ಬೆಂಗಳೂರು: ರೋಗಿಯ ಮೊಬೈಲ್‌ನಿಂದ ತನ್ನ ಖಾತೆಗೆ 42 ಸಾವಿರ ವರ್ಗಾಯಿಸಿಕೊಂಡಿದ್ದ ನರ್ಸ್ ಬಂಧನ!
ಬೆಂಗಳೂರು: ರೋಗಿಯ ಮೊಬೈಲ್‌ನಿಂದ ತನ್ನ ಖಾತೆಗೆ 42 ಸಾವಿರ ವರ್ಗಾಯಿಸಿಕೊಂಡಿದ್ದ ನರ್ಸ್ ಬಂಧನ!
ರೋಗಿಯೊಬ್ಬರಿಂದ ಡಿಜಿಟಲ್ ಪೇಮೆಂಟ್ ಮೂಲಕ 42 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡ ಆರೋಪದ ಮೇರೆಗೆ ವೈಟ್‌ಫೀಲ್ಡ್‌ನ ಸಕ್ರ ಆಸ್ಪತ್ರೆಯ ನರ್ಸ್‌ವೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವೈಟ್‌ಫೀಲ್ಡ್ ನಿವಾಸಿ ಆ್ಯನ್ಸಿ ಸ್ಟಾನ್ಲಿ ಬಂಧಿತ ನರ್ಸ್. ಹೇಗೆ ಈ ಘಟನೆ ನಡೆಯಿತು? ಇಲ್ಲಿದೆ ಈ ಬಗ್ಗೆ ಮಾಹಿತಿ.
ಬೆಂಗಳೂರು: ರೋಗಿಯೊಬ್ಬರಿಂದ ಮೂಲಕ 42 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡ ಆರೋಪದ ಮೇರೆಗೆ ವೈಟ್‌ಫೀಲ್ಡ್‌ನ ಸಕ್ರ ಆಸ್ಪತ್ರೆಯ ನರ್ಸ್‌ವೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವೈಟ್‌ಫೀಲ್ಡ್ ನಿವಾಸಿ ಆ್ಯನ್ಸಿ ಸ್ಟಾನ್ಲಿ(23) ಬಂಧಿತ . ಈಕೆ ರೋಗಿಯ ಮೊಬೈಲ್ ಮೂಲಕ ಹಣ ವರ್ಗಾಯಿಸಿಕೊಂಡಿದ್ದರು. ಆದರೆ ರೋಗಿಯು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ರೋಗಿಯ ಕುಟುಂಬದವರಿಗೆ ಮೊಬೈಲ್ ನೀಡುವ ಮುನ್ನ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದ ವಿವರಗಳನ್ನು ಡಿಲೀಟ್ ಮಾಡಿದ್ದರು.
ಮೊದಲಿಗೆ ಮೃತ ಕುಟುಂಬದವರಿಗೆ ಈ ಮಾಹಿತಿ ಗೊತ್ತಿರಲಿಲ್ಲ. ಮೃತ ರಾಜೇಶ್ ಅವರ ಪತ್ನಿಯು ಪತಿಯ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಿದಾಗ ಅದರಲ್ಲಿ 42 ಸಾವಿರ ರೂ. ಡಿಜಿಟಲ್ ಪೇಮೆಂಟ್ ಆಗಿರುವುದು ಪತ್ತೆಯಾಗಿದೆ. ಕೊನೆಗೆ ಅವರು ವೈಟ್‌ಫೀಲ್ಡ್ ಠಾಣೆಯ ಪೊಲೀಸರಿಗೆ ದೂರು ನೀಡಿದರು. ಪರಿಶೀಲನೆ ನಡೆಸಿದಾಗ ನರ್ಸ್ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
''ರೋಗಿಯು ಆಸ್ಪತ್ರೆ ಸೇರಿದ ಬಳಿಕ ಅಲ್ಲಿನ ಚಿಕಿತ್ಸೆಯಿಂದ ಖುಷಿಯಾಗಿದ್ದರು. ಚಿಕಿತ್ಸೆ ನೀಡುತ್ತಿದ್ದ ನರ್ಸ್‌ಗೆ ಸ್ವಲ್ಪ ಹಣ ನೀಡಲು ಮುಂದಾದರು. ಈ ವೇಳೆ ಆಕೆ ಹಣ ಬೇಡ, ಮೊಬೈಲ್ ರಿಚಾರ್ಜ್ ಮಾಡಿಕೊಡಿ ಎಂದು ಹೇಳಿದ್ದರು. ಅದರಂತೆ ಮೇ 22 ರಂದು ರಾಜೇಶ್ ಮೊಬೈಲ್‌ನಿಂದ ಆರೋಪಿಯ ಮೊಬೈಲ್‌ಗೆ 2595 ರೂ. ರೀಚಾರ್ಜ್ ಮಾಡಲಾಗಿದೆ.
ಅದೇ ದಿನ ಸಂಜೆ ಆಕೆಯ ಸ್ನೇಹಿತರ ಖಾತೆಗೆ 20 ಸಾವಿರದಂತೆ ಎರಡು ಬಾರಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಹಣ ವರ್ಗಾವಣೆಯಾಗಿರುವ ಮಾಹಿತಿ ಮೃತ ರಾಜೇಶ್ ಅವರಿಗೆ ಗೊತ್ತಿರಲಿಲ್ಲ. ತನ್ನ ಮೊಬೈಲ್ ರಿಚಾರ್ಜ್ ಮಾಡಿಕೊಂಡ ವೇಳೆ ರೋಗಿಯ ಮೊಬೈಲ್ ಪಾಸ್‌ವರ್ಡ್ ನೋಡಿಕೊಂಡಿದ್ದ ಆರೋಪಿಯು, ಅದೇ ದಿನ ಸಂಜೆ ರೋಗಿಗೆ ಗೊತ್ತಾಗದಂತೆ ಹಣ ವರ್ಗಾವಣೆ ಮಾಡಿಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
''ನನ್ನ ಅಂಕಲ್ ಪಾಶ್ವ ವಾಯುವಿನಿಂದ ಬಳಲುತ್ತಿದ್ದರು. ಕಳೆದ ಜನವರಿಯಿಂದ ಅವರಿಗೆ ನಡೆದಾಡುವುದು ಕಷ್ಟವಿತ್ತು. ನಿಶಕ್ತಿ ಇತ್ತು. ಮೇ 17 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 20ರವರೆಗೂ ಅವರನ್ನು ಮಾತನಾಡಿಸಿ ಅವರ ಆರೋಗ್ಯ ವಿಚಾರಿಸುತ್ತಿದ್ದೆವು. ಬಳಿಕ ಮೇ 22 ರಂದು ಆಸ್ಪತ್ರೆಗೆ ಕರೆ ಮಾಡಿ ವಿಚಾರಿಸಿದಾಗ ರೋಗಿಯು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದರು.
ಇದಾದ ಮರುದಿನವೇ ನಮ್ಮ ಅಂಕಲ್ ತೀರಿಕೊಂಡರು. ನಂತರ ಅವರು ಬಳಸುತ್ತಿದ್ದ ಮೊಬೈಲನ್ನು ನಮಗೆ ಆಸ್ಪತ್ರೆ ಸಿಬ್ಬಂದಿ ನೀಡಿದ್ದರು'' ಎಂದು ಮೃತರ ಸಂಬಂಧಿ ಮಾಹಿತಿ ನೀಡಿದ್ದಾರೆ. ಈಗ ಆರೋಪಿಯಿಂದ ವಶಪಡಿಸಿಕೊಂಡ ಹಣವನ್ನು ರೋಗಿಯ ಸಂಬಂಧಿಕರಿಗೆ ಹಿಂತಿರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.