ ಹೇಗೆ? ಈ ಕುರಿತು ಎಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದಾರೆ.

ಕನ್ನಡಕ್ಕಾಗುತ್ತಿರುವ ಅವಮಾನಗಳ ಹಿಂದೆ ಯಾರೋ ಕನ್ನಡ ವಿರೋಧಿ ಪಟ್ಟಭದ್ರರಿದ್ದಾರೆ: ಎಚ್‌ಡಿ ಕುಮಾರಸ್ವಾಮಿ
Linkup
ಕನ್ನಡಿಗರನ್ನು ಕೆಣಕುವ ಕೆಲಸಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಕೆಲದಿನಗಳ ಹಿಂದೆ ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಬಳಿ ಕ್ಷಮೆ ಕೇಳಿಸುವಂತೆ ಮಾಡಲು ಕನ್ನಡಿಗರು ಯಶಸ್ವಿ ಆಗಿದ್ದರು. ಇದಾದ ನಂತರದಲ್ಲಿ ಕಿಡಿಗೇಡಿಗಳು ಬುದ್ಧಿ ಕಲಿಯಬೇಕಿತ್ತು. ಆದರೆ ಈಗ ಮತ್ತೊಂದು ತಪ್ಪಾಗಿದೆ. ಕುರಿತು ಅಸಂಬದ್ಧ ಮಾಹಿತಿ ನೀಡಿರುವುದು ಎಚ್‌ಡಿ ಕುಮಾರಸ್ವಾಮಿ ಕಣ್ಣಿಗೆ ಬಿದ್ದಿದ್ದು, ಅವರು ಕೂಡ ಆಕ್ರೋಶ ಹೊರಹಾಕಿದ್ದಾರೆ. ಏನು ಅವಮಾನ? ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಕೊಡುಗೆ ನೀಡಿರುವ ವರನಟ ಡಾ ರಾಜ್‌ಕುಮಾರ್ ಅವರ ಕುರಿತು ಗೂಗಲ್‌ನಲ್ಲಿ ಅಸಂಬದ್ಧ ಅರ್ಥ ತೋರಿಸುತ್ತಿದೆ. ನಟ ವಿಜಯ್ ಸೇತುಪತಿ ಮತ್ತು ಮಾಧವನ್ ನಟನೆಯ ತಮಿಳಿನ 'ವಿಕ್ರಮ್ ವೇದ' ಸಿನಿಮಾದ ಕುರಿತು ಗೂಗಲ್ ನೀಡಿರುವ ಮಾಹಿತಿಯಲ್ಲೊಂದು ಎಡವಟ್ಟು ಆಗಿದೆ. ಗೂಗಲ್‌ನಲ್ಲಿ vikram vedha cast ಅಂತ ಸರ್ಚ್ ಮಾಡಿದರೆ, ಅದರಲ್ಲಿ ಡಾ. ರಾಜ್‌ಕುಮಾರ್ half boil ಅನ್ನೋ ಪಾತ್ರ ಮಾಡಿದ್ದರು ಎಂಬ ತಪ್ಪು ಮಾಹಿತಿ ತೋರಿಸುತ್ತಿದೆ. ಈ ಕುರಿತು ಎಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಎಚ್‌ಡಿಕೆ ಹೇಳಿದ್ದೇನು? ಡಾ. ರಾಜ್‌ಕುಮಾರ್‌ ಅವರಿಗೆ ಅಪಮಾನ ಮಾಡಿದ್ದು, ಕನ್ನಡ ಕೆಟ್ಟ ಭಾಷೆ ಎಂದು ಕರೆದಿದ್ದು, ಕನ್ನಡದ ಧ್ಜಜಕ್ಕೆ ಅಪಮಾನ ಮಾಡಿದ್ದು ಎಲ್ಲವೂ ಅಂತರ್ಜಾಲ ವೇದಿಕೆಯಲ್ಲಿಯೇ. ಈ ಪ್ರಕರಣಗಳ ಹಿಂದೆ ಯಾರೋ ಕನ್ನಡ ವಿರೋಧಿ ಪಟ್ಟಭದ್ರರು ಇದ್ದಂತೆ ಕಾಣಿಸುತ್ತಿದೆ. ಈ ನಿಟ್ಟಿನಲ್ಲಿ ಗಂಭೀರವಾಗಿ ತನಿಖೆಗಳಾಗಬೇಕು. ಆ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು. ಕನ್ನಡ ಆಯ್ತು, ಈಗ ಕನ್ನಡಿಗರ ಕಣ್ಮಣಿ ರಾಜ್‌ಕುಮಾರ್‌ ಅವರ ವಿಚಾರದಲ್ಲಿ ಅಪಮಾನ ಆಗುತ್ತಿದೆ. ಇವೆಲ್ಲ ಯಾಕಾಗುತ್ತಿವೆ, ಯಾರು ಮಾಡುತ್ತಿದ್ದಾರೆ, ಕನ್ನಡಿಗರಿಗೇ ಹೀಗೆ ಏಕೆ ಆಗುತ್ತಿದೆ, ಬೇರೆ ಭಾಷೆಗಿಲ್ಲದ ಪ್ರಾರಬ್ದ ನಮಗೇ ಏಕೆ? ಇಂಥ ಅಪಸವ್ಯಗಳ ಕಡೆಗೆ ಸರ್ಕಾರಗಳು ಪರಿಣಾಮಕಾರಿಯಾಗಿ ನಡೆದುಕೊಳ್ಳಬೇಕು, ಸಂಬಂಧಪಟ್ಟವರು ಸೂಕ್ಷ್ಮವಾಗಬೇಕು. ನೆಟ್ಟಿಗರು ಹೇಳಿದ್ದೇನು? ಕನ್ನಡದ ಪರ ಧ್ವನಿ ಎತ್ತಿರುವ ಎಚ್‌ಡಿಕೆಯನ್ನು ಅನೇಕರು ಹೊಗಳಿ ಟ್ವೀಟ್ ಮಾಡಿದ್ದರೆ, ಇನ್ನೂ ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾ ವ್ಯಾಕ್ಸಿನ್ ಕುರಿತು ಹಿಂದಿ, ಇಂಗ್ಲಿಷ್‌ನಲ್ಲಿರುವ ಒಂದು ಪೋಸ್ಟರ್ ಹಂಚಿಕೊಂಡು, "ಇದು ನಿಮ್ಮ ಕರ್ಮ ಭೂಮಿ ರಾಮನಗರದಲ್ಲಿ ವಾರದ ಹಿಂದೆ ಹಾಕಿದ್ದಂತೆ. ಹೋರಾಟ ಹೇಳಿಕೆ ಟ್ವೀಟ್ ಏನಾದ್ರು? ಭಾಷಾಭಿಮಾನಕ್ಕೆ ಧಕ್ಕೆ ಆಗಲಿಲ್ವಾ? ಹಿಂದಿ ಹೇರಿಕೆ ಹೇಗೆ ನಮ್ಮನ್ನು ಶೋಷಿಸುತ್ತಿದೆ ಅಂತ ಅರಿವಿಲ್ಲವಾ? ಸಣ್ಣ ಪುಟ್ಟ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೆ ಪ್ರಾದೇಶಿಕ ಪಕ್ಷ ಅಂತ ಕರೆದುಕೊಳ್ಳುವ ನಿಮ್ಮ ಪಕ್ಷದ ಸುಧಾರಣೆ ಯಾಕೆ ಮಾಡಬಾರದು?" ಎಂದು ನೆಟ್ಟಿಗರೊಬ್ಬರು ಕುಮಾರಣ್ಣ ಅವರನ್ನು ಪ್ರಶ್ನೆ ಮಾಡಿದ್ದಾರೆ.