ಆಕ್ಸಿಜನ್ ಪೂರೈಕೆ ಮಾಡಲು ಮೆಚ್ಚಿನ ಬೈಕ್ ಮಾರಿದ 'ಸನಂ ತೇರಿ ಕಸಮ್' ನಟ ಹರ್ಷವರ್ಧನ್ ರಾಣೆ!

ಈಗಾಗಲೇ ನಟ ಸೋನು ಸೂದ್ ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಸಲುವಾಗಿ ಅವರ ಆಸ್ತಿಗಳನ್ನು ಕೂಡ ಮಾರಿಕೊಂಡಿದ್ದಾರೆ, ಅಂತೆಯೇ ಬಾಲಿವುಡ್ ನಟ ಹರ್ಷವರ್ಧನ್ ರಾಣೆ ಅವರು ನೆಚ್ಚಿನ ಬೈಕ್ ಮಾರಿದ್ದಾರೆ.

ಆಕ್ಸಿಜನ್ ಪೂರೈಕೆ ಮಾಡಲು ಮೆಚ್ಚಿನ ಬೈಕ್ ಮಾರಿದ 'ಸನಂ ತೇರಿ ಕಸಮ್' ನಟ ಹರ್ಷವರ್ಧನ್ ರಾಣೆ!
Linkup
ಕೊರೊನಾ ವೈರಸ್‌ ಸೋಂಕಿನಿಂದ ಎಲ್ಲರೂ ಕಷ್ಟಪಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಕೊರೊನಾ ವಾರಿಯರ್ಸ್‌, ರೋಗಿಗಳಿಗೆ ಆಹಾರ, ಆರ್ಥಿಕ ಸಹಾಯ, ಬೆಡ್ , ವ್ಯವಸ್ಥೆ ಮಾಡಿದ್ದರು. 'ಸನಮ್ ತೇರಿ ಕಸಮ್' ಸಿನಿಮಾ ಖ್ಯಾತಿಯ ನಟ ಅವರು ಆಕ್ಸಿಜನ್ ಪೂರೈಕೆ ಮಾಡುವ ಸಲುವಾಗಿ ಮೆಚ್ಚಿನ ಬೈಕ್ ಮಾರಿದ್ದಾರೆ. ತೆಲುಗು ಹಾಗೂ ಹಿಂದಿ ಸಿನಿಮಾ ಮೂಲಕ ಖ್ಯಾತಿ ಪಡೆದಿರುವ ಹರ್ಷವರ್ಧನ್ ರಾಣೆ ಅವರು ರಾಯಲ್ ಎನ್‌ಫೀಲ್ಡ್ ಬೈಕ್‌ ಜೊತೆಗಿನ ಫೋಟೋ ಹಂಚಿಕೊಂಡು ಈ ವಿಷಯ ತಿಳಿಸಿದ್ದಾರೆ. "ನನ್ನ ಬೈಕ್ ನೀಡಿ ಆಕ್ಸಿಜನ್ ಪಡೆಯಲು ನಿರ್ಧಾರ ಮಾಡಿದ್ದೇನೆ. ಇದರಿಂದ ನಾವು ಅವಶ್ಯಕತೆಯಿದ್ದವರಿಗೆ ಆಕ್ಸಿಜನ್ ನೀಡಬಹುದು. ಹೈದರಾಬಾದ್‌ನಲ್ಲಿ ಉತ್ತಮ ಆಕ್ಸಿಜನ್ ಸಾಂದ್ರಕಗಳನ್ನು ಪಡೆಯಲು ಸಹಾಯ ಮಾಡಿ" ಎಂದು ಹರ್ಷವರ್ಧನ್ ರಾಣೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. 'ತಕಿತ ತಕಿತ', 'ಪ್ರೇಮ ಇಷ್ಕ್ ಕಾದಲ್', 'ಅನಾಮಿಕ' ಮುಂತಾದ ಪ್ರಾಜೆಕ್ಟ್ ಮೂಲಕ ಹರ್ಷವರ್ಧನ್ ರಾಣೆ ಹೆಸರ ಮಾಡಿದ್ದಾರೆ. 2016ರಲ್ಲಿ ತೆರೆಕಂಡ ಸಿನಿಮಾ 'ಸನಮ್ ತೇರಿ ಕಸಂ' ಚಿತ್ರ ಅವರ ಮೊದಲ ಹಿಂದಿ ಸಿನಿಮಾವಾಗಿದ್ದು, ಹಿಟ್ ಆಗಿತ್ತು. 'ಪಲ್ತಾನ್', 'ತೈಶ್' ಸಿನಿಮಾಗಳಲ್ಲಿಯೂ ಹರ್ಷವರ್ಧನ್ ಕಾಣಿಸಿಕೊಂಡಿದ್ದರು. ಕೆಲ ತಿಂಗಳುಗಳ ಹಿಂದೆ ಲವ್ ಬ್ರೇಕಪ್ ವಿಚಾರದಲ್ಲಿ ಹರ್ಷವರ್ಧನ್ ಸುದ್ದಿಯಾಗಿದ್ದರು. ಕಿಮ್ ಶರ್ಮಾ ಜೊತೆಗೆ ಹರ್ಷವರ್ಧನ್ ಪ್ರೀತಿ ಮಾಡುತ್ತಿದ್ದರು, ಯಾವುದೋ ಕಾರಣಕ್ಕೆ ಅವರ ಲವ್ ಮುರಿದು ಬಿದ್ದಿತ್ತು. 12 ವರ್ಷಗಳ ಕಾಲ ಅವರು ಸಿಂಗಲ್ ಆಗಿದ್ದರಂತೆ. ಇನ್ನು ನನ್ನ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಲು ಇಷ್ಟವಿಲ್ಲ ಎಂದು ಹೇಳಿರುವ ಹರ್ಷವರ್ಧನ್ ಅವರ ಸಿನಿಮಾಗಳು ಇನ್ನು ರಿಲೀಸ್ ಆಗಬೇಕಿವೆ. 2020ರಲ್ಲಿ 'ತೈಶ್' ರಿಲೀಸ್ ಆಗಿತ್ತು.