![](https://vijaykarnataka.com/photo/83337581/photo-83337581.jpg)
ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ಸನ್ನಿವೇಶದಲ್ಲಿ ಎಲ್ಲರೂ ತಮ್ಮ ಪ್ರತಿರಕ್ಷಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ. ಅದಕ್ಕಾಗಿ ಜನರು ವಿವಿಧ ಬಗೆಯ ಧಾನ್ಯಗಳು, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಅದರಲ್ಲಿಯೂ ಸಿಟ್ರಸ್ ಹಣ್ಣುಗಳು ಕೋವಿಡ್ ರೋಗಿಗಳಲ್ಲಿ ಆಂಟಿಬಾಡಿಗಳನ್ನು ಹೆಚ್ಚಿಸಲಿದೆ ಎಂದು ಸಲಹೆ ನೀಡುತ್ತಿರುವುದರಿಂದ ಅವುಗಳಿಗಾಗಿ ಬೆಂಗಳೂರಿನ ಜನರು ಮುಗಿಬೀಳುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಈ ಹಣ್ಣುಗಳ ಬೆಲೆ ಗಗನಮುಖಿಯಾಗಿದೆ.
ಹೆಚ್ಚಾಗಿರುವ ಸಿಟ್ರಸ್ ಅಂಶದ ಹಣ್ಣುಗಳಿಗೆ ಕಾಲದಲ್ಲಿ ಭರ್ಜರಿ ಬೇಡಿಕೆ ಉಂಟಾಗಿದೆ. ಇದರಿಂದ ಈ ಹಣ್ಣುಗಳ ಬೆಲೆ ಸಾರ್ವಕಾಲಿಕ ದಾಖಲೆಯ ಏರಿಕೆ ಕಾಣುತ್ತಿದೆ. ನಿಂಬೆ ಕೊರೊನಾಗೆ ಒಳ್ಳೆಯ ಮದ್ದು ಎಂಬ ಸುದ್ದಿ ಹರಡಿದ್ದಾಗ ನಿಂಬೆಹಣ್ಣಿನ ದರ ಏಕಾಏಕಿ ಏರಿಕೆಯಾಗಿತ್ತು. ಒಂದು ನಿಂಬೆಹಣ್ಣು 10 ರೂಪಾಯಿಗೆ ಮಾರಾಟವಾಗಿದ್ದೂ ಇದೆ. ಈಗ ಸಿಟ್ರಸ್ ಅಂಶವುಳ್ಳ ಇತರೆ ಹಣ್ಣುಗಳ ವ್ಯಾಪಾರವೂ ಜೋರಾಗಿದೆ.
ಹಾಪ್‌ಕಾಮ್ಸ್ ದರಪಟ್ಟಿಯ ಪ್ರಕಾರ, ಒಂದು ಕೆಜಿ ಮೂಸಂಬಿ ದರ 158 ರೂಪಾಯಿ ಇದೆ. ನಿಂಬೆಹಣ್ಣು ಒಂದು ಕೆಜಿಗೆ 85 ರೂ. ದರವಿದೆ. ಹಾಗೆಯೇ ಕಿತ್ತಳೆ ದರ 118 ರೂಪಾಯಿಗೆ ತಲುಪಿದೆ.
'ಇದು ಮಾವಿನ ಹಣ್ಣಿನ ಅವಧಿ. ಕಳೆದ ವರ್ಷ ಮಾವಿನ ಹಣ್ಣಿಗೆ ಅಪಾರ ಬೇಡಿಕೆ ಇತ್ತು. ಈ ವರ್ಷವೂ ಇದೆ. ಆದರೆ ಇದರ ಜತೆಗೆ ಸಿಟ್ರಸ್ ಹಣ್ಣುಗಳಿಗೆ ಯಾವಾಗಲೂ ಇಲ್ಲದ ಬೇಡಿಕೆ ಉಂಟಾಗಿದೆ. ಸಿಟ್ರಸ್ ಹಣ್ಣುಗಳಲ್ಲಿನ ಇಮ್ಯುನಿಟಿ ಹೆಚ್ಚಿಸುವ ಗುಣಗಳಿಗಾಗಿಯೇ ಅವುಗಳನ್ನು ಖರೀದಿಸುತ್ತಿರುವುದಾಗಿ ಗ್ರಾಹಕರು ಹೇಳುತ್ತಾರೆ. ಆದರೆ ಸಿಟ್ರಸ್ ಹಣ್ಣುಗಳಿಗೆ ಇದು ಸೂಕ್ತ ಅವಧಿಯಲ್ಲ. ಜತೆಗೆ ಲಾಕ್‌ಡೌನ್‌ನಿಂದ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ ಹಲವು ಕಾರಣಗಳಿಂದಾಗಿ ಬೆಲೆ ಗಗನಕ್ಕೇರಿದೆ' ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಷಣ್ಮುಗ ಎಸ್.
ನೆಲ್ಲಿಕಾಯಿ ಅತ್ಯುತ್ತಮಕಿತ್ತಳೆ, ಅನಾನಸ್, ಮೂಸಂಬಿ, ನಿಂಬೆ ಹಣ್ಣು, ಕಿವಿ, ಪೇರಲೆ ಹಣ್ಣುಗಳಲ್ಲಿ ವಿಟಮಿನ್ ಸಿ ಅಗಾಧವಾಗಿರುತ್ತದೆ. ಇದಲ್ಲದೆ, ಜನರು ಹೆಚ್ಚಾಗಿ ಗಮನ ಹರಿಸದ ನೆಲ್ಲಿಕಾಯಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಇರುತ್ತದೆ. ಒಂದು ಕಿತ್ತಳೆಯ 20 ಪಟ್ಟು ಹೆಚ್ಚು ವಿಟಮಿನ್ ಸಿ ನೆಲ್ಲಿಕಾಯಿಯಲ್ಲಿ ಇರುತ್ತದೆ. ಸಿಟ್ರಸ್ ಹಣ್ಣುಗಳು ಬಹಳ ಪ್ರಬಲ ಪ್ರತಿರಕ್ಷಣಾ ವೃದ್ಧಿಕಾರಕವಾಗಿವೆ ಎನ್ನುತ್ತಾರೆ ಡಯಟಿಷಿಯನ್ ಅಪೇಕ್ಷಾ ಏಕ್ಬೋಟೆ.
ಎಳನೀರು ಕೂಡ ದುಬಾರಿಇದಲ್ಲದೆ ಎಳನೀರಿನಲ್ಲಿ ಕೂಡ ಪ್ರತಿರಕ್ಷಣಾ ಸಾಮರ್ಥ್ಯ ಅತ್ಯಧಿಕವಾಗಿದೆ ಎಂದು ತಜ್ಞರು ಹೇಳುವುದರಿಂದ ಅದಕ್ಕೂ ಬೇಡಿಕೆ ಹೆಚ್ಚಾಗಿದೆ. ಲಾಕ್‌ಡೌನ್ ಕಾರಣದಿಂದ ಎಳನೀರಿನ ಪೂರೈಕೆಗೆ ಹೊಡೆತಬಿದ್ದಿದೆ. 30-35 ರೂಪಾಯಿಗೆ ಮಾರಾಟವಾಗುತ್ತಿದ್ದ ಒಂದು ಎಳನೀರಿನ ದರ ಈಗ 40-60ರವರೆಗೂ ತಲುಪಿದೆ.