ನೂತನ ಸಂಸತ್ ಕಟ್ಟಡ ಕಾಮಗಾರಿ ಸ್ಥಳಕ್ಕೆ ರಾತ್ರಿ ದಿಢೀರ್ ಭೇಟಿ ಕೊಟ್ಟ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾತ್ರಿ ಸೆಂಟ್ರಲ್ ವಿಸ್ಟಾ ಯೋಜನೆಯಡಿ ನಡೆಯುತ್ತಿರುವ ನೂತನ ಸಂಸತ್ ಭವನದ ಕಾಮಗಾರಿ ಸ್ಥಳಕ್ಕೆ ಹಠಾತ್ ಭೇಟಿ ನೀಡಿ ಯೋಜನೆಯ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದರು.

ನೂತನ ಸಂಸತ್ ಕಟ್ಟಡ ಕಾಮಗಾರಿ ಸ್ಥಳಕ್ಕೆ ರಾತ್ರಿ ದಿಢೀರ್ ಭೇಟಿ ಕೊಟ್ಟ ಪ್ರಧಾನಿ ಮೋದಿ
Linkup
ಹೊಸದಿಲ್ಲಿ: ನಿರ್ಮಾಣಗೊಳ್ಳುತ್ತಿರುವ ಹೊಸದಿಲ್ಲಿಯ ಸ್ಥಳಕ್ಕೆ ಪ್ರಧಾನಿ ಅವರು ಭಾನುವಾರ ರಾತ್ರಿ ದಿಢೀರ್ ಭೇಟಿ ನೀಡಿದರು. ರಾತ್ರಿ 8.45ರ ಸುಮಾರಿಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಸುಮಾರು ಒಂದು ಗಂಟೆ ಅಲ್ಲಿ ಸಮಯ ಕಳೆದರು. ಈ ವೇಳೆ ಹೊಸ ಸಂಸತ್ ಕಟ್ಟಡ ನಿರ್ಮಾಣ ಪ್ರಗತಿಯನ್ನು ಪರಿಶೀಲಿಸಿದರು. ಅವರ ಭೇಟಿಯ ಬಗ್ಗೆ ಪೂರ್ವ ಮಾಹಿತಿ ಇರಲಿಲ್ಲ. ಮರು ಅಭಿವೃದ್ಧಿ ಯೋಜನೆಯಡಿ ಹೊಸ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಣ ಕಾಮಗಾರಿ ಆರಂಭವಾದ 21 ತಿಂಗಳಲ್ಲಿ ಪೂರ್ಣಗೊಳಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. 971 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಟ್ಟಡದ ಕಾರ್ಯವು 2022ರ ಸ್ವಾತಂತ್ರ್ಯೋತ್ಸವದ ವೇಳೆಗೆ ಮುಗಿಸಬೇಕು ಎಂದು ಪ್ರಧಾನಿ ಬಯಸಿದ್ದಾರೆ. ದೇಶದ ಸ್ವಾತಂತ್ರ್ಯದ ಸ್ವರ್ಣ ಮಹೋತ್ಸವದ ವೇಳೆ ಈ ಮಹತ್ವದ ಯೋಜನೆಯನ್ನು ಲೋಕಾರ್ಪಣೆ ಮಾಡಲು ಉದ್ದೇಶಿಸಿದ್ದಾರೆ. ಸ್ಥಳದಲ್ಲಿ ವ್ಯಾಪಕ ಪರಿಶೀಲನೆ ನಡೆಸಿ, ಕಾಮಗಾರಿ ಸ್ಥಿತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಪ್ರಧಾನಿ, ಕಟ್ಟಡ ಕಾರ್ಮಿಕರೊಂದಿಕೆ ಕೆಲ ಸಮಯ ಸಂವಾದಿಸಿದರು. ಫೆಬ್ರವರಿಯಲ್ಲಿ ಭೂಮಿ ಪೂಜೆ ನಡೆದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸೆಂಟ್ರಲ್ ವಿಸ್ಟಾ ಮರು ನಿರ್ಮಾಣ ಯೋಜನೆಯಡಿ ತ್ರಿಕೋನಾಕಾರದ ಸಂಸತ್ ಕಟ್ಟಡ ನಿರ್ಮಾಣವಾಗಲಿದೆ. ಕೇಂದ್ರ ಕಾರ್ಯಾಲಯ ಮತ್ತು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗೆ ಮೂರು ಕಿಮೀ ಉದ್ದದ ನಿರ್ಮಾಣವಾಗಲಿದೆ. ಯೋಜನೆ ಅನ್ವಯ, ಎಲ್ಲ ಸಂಸದರಿಗೂ ಪ್ರತ್ಯೇಕ ಕಚೇರಿಗಳನ್ನು ಹೊಸ ಸಂಸತ್ ಕಟ್ಟಡ ಹೊಂದಿರಲಿದೆ. ಕಾಗದರಹಿತ ಕಚೇರಿಗಳ ಸ್ಥಾಪನೆಗಾಗಿ ಇತ್ತೀಚಿನ ಡಿಜಿಟಲ್ ತಂತ್ರಜ್ಞಾನವನ್ನು ಸಂಪೂರ್ಣ ಅಳವಡಿಸಲಾಗುತ್ತದೆ. ಹೊಸ ಕಟ್ಟಡದಲ್ಲಿ ಭವ್ಯವಾದ ಸಾಂವಿಧಾನಿಕ ಸಭಾಂಗಣ ಇರಲಿದ್ದು, ಇದು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲಿದೆ. ಸಂಸತ್ ಸದಸ್ಯರಿಗೆ ಲಾಂಜ್, ಗ್ರಂಥಾಲಯ, ಬಹು ಸಮಿತಿ ಕೊಠಡಿಗಳು, ಭೋಜನ ಪ್ರದೇಶ ಮುಂತಾದವು ಇರಲಿವೆ.