ಕೈ ಮೀರಿದ ಕೊರೊನಾ ಪರಿಸ್ಥಿತಿ, ದಿಲ್ಲಿಯಲ್ಲಿ 7 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌

ಕೊರೊನಾ ಪ್ರಕರಣಗಳು ಒಂದೇ ಸಮನೆ ಏರಿಕೆಯಾಗುತ್ತಿರುವುದರಿಂದ ನಗರದ ಆರೋಗ್ಯ ವ್ಯವಸ್ಥೆ ತೀವ್ರ ಒತ್ತಡ ಎದುರಿಸುತ್ತಿದೆ ಎಂದಿರುವ ಅರವಿಂದ ಕೇಜ್ರಿವಾಲ್‌, ನಗರದಲ್ಲಿ ಪೂರ್ಣ ಪ್ರಮಾಣದ ಕರ್ಫ್ಯೂ ಘೋಷಿಸಿದ್ದಾರೆ.

ಕೈ ಮೀರಿದ ಕೊರೊನಾ ಪರಿಸ್ಥಿತಿ, ದಿಲ್ಲಿಯಲ್ಲಿ 7 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌
Linkup
: ಇಂದು ಅಂದರೆ ಏಪ್ರಿಲ್‌ 19ರ ರಾತ್ರಿ 10 ಗಂಟೆಯಿಂದ ಆರಂಭಿಸಿದ ಮುಂದಿನ ಸೋಮವಾರ ಬೆಳಿಗ್ಗಿನವರೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಸಂಪೂರ್ಣ ಘೋಷಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಸೋಮವಾರ ಆದೇಶ ಹೊರಡಿಸಿದ್ದಾರೆ. ಕೊರೊನಾ ಪ್ರಕರಣಗಳು ಒಂದೇ ಸಮನೆ ಏರಿಕೆಯಾಗುತ್ತಿರುವುದರಿಂದ ನಗರದ ಆರೋಗ್ಯ ವ್ಯವಸ್ಥೆ ತೀವ್ರ ಒತ್ತಡ ಎದುರಿಸುತ್ತಿದೆ ಎಂದು ಹೇಳಿರುವ ಅವರು, ನಗರದಲ್ಲಿ ಪೂರ್ಣ ಪ್ರಮಾಣದ ಘೋಷಿಸಿದ್ದಾರೆ. ಈ ಅವಧಿಯಲ್ಲಿ ಎಲ್ಲಾ ಖಾಸಗಿ ಕಚೇರಿಗಳನ್ನು ಮನೆಯಿಂದಲೇ ನಿರ್ವಹಣೆ (ವರ್ಕ್‌ ಫ್ರಂ ಹೋಮ್‌) ಮಾಡುವಂತೆ ಸೂಚಿಸಲಾಗಿದೆ. ಸರಕಾರಿ ಕಚೇರಿಗಳು ಮಾತ್ರ ಕಾರ್ಯನಿರ್ವಹಿಸಲಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಭಾನುವಾರ ದಿಲ್ಲಿಯಲ್ಲಿ 25,462 ಹೊಸ ಕೊರೊನಾ ಪ್ರಕರಣಗಳೂ ದೃಢಪಟ್ಟಿದ್ದವು. ಮತ್ತು ಪರೀಕ್ಷೆಗಳಿಗೆ ಹೋಲಿಸಿದರೆ ಪಾಸಿಟಿವಿ ದರ ಶೇ.30ಕ್ಕೆ ತಲುಪಿತ್ತು. ಅಂದರೆ ಪರೀಕ್ಷೆಗೆ ಒಳಪಟ್ಟು ಅಂದಾಜು ಮೂರರಲ್ಲಿ ಒಬ್ಬರು ಸೋಂಕಿತರಾಗಿದ್ದರು. ಕಳೆದ ಒಂದು ವಾರಕ್ಕೂ ಹೆಚ್ಚು ಸಮಯದಿಂದ ನಗರದಲ್ಲಿ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಾ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ವಾರಾಂತ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಎಎಪಿ ಸರಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಈ ಹಿಂದಿನ ಆದೇಶದಲ್ಲಿ ಅಡಿಟೋರಿಯಂ, ರೆಸ್ಟೋರೆಂಟ್‌, ಮಾಲ್‌, ಜಿಮ್‌ ಮತ್ತು ಸ್ಪಾಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿತ್ತು. ಸಿನಿಮಾ ಮಂದಿರಗಳಿಗೆ ಮೂರನೇ ಒಂದರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿತ್ತು. ಜತೆಗೆ ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆಲ್ಲ ನಿಷೇಧ ಹೇರಲಾಗಿತ್ತು. ಇದೀಗ ಇದನ್ನೇ ಮತ್ತಷ್ಟು ವಿಸ್ತರಿಸಿ ಸಂಪೂರ್ಣ ಲಾಕ್‌ಡೌನ್‌ ಹೇರಲಾಗಿದೆ. ಕಳೆದ ವರ್ಷ ಮಾರ್ಚ್‌ 22 ರಿಂದ ಮೇ 18ರವರೆಗೆ ಸಂಪೂರ್ಣ ಲಾಕ್‌ಡೌನ್‌ನಲ್ಲಿತ್ತು. ಇದೀಗ ಒಂದು ವರ್ಷದ ಬಳಿಕ ಮತ್ತೆ ರಾಜಧಾನಿ ಲಾಕ್‌ಡೌನ್‌ಗೆ ಒಳಗಾಗಿದೆ.