ಬೆಂಗಳೂರಿನಲ್ಲಿ ವಿಕ್ರಂ ಇನ್ವೆಸ್ಟ್‌ಮೆಂಟ್ಸ್‌ನ 35.70 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ

ಕಂಪನಿಯು ಸರಕು ವ್ಯಾಪಾರದ ನೆಪದಲ್ಲಿ ಗ್ರಾಹಕರಿಂದ ಹೂಡಿಕೆ ಮಾಡಿಸಿ, ಹಣ ಸಂಗ್ರಹಿಸುವಲ್ಲಿ ತೊಡಗಿಸಿಕೊಂಡಿತ್ತು. ವಾರ್ಷಿಕವಾಗಿ ಶೇ.30-35ರಷ್ಟು ದೊಡ್ಡ ಲಾಭ ನೀಡುವ ಆಮಿಷವೊಡ್ಡಿತ್ತು ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ವಿಕ್ರಂ ಇನ್ವೆಸ್ಟ್‌ಮೆಂಟ್ಸ್‌ನ 35.70 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ
Linkup
-ಅಕ್ರಮ ಹಣ ದುರ್ಬಳಕೆ ಆರೋಪ : ಅಕ್ರಮ ಹಣ ದುರ್ಬಳಕೆ ಆರೋಪದಡಿ ನಗರದ ಕಂಪನಿಯೊಂದರ 35.70 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ () ತಿಳಿಸಿದೆ. ವಿಕ್ರಂ ಇನ್ವೆಸ್ಟ್‌ಮೆಂಟ್ಸ್‌ ಮತ್ತು ಅಸೋಸಿಯೇಟ್ಸ್‌ ಹೆಸರಿನಲ್ಲಿ ಬೆಂಗಳೂರಿನಲ್ಲಿನಲ್ಲಿ ಇರುವ , ಬ್ಯಾಂಕ್‌ ದಾಖಲೆಗಳು, ಸ್ಥಿರ ಠೇವಣಿಯ 1.49 ಕೋಟಿ ರೂ. ಮೌಲ್ಯದ ಜಮೀನು, ಕಚೇರಿ ಸ್ಥಳಗಳು ಮತ್ತು ವಸತಿ ಫ್ಲ್ಯಾಟ್‌ಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ವಶಕ್ಕೆ ಪಡೆಯಲು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ. 2018ರ ಮಾರ್ಚ್‌ನಲ್ಲಿ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಪ್ರಕರಣ ದಾಖಲಿಸಿತ್ತು. ವಿಕ್ರಮ್‌ ಇನ್ವೆಸ್ಟ್‌ಮೆಂಟ್‌ನ ಪಾಲುದಾರರು ಮತ್ತು ಇತರ ಸಹಚರರಾದ ರಾಘವೇಂದ್ರ ಶ್ರೀನಾಥ್‌, ಕೆ. ಪಿ. ನರಸಿಂಹಮೂರ್ತಿ, ಎಂ. ಪ್ರಹ್ಲಾದ, ಕೆ. ಸಿ. ನಾಗರಾಜ್‌ ಮತ್ತು ಸೂತ್ರಂ ಸುರೇಶ್‌ ಅವರು ಸರಕು ವ್ಯಾಪಾರದ ನೆಪದಲ್ಲಿ ಹೆಚ್ಚಿನ ಆದಾಯದ ಭರವಸೆ ನೀಡಿ ವಿಕ್ರಮ್‌ ಇನ್ವೆಸ್ಟ್‌ಮೆಂಟ್‌ನಲ್ಲಿ ಹೂಡಿಕೆ ಮಾಡುವಂತೆ ಸಾರ್ವಜನಿಕರಿಗೆ ಆಮಿಷವೊಡ್ಡಿ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದೊಡ್ಡ ಲಾಭದ ಆಮಿಷವೊಡ್ಡಿ ವಂಚನೆ!: ಕಂಪನಿಯು ಸರಕು ವ್ಯಾಪಾರದ ನೆಪದಲ್ಲಿ ಗ್ರಾಹಕರಿಂದ ಹೂಡಿಕೆ ಮಾಡಿಸಿ, ಹಣ ಸಂಗ್ರಹಿಸುವಲ್ಲಿ ತೊಡಗಿಸಿಕೊಂಡಿತ್ತು. ವಾರ್ಷಿಕವಾಗಿ ಶೇ.30-35ರಷ್ಟು ದೊಡ್ಡ ಲಾಭ ನೀಡುವ ಆಮಿಷವೊಡ್ಡಿತ್ತು ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಸಂಸ್ಥೆಯು ಭಾರತೀಯ ರಿಸರ್ವ್‌ ಬ್ಯಾಂಕ್‌ ಸೇರಿದಂತೆ ಯಾವುದೇ ನಿಯಂತ್ರಕ ಏಜೆನ್ಸಿಗಳಲ್ಲಿ ನೋಂದಾಯಿಸಲ್ಪಟ್ಟಿಲ್ಲ. ಗ್ರಾಹಕರಿಗೆ ನೀಡಿದ್ದ ಭರವಸೆಯಂತೆ ತಮ್ಮ ಮೊದಲ ಕಂತನ್ನು ವಾಪಸ್‌ ನೀಡಿದೆ. ಬಳಿಕ ಗ್ರಾಹಕರ ನಂಬಿಕೆ ಗಳಿಸಿ ಅವರು ಇನ್ನಷ್ಟು ಹೂಡಿಕೆ ಮಾಡಲು ಆಮಿಷವೊಡ್ಡುತ್ತಿತ್ತು. ನಂತರ ಕಂಪನಿಯು ಅವರಿಗೆ ಅಸಲು ಮೊತ್ತ ಒಳಗೊಂಡಂತೆ ಹಣ ಹಿಂತಿರುಗಿಸುವುದನ್ನು ನಿಲ್ಲಿಸಿತ್ತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೆಲವು ಹೈ-ಪ್ರೊಫೈಲ್‌ ವ್ಯಕ್ತಿಗಳು ಸಹ ಈ ಯೋಜನೆಯಲ್ಲಿ ಭಾರಿ ಆದಾಯವನ್ನು ಗಳಿಸುವ ಭರವಸೆಯಲ್ಲಿ ಹೂಡಿಕೆ ಮಾಡಿದ್ದಾರೆ. ಆರಂಭದಲ್ಲಿ ಕಂಪನಿಯು ತನ್ನ ಹೊಸ ಹೂಡಿಕೆದಾರರಿಂದ ಪಡೆದ ನಿಧಿಯಿಂದ ಅಸ್ತಿತ್ವದಲ್ಲಿರುವ ಹೂಡಿಕೆದಾರರಿಗೆ ಲಾಭವನ್ನು ಪಾವತಿಸಿದೆ ಎಂದು ಜಾರಿ ನಿರ್ದೇಶನಾಲಯ ವಿವರಿಸಿದೆ. ಕಂಪನಿಯು ಎಲ್‌ಐಸಿ ಏಜೆಂಟ್‌ಗಳು ಮತ್ತು ಇತರರನ್ನು ಬಳಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.