ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿದ್ದಕ್ಕಾಗಿ ಇಸ್ಲಾಂನಿಂದ ಹಿಂದು ಧರ್ಮಕ್ಕೆ ಮತಾಂತರಗೊಂಡ ನಿರ್ದೇಶಕ ಅಲಿ ಅಕ್ಬರ್

ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿದವರಲ್ಲಿ ಹೆಚ್ಚಿನವರು ಮುಸ್ಲಿಮರು ಎಂದು ಮಲಯಾಳಂ ನಿರ್ದೇಶಕ ಅಲಿ ಅಕ್ಬರ್ ಅವರು ಹಿಂದು ಧರ್ಮಕ್ಕೆ ಮತಾಂತರ ಆಗಿದ್ದಾರೆ.

ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿದ್ದಕ್ಕಾಗಿ ಇಸ್ಲಾಂನಿಂದ ಹಿಂದು ಧರ್ಮಕ್ಕೆ ಮತಾಂತರಗೊಂಡ ನಿರ್ದೇಶಕ ಅಲಿ ಅಕ್ಬರ್
Linkup
ಕೊಚ್ಚಿ: ನಿರ್ದೇಶಕ ಅಲಿ ಅಕ್ಬರ್, ಪತ್ನಿ Lucyamma ಅವರು ಧರ್ಮದಿಂದ ಧರ್ಮಕ್ಕೆ ( ) ಮತಾಂತರ ಆಗಿದ್ದಾರೆ. ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ( ) ಹಾಗೂ ಇತರೆ 12 ಮಂದಿ ತಮಿಳುನಾಡಿನ ಕೂನೂರು ಸಮೀಪ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಘಟನೆಯನ್ನು ಕೆಲವರು ಸಂಭ್ರಮಿಸಿದ್ದರು. ಇದನ್ನು ಕಂಡು ( ) ಕುಟುಂಬ ಈ ನಿರ್ಧಾರ ತೆಗೆದುಕೊಂಡಿದೆ. ರಾಷ್ಟ್ರ ವಿರೋಧಿ ಪ್ರಕ್ರಿಯೆ ಮಾಡಿದವರನ್ನೂ ಕೂಡ ಇಸ್ಲಾಂ ಧರ್ಮದ ನಾಯಕರು ವಿರೋಧಿಸುವುದಿಲ್ಲ. ಈ ಧರ್ಮದಲ್ಲಿ ನಂಬಿಕೆ ಕಳೆದುಕೊಂಡಿರುವೆ ಎಂದು ಅಲಿ ಅಕ್ಬರ್ ಅವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕಂಡು ಕೆಲವರು ಅವರನ್ನು ನಿಂದಿಸಿದ್ದರು. ಹೀಗಾಗಿ ಆ ವಿಡಿಯೋ ಫೇಸ್‌ಬುಕ್‌ನಿಂದ ಡಿಲಿಟ್ ಆಗಿದೆ. ಆದರೆ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ. ಹಿಂದು ಧರ್ಮಕ್ಕೆ ಮತಾಂತರ ಆಗಿದ್ದಕ್ಕೆ ಅಲಿಯನ್ನು ಸಾಕಷ್ಟು ಜನರು ನಿಂದಿಸಿದ್ದು, ಅದಕ್ಕೆ ಅವರು ತನ್ನದೇ ಆದ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಅಲಿ ಅಕ್ಬರ್ ಹೇಳಿದ್ದೇನು? "ನಾನು ಜನ್ಮದಿಂದ ಹಾಕಿದ್ದ ಉಡುಗೆಯನ್ನು ನಾನು ಬಿಚ್ಚಿ ಎಸೆಯುತ್ತಿರುವೆ. ಇಂದಿನ ನಂತರ ನಾನು ಮುಸ್ಲಿಂ ಆಗಿರೋದಿಲ್ಲ. ನಾನು ಭಾರತೀಯ. ಭಾರತದ ವಿರುದ್ಧ ನಗುತ್ತಿರುವ ಇಮೋಜಿಗಳನ್ನು ಕಳಿಸಿದವರಿಗೆ ಇದು ನನ್ನ ಉತ್ತರ. ರಾವತ್ ಸಾವನ್ನು ಸಂಭ್ರಮಿಸುವುದರ ಜೊತೆಗೆ ಸಾಕಷ್ಟು ರಾಷ್ಟ್ರ ವಿರೋಧಿ ಚಟುವಟಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ" ಎಂದು ಅಲಿ ಅಕ್ಬರ್ ಅಭಿಪ್ರಾಯ ಹೊರಹಾಕಿದ್ದಾರೆ. ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿದವರಲ್ಲಿ ಅನೇಕರು ಮುಸ್ಲಿಮರು. ಪಾಕಿಸ್ತಾನದ ವಿರುದ್ಧ ಸಾಕಷ್ಟು ಕ್ರಮಗಳನ್ನು ರಾವತ್ ಮಾಡಿದ್ದರು ಎಂದು ಈ ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಸಾಕಷ್ಟು ಜನರು ದೇಶವನ್ನು ಬಿಪಿನ್ ರಾವತ್ ಅವರನ್ನು ಅಗೌರವಿಸಿದ್ದಾರೆ. ಇದರ ಬಗ್ಗೆ ಮುಸ್ಲಿಂ ಧರ್ಮದ ನಾಯಕರು ಕೂಡ ಏನೂ ಹೇಳಿಲ್ಲ. ಹೀಗಾಗಿ ನಾನು ಈ ಧರ್ಮದಲ್ಲಿ ಇರಲು ಬಯಸೋದಿಲ್ಲ" ಎಂದು ಅಲಿ ಅಕ್ಬರ್ ಹೇಳಿದ್ದಾರೆ. "ನಾನು ಹಾಗೂ ನನ್ನ ಪತ್ನಿ ಹಿಂದು ಧರ್ಮಕ್ಕೆ ಮತಾಂತರ ಆಗಲಿದ್ದೇವೆ, ಅದಕ್ಕೆ ಕೆಲ ಪ್ರಕ್ರಿಯೆಗಳು ನಡೆಯಬೇಕಿವೆ. ಆದರೆ ನನ್ನ ಇಬ್ಬರು ಮಕ್ಕಳಿಗೆ ಮಾತ್ರ ಅವರಿಗೆ ಮನಸ್ಸಿಗೆ ಬಂದಹಾಗೆ ನಿರ್ಧಾರ ತೆಗೆದುಕೊಳ್ಳಲು ಹೇಳುವೆ, ನಾನು ಒತ್ತಡ ಹೇರುವುದಿಲ್ಲ" ಎಂದು ಅಲಿ ಅಕ್ಬರ್ ಹೇಳಿದ್ದಾರೆ. ಸಿನಿಮಾ ಮಾಡುತ್ತಿರುವ ಅಲಿ ಅಕ್ಬರ್ ರಾಜ್ಯ ಬಿಜೆಪಿ ಕಮಿಟಿ ಸದಸ್ಯರಾಗಿದ್ದ ಅಲಿ ಅಕ್ಬರ್ ಅವರು ಕಳೆದ ಅಕ್ಟೋಬರ್‌ನಲ್ಲಿ ಕೆಲ ಭಿನ್ನಾಭಿಪ್ರಾಯದಿಂದ ಈ ಹುದ್ದೆ ತೊರೆದಿದ್ದರು. 2015ರಲ್ಲಿ ಲೈಂಗಿಕವಾಗಿ ನನ್ನ ಮೇಲೆ ದೌರ್ಜನ್ಯ ಆಗಿತ್ತು ಎಂದು ಅಲಿ ಅಕ್ಬರ್ ಹೇಳಿಕೆ ನೀಡಿದ್ದರು. ಸದ್ಯ ಅವರು ಕೇರಳದಲ್ಲಿ ಮಲಬಾರ್ ದಂಗೆ ಕುರಿತಂತೆ ಸಿನಿಮಾ ಮಾಡುತ್ತಿದ್ದಾರೆ.