ನಾಚಿಕೆ ಆಗುತ್ತೆ ನಮಗೆ ಈ ತರಹ ನಿಂತು ಮಾತನಾಡೋಕೆ: ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

‘’ನನ್ನನ್ನ ಕಳುಹಿಸಿ ಅವನನ್ನು ಕರೆಯಿಸಿಕೊಂಡುಬಿಡಿ ಪ್ಲೀಸ್.. ನಾನು ಇರುವುದಿಲ್ಲ’’ ಎನ್ನುತ್ತಾ ರಾಘಣ್ಣ ಗದ್ಗದಿತರಾಗುತ್ತಿದ್ದಂತೆಯೇ, ಅಣ್ಣ ಶಿವರಾಜ್‌ ಕುಮಾರ್ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದರು. ಕಣ್ಣೀರು ಹಾಕುತ್ತಲೇ ‘ಪುನೀತ್ ನಮನ’ ವೇದಿಕೆಗೆ ಏರಿದ ಶಿವರಾಜ್ ಕುಮಾರ್, ‘’ನಾಚಿಕೆ ಆಗುತ್ತೆ ನಮಗೆ ಈ ತರಹ ನಿಂತು ಮಾತನಾಡೋಕೆ’’ ಎಂದು ನೋವಿನಲ್ಲೇ ನುಡಿದರು.

ನಾಚಿಕೆ ಆಗುತ್ತೆ ನಮಗೆ ಈ ತರಹ ನಿಂತು ಮಾತನಾಡೋಕೆ: ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ
Linkup
‘’ನನ್ನನ್ನ ಕಳುಹಿಸಿ ಅವನನ್ನು ಕರೆಯಿಸಿಕೊಂಡುಬಿಡಿ ಪ್ಲೀಸ್.. ನಾನು ಇರುವುದಿಲ್ಲ’’ ಎನ್ನುತ್ತಾ ರಾಘಣ್ಣ ಗದ್ಗದಿತರಾಗುತ್ತಿದ್ದಂತೆಯೇ, ಅಣ್ಣ ಶಿವರಾಜ್‌ ಕುಮಾರ್ ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದರು. ಕಣ್ಣೀರು ಹಾಕುತ್ತಲೇ ‘’ ವೇದಿಕೆಗೆ ಏರಿದ , ‘’ನಾಚಿಕೆ ಆಗುತ್ತೆ ನಮಗೆ ಈ ತರಹ ನಿಂತು ಮಾತನಾಡೋಕೆ’’ ಎಂದು ನೋವಿನಲ್ಲೇ ನುಡಿದರು. ತಮ್ಮ ಕಿರಿಯ ಸಹೋದರ ಪುನೀತ್ ರಾಜ್‌ಕುಮಾರ್‌ರನ್ನ ಕಳೆದುಕೊಂಡಿರುವ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್‌ ಅವರಿಗೆ ಅತೀವ ನೋವುಂಟಾಗಿದೆ. ಭಾರದ ಹೃದಯದಲ್ಲೇ ‘ಪುನೀತ್ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿವಣ್ಣ ಮತ್ತು ರಾಘಣ್ಣ ಪುನೀತ್ ರಾಜ್‌ಕುಮಾರ್‌ರನ್ನ ನೆನೆದು ಭಾವುಕರಾದರು. ಅರಮನೆ ಮೈದಾನದಲ್ಲಿ ನಡೆದ ‘ಪುನೀತ್ ನಮನ’ ಕಾರ್ಯಕ್ರಮ ಇಂದು ಪುನೀತ್ ರಾಜ್‌ಕುಮಾರ್ ಅವರಿಗೆ ನಮನ ಸಲ್ಲಿಸುವ ಸಲುವಾಗಿ ಕನ್ನಡ ಚಿತ್ರರಂಗದ ಕಡೆಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ‘ಪುನೀತ್ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್‌ ಕುಟುಂಬ, ತಾರೆಯರು, ರಾಜಕಾರಣಿಗಳು ಪಾಲ್ಗೊಂಡಿದ್ದರು. ಶಿವರಾಜ್ ಕುಮಾರ್ ಹೇಳಿದ್ದೇನು? ‘’ತುಂಬಾ ಕಷ್ಟ ಆಗುತ್ತೆ ಮಾತನಾಡೋಕೆ. ನಾಚಿಕೆ ಆಗುತ್ತೆ ನಮಗೆ ಈ ತರಹ ನಿಂತು ಮಾತನಾಡೋಕೆ. ಅವನ ಬಗ್ಗೆ ಹೆಚ್ಚು ಮಾತನಾಡಿ ಮಾತನಾಡಿ ನನ್ನ ಕಣ್ಣ ದೃಷ್ಟಿಯೇ ಬಿತ್ತಾ ಅಂತ ನನಗೇ ಅನಿಸುತ್ತದೆ. ನನ್ನ ತಮ್ಮನಿಗೆ ನನ್ನ ದೃಷ್ಟಿಯೇ ಆಗೋಯ್ತಾ ಅನಿಸುತ್ತದೆ. ಯಾವುದೇ ಸಮಾರಂಭ, ಯಾವುದೇ ಸಂದರ್ಶನ ತಗೊಳ್ಳಿ.. ಏನು ಅಷ್ಟೊಂದು ಹೊಗಳುತ್ತೀರಾ ಅವನನ್ನ ಅಂತ ನನ್ನನ್ನ ಕೇಳೋರು. ಅವನು ಹೊಗಳುವ ಪದಾರ್ಥ ತಾನೆ. ನನಗೆ ಸ್ಫೂರ್ತಿ ನೀಡಿದ್ದೇ ಅವನು. ನನಗೆ ಆಕ್ಟ್ ಮಾಡೋಕೆ ಇಂಟ್ರೆಸ್ಟ್ ಇರಲಿಲ್ಲ. ಅವನು ನನಗೆ ಸ್ಫೂರ್ತಿ ತುಂಬಿದ. ಆದರೆ, ಅವನಿಗೆ ಸ್ಫೂರ್ತಿ ನಾನು ಅಂತ ಅವನು ಹೇಳ್ತಾನೆ. ಅದು ಅವನ ದೊಡ್ಡ ಗುಣ ಅಷ್ಟೇ. ನನ್ನ ತಮ್ಮ ರಾಯಲ್ ಆಗಿ ಹುಟ್ಟಿದ, ರಾಯಲ್ ಆಗೇ ಇರ್ತಾನೆ ಅಂತ ಹೇಳಿದ್ದೆ. ದೇವರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಒಳ್ಳೆಯವರನ್ನ ಹೆಚ್ಚು ದಿನ ಇರಲು ದೇವರು ಬಿಡಲಿಲ್ಲ. ಅದಕ್ಕೆ ಅವನ ಬಳಿ ಕರೆಯಿಸಿಕೊಂಡು ಬಿಟ್ಟ’’ ‘’ಅಪ್ಪು ನಮ್ಮಲ್ಲಿ ಇದ್ದಾನೆ. ಅವನನ್ನ ಜೀವಂತವಾಗಿ ಇರಿಸಿಕೊಳ್ಳಲು ನಾವು ಪ್ರಯತ್ನ ಪಡಬೇಕು. ದೀಪ ಹಚ್ಚುವುದರಲ್ಲಿ ನನಗೆ ನಂಬಿಕೆ ಇಲ್ಲ. ಅದನ್ನ ಅಪ್ಪಾಜಿ-ಅಮ್ಮನಿಗೆ ಮಾಡಲು ನನಗೆ ಇಷ್ಟ ಇಲ್ಲ. ಇನ್ನು ಅಪ್ಪುಗೆ ಮಾಡೋಕೆ ಇಷ್ಟ ಪಡ್ತೀನಾ? ಇವತ್ತು ನಾನು, ರಾಘು ಅತ್ತಿದ್ದನ್ನ ನೋಡಿದ್ರೆ ಅವನು ಎಷ್ಟು ಸಂಕಟ ಪಡುತ್ತಾನೋ? ಎಲ್ಲರಿಗೂ ಹೋಗುವ ಟೈಮ್ ಬರುತ್ತೆ. ಆದರೆ, ಇವನಿಗೆ ಇಷ್ಟು ಬೇಗ ಬಂತಲ್ಲಾ ಅಂತ ಬೇಜಾರು ಅಷ್ಟೇ’’ ‘’ವಿಶಾಲ್‌ರನ್ನು ನೋಡಿದಾಗಲೆಲ್ಲಾ ನನ್ನ ತಮ್ಮನನ್ನ ನೋಡಿದ ಹಾಗೆ ಆಗುತ್ತದೆ. ಅವರ ಬಾಡಿ ಲ್ಯಾಂಗ್ವೇಜ್, ಸ್ಟೈಲ್ ಒಂದೇ. ಇವತ್ತು ಅವರೆಲ್ಲಾ ನಾವಿದ್ದೀವಿ ಅಂತ ಹೇಳಿದಾಗ ಖುಷಿ ಆಗುತ್ತದೆ. ಅಪ್ಪುಗೆ ‘’ಮೈ ಶಾಯರ್ ತೋ ನಹೀ…’’ ಹಾಡು ತುಂಬಾ ಇಷ್ಟ. ಅಪ್ಪುಗಾಗಿ ಈ ಹಾಡು ಹಾಡ್ತಿದ್ದೀನಿ…’’ ಎಂದು ಶಿವರಾಜ್‌ ಕುಮಾರ್ ಹಾಡನ್ನ ಹಾಡಿದರು.