ನಿರ್ದೇಶಕ ಜೋಗಿ ಪ್ರೇಮ್‌ ಬಗ್ಗೆ ನಟ ದರ್ಶನ್ ಹೇಳಿಕೆ : ಪ್ರತಿಕ್ರಿಯೆ ನೀಡಿದ ನಟಿ ರಕ್ಷಿತಾ ಪ್ರೇಮ್

ನಟ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರು ನಿರ್ದೇಶಕ ಪ್ರೇಮ್ ಕುರಿತಾಗಿ ಕೆಲ ಮಾತುಗಳನ್ನು ಆಡಿದ್ದಾರೆ. ಅವರ ಮಾತುಗಳನ್ನು ಬೇಸರಗೊಂಡ ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ನಡುವೆ ರಕ್ಷಿತಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ನಿರ್ದೇಶಕ ಜೋಗಿ ಪ್ರೇಮ್‌ ಬಗ್ಗೆ ನಟ ದರ್ಶನ್ ಹೇಳಿಕೆ : ಪ್ರತಿಕ್ರಿಯೆ ನೀಡಿದ ನಟಿ ರಕ್ಷಿತಾ ಪ್ರೇಮ್
Linkup
ಮೈಸೂರಿನ ತೋಟದಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿರುವ 'ಚಾಲೆಂಜಿಂಗ್ ಸ್ಟಾರ್' ನಟ ಅವರು ಉಮಾಪತಿ ಶ್ರೀನಿವಾಸ್ ಅವರನ್ನು ಜೋಗಿ ಪ್ರೇಮ್ ಪರಿಚಯ ಮಾಡಿಕೊಟ್ಟಿದ್ದಾರೆ, ಸಿನಿಮಾ ಡೇಟ್ಸ್ ವಿಚಾರದಲ್ಲಿ ಜೋಗಿ ಪ್ರೇಮ್‌ಗೆ ಎರಡು ಕೊಂಬೈತಾ? ಪ್ರೇಮ್ ಪುಡಂಗಾನಾ? 'ಕರಿಯ' ಸಿನಿಮಾ ಟೈಮ್‌ನಲ್ಲಿ ಪ್ರೇಮ್ ಏನು ಅಂತ ನೋಡಿದ್ದೇವೆ ಅಂತ ದರ್ಶನ್ ಹೇಳಿದ್ದರು. ಆ ವಿಚಾರದ ಬಗ್ಗೆ ಪ್ರೇಮ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ರಕ್ಷಿತಾ ಕೂಡ ಪರೋಕ್ಷವಾಗಿ ಮಾತನಾಡಿದ್ದಾರೆ. "ಇದು ನಮ್ಮ ಚಿತ್ರರಂಗ. ನಮ್ಮ ಮನೆ, ಇಲ್ಲಿ ಯಾರೂ ದೊಡ್ಡವರಲ್ಲ, ಚಿಕ್ಕವರಲ್ಲ. ಅವರ ಕೆಲಸ ಚಿಕ್ಕವರು, ದೊಡ್ಡವರನ್ನಾಗಿ ಮಾಡಬಹುದು. ನಾವೆಲ್ಲರೂ ಪರಸ್ಪರ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ. ಈ ರೀತಿ ಘಟನೆಗಳು ನಡೆದಾಗ ಬೇಸರ ಆಗುತ್ತದೆ, ದುರದೃಷ್ಟಕರ. ನಾನು ಜನರನ್ನು ಪ್ರೀತಿಸುವೆ" ಎಂದು ನಟಿ ಅವರು ಇನ್‌ಸ್ಟಾಗ್ರಾಮ್ ಸ್ಟೇಟಸ್ ಹಾಕಿಕೊಂಡು ಪರೋಕ್ಷವಾಗಿ ದರ್ಶನ್ ಹಾಗೂ ಪ್ರೇಮ್ ನಡುವೆ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಾನು 'ಕರಿಯ' ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ, ನಂಗ್ ಕೊಂಬು ಇರ್ಲಿಲ್ಲ. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್, ಅಂಬರೀಷ್, ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಅವರೆಲ್ಲ ನಾನು ಒಬ್ಬ ಒಳ್ಳೆ ನಿರ್ದೇಶಕ ಅಂತ ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗಲೂ ನನಗೆ ಕೊಂಬು ಬರಲಿಲ್ಲ. ನಾನು ನಂದೇ ಆದ್ ಸ್ಟೈಲ್‌ನಲ್ಲಿ ಸಿನಿಮಾ ಮಾಡ್ಕೊಂಡು ಬಂದವನು. ಉಮಾಪತಿ ಶ್ರೀನಿವಾಸ್‌, ನಾನು, ನೀವು ಸೇರಿ ಸಿನಿಮಾ ಮಾಡಲು ಡೇಟ್ಸ್ ಸಮಸ್ಯೆ ಆಗತ್ತೆ ಅಂದಾಗ ಬೇರೆ ನಿರ್ದೇಶಕರಿಗೆ ಸಿನಿಮಾ ಮಾಡಲು ಅವಕಾಶ ಮಾಡಿಕೊಟ್ಟೆ. 'ರಾಬರ್ಟ್' ಹಿಟ್ ಆದಾಗ ಖುಷಿಪಟ್ಟೆ" ಎಂದು ಪ್ರೇಮ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿ ದರ್ಶನ್‌ಗೆ ಉತ್ತರ ನೀಡಿದ್ದರು. ಒಟ್ಟಿನಲ್ಲಿ ನಟ ದರ್ಶನ್‌ಗೆ ಅರುಣಾ ಕುಮಾರಿ ಅವರು 25 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಯುತ್ತಿದೆ. ನಟ ದರ್ಶನ್, ಉಮಾಪತಿ ಶ್ರೀನಿವಾಸ್, ಇಂದ್ರಜಿತ್ ಲಂಕೇಶ್, ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ಅವರು ನೀಡುತ್ತಿರುವ ಹೇಳಿಕೆಗಳು ಸಮಸ್ಯೆಯನ್ನು ಇನ್ನಷ್ಟು ಗಂಭೀರ ಮಾಡುತ್ತಿರೋದಂತೂ ಸತ್ಯ.