ಈಶಾನ್ಯ ರಾಜ್ಯಗಳಲ್ಲಿ ಗಡಿ ವಿವಾದ: ಎರಡು ರಾಜ್ಯಗಳ ನಾಗರಿಕರ ಬಡಿದಾಟ, ಟ್ವಿಟ್ಟರ್‌ನಲ್ಲಿ ಸಿಎಂಗಳ ಕಿತ್ತಾಟ!

ಹಲವಾರು ವರ್ಷಗಳಿಂದ ಗಡಿ ಸಂಘರ್ಷ ನಡೆಸುತ್ತಿರುವ ಅಸ್ಸಾ-ಮಿಜೋರಾಂ ನಡುವೆ ಮತ್ತೆ ಗಡಿ ವಿವಾದ ಭುಗಿಲೆದ್ದಿದೆ. ಗಡಿಯಲ್ಲಿ ಜನರು ಬಡಿದಾಟಕ್ಕೆ ಇಳಿದಿದ್ದರೆ, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಟ್ವಿಟ್ಟರ್ ಸಂಘರ್ಷ ನಡೆಸಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಗಡಿ ವಿವಾದ: ಎರಡು ರಾಜ್ಯಗಳ ನಾಗರಿಕರ ಬಡಿದಾಟ, ಟ್ವಿಟ್ಟರ್‌ನಲ್ಲಿ ಸಿಎಂಗಳ ಕಿತ್ತಾಟ!
Linkup
ಗುವಾಹಟಿ: ಈಶಾನ್ಯ ರಾಜ್ಯಗಳ ಎಲ್ಲ ಮುಖ್ಯಮಂತ್ರಿಗಳ ಜತೆಗೆ ಗೃಹ ಸಚಿವ ಅವರು ಶಿಲ್ಲಾಂಗ್‌ನಲ್ಲಿ ಸಭೆ ನಡೆಸಿದ ಎರಡೇ ದಿನದಲ್ಲಿ ವಿವಾದಾತ್ಮಕ ಅಸ್ಸಾಂ-ಮಿಜೋರಾಂ ಗಡಿಯಲ್ಲಿ ಮತ್ತೆ ನಡೆದಿದೆ. ಗಡಿಭಾಗದಲ್ಲಿರುವ ಅಸ್ಸಾಂನ ಕಚಾರ್ ಜಿಲ್ಲೆ ಮತ್ತು ಮಿಜೋರಾಂನ ಕೊಲಾಸಿಬ್ ಜಿಲ್ಲೆಗಳಲ್ಲಿ ಸೋಮವಾರ ಗುಂಡಿನ ಚಕಮಕಿ ನಡೆದಿದ್ದು, ಸರಕಾರಿ ವಾಹನಗಳ ಮೇಲೆ ದಾಳಿ ನಡೆದಿದೆ. ಅತ್ತ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಟ್ವಿಟ್ಟರ್‌ನಲ್ಲಿ ಕಿತ್ತಾಟಕ್ಕೆ ಇಳಿದಿದ್ದು, ತಮ್ಮ ಪೋಸ್ಟ್‌ಗಳಲ್ಲಿ ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿದ್ದಾರೆ. ಬಡಿಗೆಗಳನ್ನು ಹಿಡಿಯ ಜನರು ಹಿಂಸಾಚಾರದಲ್ಲಿ ತೊಡಗಿರುವ ವಿಡಿಯೋವನ್ನು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಜೊರಂತಗಾ ಅವರು, 'ಇದನ್ನು ಈಗಲೇ ತಡೆಯುವ ಅಗತ್ಯವಿದೆ. ದಯವಿಟ್ಟು ಈ ವಿಚಾರದ ಬಗ್ಗೆ ಗಮನ ಹರಿಸಿ' ಎಂದು ಅಮಿತ್ ಶಾ ಅವರನ್ನು ಟ್ವೀಟ್ ಮಾಡಿದ್ದಾರೆ. 'ಕಚಾರ್ ಮೂಲಕ ಮುಗ್ಧ ಜನರು ಮಿಜೋರಾಂಗೆ ಮರಳುತ್ತಿದ್ದಾಗ ಕಳ್ಳರು ಮತ್ತು ಗೂಂಡಾಗಳು ಹಲ್ಲೆ ನಡೆಸಿ ದೋಚಿದ್ದಾರೆ. ಈ ಹಿಂಸಾತ್ಮಕ ಕೃತ್ಯಗಳನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?' ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. 'ಮಾನ್ಯ ಜೊರಂತಗಾ ಅವರೇ, ತಮ್ಮ ನಾಗರಿಕರು ಮಾತು ಕೇಳುವವರೆಗೂ ಅಥವಾ ಹಿಂಸೆ ನಿಲ್ಲಿಸುವವರೆಗೂ ನಮ್ಮ ನೆಲೆಯಿಂದ ಹಿಂದಕ್ಕೆ ಸರಿಯುವಂತೆ ಮಿಜೋರಾಂನ ಕೊಲಾಸಿಬ್ ಎಸ್‌ಪಿ ನಮ್ಮನ್ನು ಕೇಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಸರಕಾರ ನಡೆಸಲು ಸಾಧ್ಯವೇ? ನೀವು ಆದಷ್ಟು ಶೀಘ್ರದಲ್ಲಿಯೇ ಮಧ್ಯಪ್ರವೇಶ ಮಾಡುತ್ತೀರಿ ಎಂದು ಆಶಿಸುತ್ತೇನೆ' ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ, ಅಮಿತ್ ಶಾ ಅವರನ್ನು ಕೋರಿದ್ದಾರೆ. ಮಿಜೋರಾಂನ ಮೂರು ಜಿಲ್ಲೆಗಳಾದ ಐಜ್ವಾಲ್, ಕೊಲಾಸಿಬ್ ಮತ್ತು ಮಾಮಿಟ್- ಅಸ್ಸಾಂನ ಕಚಾರ್, ಹೈಲಕಂಡಿ ಮತ್ತು ಕರೀಮ್‌ಗಂಜ್ ಜಿಲ್ಲೆಗಳ ಜತೆಗೆ ಒಟ್ಟು 164.6 ಕಿಮೀ ಅಂತಾರಾಜ್ಯ ಗಡಿಯನ್ನು ಹಂಚಿಕೊಂಡಿವೆ. ಈ ಗಡಿಗಳ ವಿಚಾರವಾಗಿ ಹಲವು ವರ್ಷಗಳಿಂದಲೂ ವಿವಾದವಿದ್ದು, ಒಳನುಸುಳುವಿಕೆಯ ಬಗ್ಗೆ ಉಭಯ ರಾಜ್ಯಗಳ ಜನರು ಪರಸ್ಪರ ಆರೋಪಗಳನ್ನು ಮಾಡುತ್ತಿದ್ದಾರೆ. ಬಗೆಹರಿಸಲು ಮಿಜೋರಾಂ ಸರಕಾರವು ಗಡಿ ಆಯೋಗವೊಂದನ್ನು ರಚಿಸಿದೆ. ಮೇಘಾಲಯ ಮತ್ತು ಅರುಣಾಚಲ ಪ್ರದೇಶಗಳ ಜತೆ ಕೂಡ ಅಸ್ಸಾಂ ಗಡಿ ವಿವಾದವಿದೆ.