ಕಾಂಗ್ರೆಸ್ ಎಂಎಲ್‌ಎಯನ್ನು ಚೀನಾದವನು ಎಂದ ಯೂಟ್ಯೂಬರ್‌; ಮೌನ ಮುರಿದ ನಟ ರಾಜ್‌ಕುಮಾರ್ ರಾವ್!

ಅರುಣಾಚಲ ಪ್ರದೇಶದ ಎಂಎಲ್‌ಎ ನಿನೊಂಗ್ ಎರಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪಬ್ಜಿ ಕುರಿತಾಗಿ ಒಂದು ವಿನಂತಿ ಮಾಡಿದ್ದರು. ಆ ಬಗ್ಗೆ ಯೂಟ್ಯೂಬರ್ ಪಾರಸ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದು ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಏನದು ವಿಷಯ?

ಕಾಂಗ್ರೆಸ್ ಎಂಎಲ್‌ಎಯನ್ನು ಚೀನಾದವನು ಎಂದ ಯೂಟ್ಯೂಬರ್‌; ಮೌನ ಮುರಿದ ನಟ ರಾಜ್‌ಕುಮಾರ್ ರಾವ್!
Linkup
ಭಾರತೀಯ ಮೂಲದ ಯುಟ್ಯೂಬರ್ ಪಾರಸ್ ಸಿಂಗ್ ಅವರು ಇತ್ತೀಚೆಗೆ ಮಾಡಿದ ವಿಡಿಯೋವೊಂದು ವೈರಲ್ ಆಗಿತ್ತು. ಪಾರಸ್ ಸಿಂಗ್ ಅವರು ಅರುಣಾಚಲ ಪ್ರದೇಶದ ಪಕ್ಷದ ಎಂಎಲ್‌ಎಯನ್ನು ಚೈನೀಸ್ ಎಂದು ಕರೆದಿದ್ದರು. ಪಾರಸ್ ಸಿಂಗ್ ಅವರು ಜನಾಂಗೀಯ ತಾರತಮ್ಯ ಮಾಡಿದ್ದರ ಬಗ್ಗೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಬಾಲಿವುಡ್ ನಟ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ರಾಜ್‌ಕುಮಾರ್ ರಾವ್ ಹೇಳಿದ್ದೇನು? ನಿರ್ದೇಶಕ ಅಮರ್ ಕೌಶಿಕ್ ಅವರು ಏನು ಘಟನೆ ನಡೆದಿದೆ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್‌ಕುಮಾರ್ ರಾವ್ ಅವರು "ಒಪ್ಪಿಕೊಳ್ಳಲಾಗದು" ಎಂದು ಹೇಳಿದ್ದಾರೆ. ಸ್ವಂತ ಯೂಟ್ಯೂಬ್ ಚಾನಲ್ ಹೊಂದಿರುವ ಪಾರಸ್ ಸಿಂಗ್ ಅವರು ಒಂದು ವಿಡಿಯೋ ಮಾಡಿದ್ದರು. ಅಲ್ಲಿ ಅರುಣಾಚಲ ಪ್ರದೇಶದ ಮಂತ್ರಿಯನ್ನು ಚೈನೀಸ್ ಎಂದು ಕರೆದಿದ್ದಾರೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಕೂಡ ನಡೆದಿದೆ. ಅಮರ್ ಕೌಶಿಕ್ ವಾದವೇನು? "ನಮ್ಮ ಸ್ವದೇಶದ, ಜನಾಂಗದ ಬಗ್ಗೆ ಈ ರೀತಿ ಅಜ್ಞಾನ ಹೊಂದಿರೋದು ಮೂರ್ಖತನದ ವಿಷಯ. ಅದರಲ್ಲಿಯೂ ಅಜ್ಞಾನವನ್ನು ಆಕ್ರಮಣಕರಿಯಾಗಿ ವ್ಯಕ್ತಪಡಿಸಿದಾಗ ವಿಷವಾಗಿ ಪರಿಣಮಿಸುತ್ತದೆ" ಎಂದು ನಿರ್ದೇಶಕ ಅಮರ್ ಕೌಶಿಕ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರು. ಅದಕ್ಕೆ ರಾಜ್‌ಕುಮಾರ್ ರಾವ್ ಪ್ರತಿಕ್ರಿಯೆ ನೀಡಿದ್ದು, 'ಇಂತಹದನ್ನು ಒಪ್ಪಿಕೊಳ್ಳಲಾಗದು' ಎಂದಿದ್ದಾರೆ. ಎಂಎಲ್‌ಎ ಮೇಲೆ ಪಾರಸ್‌ಗೆ ಯಾಕೆ ಕೋಪ? ಅರುಣಾಚಲ ಪ್ರದೇಶದ ಸರ್ಕಾರ ಪಾರಸ್ ಸಿಂಗ್ ಮೇಲೆ ದೂರು ದಾಖಲಿಸಿದೆ. ಪಾರಸ್ ಸಿಂಗ್ ಅವರು, ಕಾಂಗ್ರೆಸ್ ಎಂಎಲ್‌ಎ ನಿನೊಂಗ್ ಎರಿಂಗ್ ಭಾರತೀಯ ಅಲ್ಲ, ಚೀನಾದ ಭಾಗ ಅಂತ ಕೂಡ ಹೇಳಿದ್ದರು. ನಿನೊಂಗ್ ಎರಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪಬ್ಜಿ ಮೊಬೈಲ್ ಕುರಿತಾಗಿ ಪತ್ರ ಬರೆದಿದ್ದರು. ಚೈನಾ ಆಪ್‌ಗಳಿಂದ ನಮ್ಮ ಭದ್ರತೆಗೆ ಧಕ್ಕೆ ಆಗುವುದು, ಹೀಗಾಗಿ #BattlegroundsMobileIndia ಅಡಿಯಲ್ಲಿ ಚೀನಾ ಆಪ್‌ಗಳಿಗೆ ಅನುಮತಿ ನೀಡಬೇಡಿ ಎಂದು ನಿನೊಂಗ್ ಎರಿಂಗ್ ಪ್ರಧಾನಿ ಬಳಿ ಮನವಿ ಮಾಡಿದ್ದರು. ಇದೇ ವಿಚಾರಕ್ಕೆ ಎಂಎಲ್‌ಎಯನ್ನು ಪಾರಸ್ ನಿಂದಿಸಿದ್ದಾರೆ.