ಕೋವಿಡ್ ಸಂತ್ರಸ್ತರ ಕುಟುಂಬಕ್ಕೆ ನೆರವಾಗಲು ವೇತನ ನೀಡಲು ಮುಂದಾದ ಹಣ್ಣು ವ್ಯಾಪಾರಿಯ ಪುತ್ರ!

ಕೊರೊನಾಪೀಡಿತ ವ್ಯಕ್ತಿಯ ಬಡ ಕುಟುಂಬಕ್ಕೆ ನೆರವಾಗಲು ಬಯಸಿರುವ ಹಣ್ಣು ವ್ಯಾಪಾರಿಯ ಪುತ್ರನೋರ್ವ, ತನ್ನ ವೇತನವನ್ನು ಬಡ ಕುಟುಂಬಕ್ಕೆ ನೀಡುವುದಾಗಿ ಹೇಳಿ ಗಮನ ಸೆಳೆದಿದ್ದಾನೆ. ಈ ಕುರಿತು ಆತ ವೈದ್ಯರೊಬ್ಬರಿಗೆ ಕಳುಹಿಸಿರುವ ಮನವಿ ಸಂದೇಶ ಇದೀಗ ಭಾರೀ ವೈರಲ್ ಆಗಿದ್ದು, ಆತನ ಮಾನವೀಯತೆಯನ್ನು ಎಲ್ಲರೂ ಕೊಂಡಾಡಿದ್ದಾರೆ.

ಕೋವಿಡ್ ಸಂತ್ರಸ್ತರ ಕುಟುಂಬಕ್ಕೆ ನೆರವಾಗಲು ವೇತನ ನೀಡಲು ಮುಂದಾದ ಹಣ್ಣು ವ್ಯಾಪಾರಿಯ ಪುತ್ರ!
Linkup
ಮುಂಬಯಿ: ಮಾರಕ ಎರಡನೇ ಅಲೆ ಇಡೀ ದೇಶಾದ್ಯಂತ ಆತಂಕ ಸೃಷ್ಟಿಸುತ್ತಿದೆ. ಆದರೆ ಈ ಮಹಾಮಾರಿಯ ವಿರುದ್ಧ ಹೋರಾಡುವ ದೇಶದ ನಿರ್ಧಾರ ಕೂಡ ಅಷ್ಟೇ ಅಚಲವಾಗಿದೆ. ಸಂಕಷ್ಟದ ಕಾಲದಲ್ಲಿ ಒಬ್ಬರಿಗೊಬ್ಬರು ನೆರವಾಗುವ ಮೂಲಕ ಕೋವಿಡ್‌ನ್ನು ಸೋಲಿಸುವ ಪಣ ತೊಟ್ಟಿರುವ ದೇಶ, ತನ್ನ ಗುರಿ ಸಾಧನೆಗೆ ಹಗಲಿರುಳೂ ಶ್ರಮಿಸುತ್ತಿದೆ. ಸಮಾಜದ ಎಲ್ಲಾ ವರ್ಗಗಳ ಜನತೆ ಈ ಹೋರಾಟದಲ್ಲಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಅದರಂತೆ ಕೊರೊನಾಪೀಡಿತ ವ್ಯಕ್ತಿಯ ಬಡ ಕುಟುಂಬಕ್ಕೆ ನೆರವಾಗಲು ಬಯಸಿರುವ ಹಣ್ಣು ವ್ಯಾಪಾರಿಯ ಪುತ್ರನೋರ್ವ, ತನ್ನ ವೇತನವನ್ನು ಬಡ ಕುಟುಂಬಕ್ಕೆ ನೀಡುವುದಾಗಿ ಹೇಳಿ ಗಮನ ಸೆಳೆದಿದ್ದಾನೆ. ಹೌದು ಮುಂಬಯಿನ ಹಣ್ಣು ವ್ಯಾಪಾರಿಯೋರ್ವನ ಪುತ್ರ, ಕೋವಿಡ್‌ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಆಸ್ಪತ್ರೆಯ ಬಿಲ್ ಕಟ್ಟಲು ಅಥವಾ ವೆಂಟಿಲೇಟರ್‌ಗಳನ್ನು ಕೊಳ್ಳಲು ನೆರವಾಗಲು ಮುಂದಾಗಿದ್ದಾನೆ. ಈ ಕುರಿತು ಆತ ವೈದ್ಯರೊಬ್ಬರಿಗೆ ಕಳುಹಿಸಿರುವ ಮನವಿ ಸಂದೇಶ ಇದೀಗ ಭಾರೀ ವೈರಲ್ ಆಗಿದ್ದು, ಆತನ ಮಾನವೀಯತೆಯನ್ನು ಎಲ್ಲರೂ ಕೊಂಡಾಡಿದ್ದಾರೆ. ,ಮುಂಬಯಿನ ಹೃದ್ರೋಗ ತಜ್ಞ ಡಾ. ಸ್ನೇಹಿಲ್ ಮಿಶ್ರಾ ಎಂಬುವವರು ತಮಗೆ ಬಂದ ವಾಟ್ಸಪ್ ಮೆಸೆಜ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಮತಹ ಹೀರೋಗಳನ್ನು ಗುರುತಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಈತನ ಮೆಸೆಜ್ ನನ್ನನ್ನು ಭಾವುಕನನ್ನಾಗಿ ಮಾಡಿತು. ಆತನ ಮಾನವೀಯತೆ ಕಂಡು ನನಗೆ ಮಾತುಗಳೇ ಹೊರಡಲಿಲ್ಲ. ಅಲ್ಲದೇ ಆತ ಇತರರಿಗೆ ನೆರವಾಗಲು ಅಗತ್ಯ ಸಹಾಯ ಮಾಡುವುದಾಗಿ ಡಾ. ಸ್ನೇಹಿಲ್ ಮಿಶ್ರಾ ಹೇಳಿದ್ದಾರೆ. ತನ್ನ ಸಾಮಾಜಿಕ ಸ್ಥಿತಿಗತಿಯನ್ನು ಮೀರಿ ಮತ್ತೊಬ್ಬರಿಗಾಗಿ ಮಿಡಿದ ಹಣ್ಣು ವ್ಯಾಪಾರಿಯ ಪುತ್ರನ ಮಾನವೀಯತೆಗೆ ಎಲ್ಲರೂ ಸಲಾಂ ಹೇಳುತ್ತಿದ್ದಾರೆ.