Ninna Sanihake: ನಟ ರಾಮ್‌ಕುಮಾರ್ ಪುತ್ರಿಯ ಮೊದಲ ಸಿನಿಮಾದ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ರಾಜ್‌ಕುಮಾರ್ ಮೊಮ್ಮಗಳು, ನಟ ರಾಮ್‌ಕುಮಾರ್ ಪುತ್ರಿ ಧನ್ಯಾ ನಟಿಸಿರುವ 'ನಿನ್ನ ಸನಿಹಕೆ' ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಈ ಚಿತ್ರದ ಮೇಲೆ ನಿರೀಕ್ಷೆ ಇಟ್ಟು ಕಾಯುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್.

Ninna Sanihake: ನಟ ರಾಮ್‌ಕುಮಾರ್ ಪುತ್ರಿಯ ಮೊದಲ ಸಿನಿಮಾದ ಬಿಡುಗಡೆಗೆ ಮುಹೂರ್ತ ಫಿಕ್ಸ್‌
Linkup
ಡಾ. ರಾಜ್‌ಕುಮಾರ್ ಮೊಮ್ಮಗಳು, ನಟ ರಾಮ್‌ಕುಮಾರ್ ಮಗಳು ಧನ್ಯಾ ನಟನೆಯ, ಸೂರಜ್‌ ನಟಿಸಿ, ನಿರ್ದೇಶನದ ಮಾಡಿರುವ '' ಸಿನಿಮಾ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾ ವರಮಹಾಲಕ್ಷ್ಮಿ ಹಬ್ಬದಂದು ರಾಜ್ಯದಾದ್ಯಂತ ರಿಲೀಸ್ ಆಗಬೇಕಿತ್ತು.ವೀಕೆಂಡ್‌ ಲಾಕ್‌ಡೌನ್‌ ಮತ್ತು ನೈಟ್ ಕರ್ಫ್ಯೂ ಇದ್ದಿದ್ದರಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗಿತ್ತು. ಇದೀಗ ಸರ್ಕಾರ ಶೇ.100 ಆಸನ ಭರ್ತಿಗೆ ಅವಕಾಶ ನೀಡಿರುವುದರಿಂದ ಚಿತ್ರತಂಡ ಧೈರ್ಯವಾಗಿ ಮುನ್ನುಗ್ಗಿದೆ. ಅಕ್ಟೋಬರ್ 8ರಂದು ರಾಜ್ಯಾದ್ಯಂತ ಸಿನಿಮಾವನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಈ ಹಿಂದೆ ಮಾಹಿತಿ ನೀಡಿದ್ದ ಧನ್ಯಾ , 'ಈ ಸಿನಿಮಾದಲ್ಲಿ ನಾನು ಅಮೃತಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಥೆ ಹೇಳಿ ಎಲ್ಲ ಓಕೆ ಆದ್ಮೇಲೆ ಒಂದೆರಡು ತಿಂಗಳು ವರ್ಕ್ಶಾಪ್‌ ಮಾಡಿಸಿದ್ದರು. ಸಿನಿಮಾದ ಕಥೆಯಲ್ಲಿರುವ ಸೀನ್‌, ಕಥೆಯಲ್ಲಿ ಇಲ್ಲದ ಸೀನ್‌ಗಳನ್ನು ಮಾಡಿಸಿದ್ದರು. ಈ ವರ್ಕ್‌ಶಾಪ್‌ನಲ್ಲಿ ನಾನು ಸೂರಜ್‌ಗೆ ತುಂಬಾ ಹತ್ತಿರದ ಸ್ನೇಹಿತೆಯಾದೆ. ಹಾಗಾಗಿ ಇದರಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಆಗಿದೆ. ಇಂತಹದ್ದೇ ಸಿನಿಮಾ ಎನ್ನುವುದಕ್ಕಿಂತ ಎಲ್ಲ ರೀತಿಯ ಪಾತ್ರಗಳನ್ನು ನಿರ್ವಹಿಸಿ, ಎಲ್ಲರಿಗೂ ಇಷ್ಟವಾಗಬೇಕು ಎಂಬ ಆಸೆ ಇದೆ. ನಮ್ಮ ಮನೆಯಿಂದ ಯಾವ ಮಹಿಳೆಯೂ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಬಂದಿಲ್ಲ. ನಾನು ಮೊದಲು ಬರುತ್ತೇನೆ ಎಂದಾಗ ಎಲ್ಲರೂ ಹೇಗೆ ರಿಯಾಕ್ಟ್ ಮಾಡುತ್ತಾರೆ ಎಂಬ ಭಯ ಇತ್ತು. ಆದರೆ ಅವರು ನಿನಗೆ ಇಷ್ಟವಿದ್ದರೆ ಅಲ್ಲಿ ಕೆಲಸ ಮಾಡು ಎಂದು ಸಪೋರ್ಟ್‌ ಮಾಡಿದರು. ಪ್ರತಿಯೊಬ್ಬರೂ ಸಿನಿಮಾದ ಒಳ ಹೊರಗನ್ನು ಹೇಳಿಕೊಟ್ಟರು' ಎಂದು ಹೇಳಿಕೊಂಡಿದ್ದರು. ವೈಟ್ & ಗ್ರೇ ಪಿಕ್ಚರ್ಸ್ ಲಾಂಛನದಲ್ಲಿ ಅಕ್ಷಯ್ ರಾಜಶೇಖರ್ ಹಾಗೂ ರಂಗನಾಥ ಕುಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ 'ನಿನ್ನ ಸನಿಹಕೆ' ಚಿತ್ರದ ಟ್ರೈಲರ್ ಚಿತ್ರದ ಕುರಿತಂತೆ ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಹುಟ್ಟುಹಾಕಿದೆ. ಚಿತ್ರಮಂದಿರಗಳಲ್ಲಿ ಶೇ. 100 ಆಸನ ಭರ್ತಿಗೆ ಅವಕಾಶ ಕೊಟ್ಟ ಬೆನ್ನಲ್ಲೇ 'ನಿನ್ನ ಸನಿಹಕೆ' ಚಿತ್ರವನ್ನು ಅ.8ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ದತೆ ಮಾಡಿಕೊಂಡಿದ್ದಾರೆ. ಚಿತ್ರದ ನಾಯಕ ಆದಿತ್ಯ ಹಾಗೂ ನಾಯಕಿ ಅಮೃತಾ ಜೀವನದಲ್ಲಿ ನಡೆಯೋ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಇರುವ ಈ ಚಿತ್ರಕ್ಕೆ ಸೂರಜ್ ಗೌಡ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಆಕ್ಷನ್-ಕಟ್ ಹೇಳಿದ್ದಾರೆ. ಅಲ್ಲದೆ ಚಿತ್ರದ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಮಂಜುನಾಥ್ ಗೌಡ, ಅರುಣಾ ಬಾಲರಾಜ್, ಚಿತ್ಕಲಾ ಬಿರಾದಾರ್, ಕರಿಸುಬ್ಬು, ರಜನಿಕಾಂತ್, ಸೌಮ್ಯ ಭಟ್, ನಂದಗೋಪಾಲ್ ನಟಿಸಿದ್ದಾರೆ. ಅಭಿಲಾಷ್ ಕಲತಿ ಅವರ ಛಾಯಾಗ್ರಹಣ, ರಘು ದೀಕ್ಷಿತ್ ಅವರ ಸಂಗೀತ ಸಂಯೋಜನೆ, ವಾಸುಕಿ ವೈಭವ್ ಅವರ ಸಾಹಿತ್ಯವಿದೆ. ಈಗಾಗಲೇ ಹಾಡುಗಳು ದೊಡ್ಡ ಹಿಟ್ ಆಗಿವೆ. ಸುರೇಶ್ ಆರ್ಮುಗಂ ಅವರ ಸಂಕಲನ, ವರದರಾಜ ಕಾಮತ್ ಅವರ ಕಲಾ ನಿರ್ದೇಶನ, ಮೋಹನ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.