'ಕೋಟಿಗೊಬ್ಬ 3' ಈವರೆಗೂ ಮಾಡಿದ ಕಲೆಕ್ಷನ್‌ ಎಷ್ಟು? ಬಾಕ್ಸ್ ಆಫೀಸ್‌ನಲ್ಲಿ 'ಕಿಚ್ಚ'ನ ಹೊಸ ದಾಖಲೆ!

ದಸರಾ ಹಬ್ಬದ ಪ್ರಯುಕ್ತ ತೆರೆಕಂಡಿರುವ 'ಕೋಟಿಗೊಬ್ಬ 3' ಚಿತ್ರವು ಬಾಕ್ಸ್ ಅಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಮೊದಲ ದಿನವೇ ಈ ಸಿನಿಮಾ 12.50 ಕೋಟಿ ರೂ. ಗಳಿಸಿತ್ತು. ಈಗ 4 ದಿನಗಳ ಕಲೆಕ್ಷನ್ ರಿಪೋರ್ಟ್ ಇಲ್ಲಿದೆ.

'ಕೋಟಿಗೊಬ್ಬ 3' ಈವರೆಗೂ ಮಾಡಿದ ಕಲೆಕ್ಷನ್‌ ಎಷ್ಟು? ಬಾಕ್ಸ್ ಆಫೀಸ್‌ನಲ್ಲಿ 'ಕಿಚ್ಚ'ನ ಹೊಸ ದಾಖಲೆ!
Linkup
'ಕಿಚ್ಚ' ಸುದೀಪ್, ಮಡೋನ್ನಾ ಸೆಬಾಸ್ಟಿಯನ್, ರವಿಶಂಕರ್, ನವಾಬ್ ಶಾ ನಟಿಸಿರುವ '' ಸಿನಿಮಾವು ಅ.15ರಂದು ರಾಜ್ಯಾದ್ಯಂತ ತೆರೆಕಂಡಿತ್ತು. ಅಂದುಕೊಂಡಿದ್ದಕ್ಕಿಂತಲೂ ಒಂದು ದಿನ ತಡವಾಗಿ ತೆರೆಕಂಡರೂ ಕೂಡ ಬಾಕ್ಸ್ ಆಫೀಸ್‌ನಲ್ಲಿ ಜಾದೂ ಮಾಡುತ್ತಿದೆ ಸಿನಿಮಾ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಮೊದಲ ದಿನವಾದ ಶುಕ್ರವಾರ ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಆ ಪರಿಣಾಮ ಸಿನಿಮಾವು ಫಸ್ಟ್ ಡೇ ಸುಮಾರು 12.50 ಕೋಟಿ ರೂ.ಗಳಷ್ಟು ಗಳಿಕೆ ಮಾಡಿತ್ತು. ಇದೀಗ ಶುಕ್ರವಾರದಿಂದ ಸೋಮವಾರದವರೆಗಿನ 4 ದಿನಗಳ ಗಳಿಕೆ ಬಹಿರಂಗಗೊಂಡಿದೆ! 4 ದಿನಕ್ಕೆ 40.5 ಕೋಟಿ ರೂ.!'ಕೋಟಿಗೊಬ್ಬ 3' ಸಿನಿಮಾವು ರಾಜ್ಯಾದ್ಯಂತ ಸುಮಾರು 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, 4 ದಿನಗಳಿಗೆ ಈ ಸಿನಿಮಾ ಬರೋಬ್ಬರಿ 40.50 ಕೋಟಿ ರೂ. ಕಲೆಕ್ಷನ್‌ (Gross) ಆಗಿದೆ. ಕೊರೊನಾ ಭಯದ ನಡುವೆಯೂ ಸಿನಿಮಾಕ್ಕೆ ಪ್ರೇಕ್ಷಕರು ತೋರಿರುವ ಅಭೂತಪೂರ್ವ ರೆಸ್ಪಾನ್ಸ್‌ನ ಪ್ರತಿಫಲ ಇದಾಗಿದೆ. ಮೊದಲ ದಿನವೇ 12.50 ಕೋಟಿ ರೂ. ಗಳಿಕೆ ಆಗಿದ್ದರಿಂದ, ಈ ಪ್ರಮಾಣದ ಗಳಿಕೆಯಾಗಿದೆ ಎನ್ನಲಾಗುತ್ತಿದೆ. ಸಹಜವಾಗಿಯೇ ಇದು ನಿರ್ಮಾಪಕರು ಮತ್ತು ವಿತರಕರ ಖುಷಿಗೆ ಕಾರಣವಾಗಿದೆ. ತೆಲುಗು ವರ್ಷನ್ ಟ್ರೈಲರ್ ಲಾಂಚ್ಇನ್ನು, 'ಕೋಟಿಗೊಬ್ಬ 3' ಚಿತ್ರವನ್ನು ತೆಲುಗಿನಲ್ಲೂ ರಿಲೀಸ್ ಮಾಡುವುದಾಗಿ ಈ ಹಿಂದೆಯೇ ನಿರ್ಮಾಪಕರು ಹೇಳಿಕೊಂಡಿದ್ದರು. 'ಕೆ3-ಕೋಟಿಕೊಕ್ಕಡು' ಹೆಸರಿನಲ್ಲಿ ಸಿನಿಮಾವು ತೆಲುಗಿನಲ್ಲಿ ರಿಲೀಸ್ ಆಗಲಿದೆ. ಸದ್ಯ ತೆಲುಗು ವರ್ಷನ್‌ನ ಟ್ರೈಲರ್ ಲಾಂಚ್ ಆಗಿದ್ದು, ನವೆಂಬರ್‌ನಲ್ಲಿ ಸಿನಿಮಾವನ್ನು ತೆರೆಗೆ ತರಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಟಾಲಿವುಡ್‌ನಲ್ಲಿಯೂ ಸುದೀಪ್‌ಗೆ ದೊಡ್ಡಮಟ್ಟದ ಅಭಿಮಾನಿ ಬಳಗ ಇರುವುದರಿಂದ, ಅಲ್ಲಿಯೂ ಈ ಸಿನಿಮಾ ಸದ್ದು ಮಾಡುವ ಸಾಧ್ಯತೆಗಳಿವೆ. ಆರಂಭದಲ್ಲೇ ವಿಘ್ನ ಉಂಟಾಗಿತ್ತು!ಮೊದಲು ಗುರುವಾರ (ಅ.14) ಈ ಸಿನಿಮಾವನ್ನು ತೆರೆಗೆ ತರುವುದಾಗಿ ನಿರ್ಮಾಪಕರು ಘೋಷಣೆ ಮಾಡಿದ್ದರು. ಆದ್ರೆ ಅದು ಸಾಧ್ಯವಾಗಲಿಲ್ಲ. ಗುರುವಾರದ ಬದಲು ಶುಕ್ರವಾರ ಸಿನಿಮಾ ತೆರೆಗೆ ಬಂದಿತ್ತು. ಕೆಲ ಏರಿಯಾಗಳ ವಿತರಕರು ಅಂದುಕೊಂಡ ಸಮಯಕ್ಕೆ ಹಣ ನೀಡದೇ ಇದ್ದಿದ್ದರಿಂದ ಈ ರೀತಿ ಆಯ್ತು ಅಂತ ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ರು. ಅಷ್ಟೇ ಅಲ್ಲದೆ, 'ಸಿನಿಮಾ ರಿಲೀಸ್ ಮಾಡದಿರಲು ಕೆಲವರು ಷಡ್ಯಂತ್ರ ಮಾಡಿದ್ದಾರೆ, ಅದರ ಹಿಂದೆ ಹಲವಾರು ಕಾರಣಗಳಿವೆ, ಅದು ಕಿಚ್ಚ ಸುದೀಪ್‌ಗೂ ಗೊತ್ತು. ವಿತರಕರು ಮೋಸ ಮಾಡಿದ್ದಾರೆ. ವಿತರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಮಾನನಷ್ಟ ಮೊಕದ್ದಮೆ ದಾಖಲು ಮಾಡುತ್ತೇನೆ. ವಿತರಕರಿಂದ ನನಗೆ 7-10 ಕೋಟಿ ನಷ್ಟ ಉಂಟಾಗಿದೆ' ಎಂದು ಅವರು ಗರಂ ಆಗಿದ್ರು ಕೂಡ! ಅತ್ತ, ವಿತರಕ ಖಾಜಾಪೀರ್, 'ಸೂರಪ್ಪ ಬಾಬು ನಮಗೆ ಧಮ್ಕಿ ಹಾಕಿ, ಬೆದರಿಸಿದ್ದಾರೆ. ಅವರು ತುಂಬಾ ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದಾರೆ. ನನಗೆ, ನನ್ನ ಕುಟುಂಬಕ್ಕೆ ಏನಾದರೂ ತೊಂದರೆ ಆದರೆ ಅದಕ್ಕೆ 'ಕೋಟಿಗೊಬ್ಬ 3' ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಅವರೇ ಕಾರಣ' ಅಂತ ಆರೋಪ ಮಾಡಿದ್ದರು. ಆ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಸೂರಪ್ಪ ಬಾಬು (ಎಂ.ಬಿ. ಬಾಬು) ವಿರುದ್ಧ ಐಪಿಸಿ ಕಲಂ 504, 506 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.