ನೀವು ಆಸ್ಟ್ರಿಚ್ ರೀತಿ ಮರಳಲ್ಲಿ ತಲೆ ಹುದುಗಿಸಬಹುದು, ಆದರೆ ನಮಗೆ ಆಗೊಲ್ಲ: ಕೇಂದ್ರದ ವಿರುದ್ಧ ಹೈಕೋರ್ಟ್ ಕಿಡಿ

ಸುಪ್ರೀಂಕೋರ್ಟ್ ಆದೇಶಕ್ಕೆ ತಕ್ಕಷ್ಟು ಆಕ್ಸಿಜನ್ ಸಿಲಿಂಡರ್‌ಗಳನ್ನು ದೆಹಲಿಗೆ ಪೂರೈಕೆ ಮಾಡುವಲ್ಲಿ ವಿಫಲವಾದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ದೆಹಲಿ ಹೈಕೋರ್ಟ್, ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಜರುಗಿಸಬಾರದೇಕೆ ಎಂದು ಪ್ರಶ್ನಿಸಿದೆ.

ನೀವು ಆಸ್ಟ್ರಿಚ್ ರೀತಿ ಮರಳಲ್ಲಿ ತಲೆ ಹುದುಗಿಸಬಹುದು, ಆದರೆ ನಮಗೆ ಆಗೊಲ್ಲ: ಕೇಂದ್ರದ ವಿರುದ್ಧ ಹೈಕೋರ್ಟ್ ಕಿಡಿ
Linkup
ಹೊಸದಿಲ್ಲಿ: ನಿಮ್ಮ ವಿರುದ್ಧ ಏಕೆ ಪ್ರಕ್ರಿಯೆ ಆರಂಭಿಸಬಾರದು ಎಂದು ಕೇಂದ್ರ ಸರ್ಕಾರವನ್ನು ಮಂಗಳವಾರ ಪ್ರಶ್ನಿಸಿದೆ. ಏನೇ ಆದರೂ ದೆಹಲಿಗೆ ಅದರ ಪೂರ್ಣ ಪಾಲಿನ ಅನ್ನು ಒದಗಿಸಬೇಕು ಎಂದು ಕೋರ್ಟ್ ಹೇಳಿತ್ತು. ನ್ಯಾಯಾಂಗದ ಆದೇಶವನ್ನು ಪಾಲಿಸಲು ವಿಫಲವಾದ ಕೇಂದ್ರದ ವಿರುದ್ಧ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 'ನೀವು ಆಸ್ಟ್ರಿಚ್ ಪಕ್ಷಿಯಂತೆ ನಿಮ್ಮ ತಲೆಯನ್ನು ಮರಳಿನ ಅಡಿ ಹೂತುಹಾಕಬಹುದು, ಆದರೆ ನಾವು ಹಾಗೆ ಮಾಡುವುದಿಲ್ಲ' ಎಂದು ಹೈಕೋರ್ಟ್ ಕಿಡಿಕಾರಿದೆ. ಏಪ್ರಿಲ್ 30ರಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್, ದೆಹಲಿಗೆ 700 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಬೇಕು ಎಂದು ಕೇಂದ್ರಕ್ಕೆ ನಿರ್ದೇಶನ ನೀಡಿತ್ತೇ ವಿನಾ, ಕೇವಲ 490 ಮೆಟ್ರಿಕ್ ಟನ್ ಅಲ್ಲ ಎಂದು ಕೋರ್ಟ್ ಹೇಳಿದೆ. ದೆಹಲಿ ಎದುರಿಸುತ್ತಿರುವ ಆಮ್ಲಜನಕದ ಪೂರೈಕೆಯ ಕೊರತೆಯನ್ನು ಮೇ 3ರ ಮಧ್ಯರಾತ್ರಿಯ ಒಳಗೆ ಸರಿಪಡಿಸಬೇಕು ಎಂದು ಸುಪ್ರೀಂಕೊರ್ಟ್ ಏಪ್ರಿಲ್ 30ರಂದು ಆದೇಶಿಸಿತ್ತು. ದೆಹಲಿಯಲ್ಲಿನ ಆಕ್ಸಿಜನ್ ಕೊರತೆಯ ಕುರಿತು ವಿಸ್ತೃತ ವಿಚಾರಣೆಯನ್ನು ನಡೆಸಿದ ದೆಹಲಿ ಹೈಕೋರ್ಟ್, ರಾಜಧಾನಿಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿತ್ತು. 'ನೀರು ತಲೆಯ ಮೇಲೆ ಬಂದಿದೆ. ನೀವು ಎಲ್ಲವನ್ನೂ ಈಗಲೇ ವ್ಯವಸ್ಥೆಗೊಳಿಸಬೇಕು. ನೀವು ಹಂಚಿಕೆಗಳನ್ನು ಮಾಡಿದ್ದೀರಿ. ಅದನ್ನು ಈಡೇರಿಸಬೇಕು. ಎಂಟು ಜೀವಗಳ ನಷ್ಟವಾಗಿವೆ. ನಾವು ಕಣ್ಣುಮುಚ್ಚಿ ಕೂರಲು ಸಾಧ್ಯವಿಲ್ಲ' ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಾಟೀಲ್ ಹೇಳಿದ್ದರು.