ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಪ್ರಭಾವ: ಕಾಂಗ್ರೆಸ್‌ಗೆ ಮತ್ತೆ ಕಾಡಿತು ಪರಾಭವ!

ಅಸ್ಸಾಂನ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಮಿತ್ರಪಕ್ಷ ಯುಪಿಪಿಎಲ್ ಪಕ್ಷ ಭರ್ಜರಿ ಜಯ ದಾಖಲಿಸಿವೆ. ಪಕ್ಷ ಕಾಂಗ್ರೆಸ್ ಭಾರೀ ಅಂತರದಲ್ಲಿ ಸೋಲುಂಡಿದೆ.

ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಪ್ರಭಾವ: ಕಾಂಗ್ರೆಸ್‌ಗೆ ಮತ್ತೆ ಕಾಡಿತು ಪರಾಭವ!
Linkup
ದಿಸ್‌ಪುರ್: ಅಸ್ಸಾಂನ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಮತ್ತು ಮಿತ್ರಪಕ್ಷ ಪಕ್ಷ ಭರ್ಜರಿ ಜಯ ದಾಖಲಿಸಿವೆ. ವಿಪಕ್ಷ ಕಾಂಗ್ರೆಸ್ ಭಾರೀ ಅಂತರದಲ್ಲಿ ಸೋಲುಂಡಿದೆ. ಈಶಾನ್ಯ ಭಾರತದ ಇತರ ರಾಜ್ಯಗಳ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಉತ್ತಮ ಸಾಧನೆ ಮಾಡಿವೆ. ಅಸ್ಸಾಂನ ಗೋಸೈಗಾಂವ್, ತಮುಲ್‌ಪುರ್, ತೋರಾ, ಮೈರಾನಿ ಮತ್ತು ಭಭಾನಿಪುರ್ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಿತು. ಈ ಪೈಕಿ ಮೂರರಲ್ಲಿ ಬಿಜೆಪಿ ಮತ್ತು ಎರಡರಲ್ಲಿ ಯುಪಿಪಿಎಲ್ ಪಕ್ಷ ಜಯ ಸಾಧಿಸಿವೆ. ವಿಪಕ್ಷ ಕಾಂಗ್ರೆಸ್ ಒಂದೂ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲಾಗದೇ ಮುಖಭಂಗ ಅನುಭವಿಸಿದೆ. ಇನ್ನು ಚುನಾವಣಾ ಫಲಿತಾಂಶಗಳು ಘೋಷಣೆಯಾದ ಬಳಿಕ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹೀಮಂತ್ ಬಿಸ್ವಾ ಶರ್ಮಾ, ಇದು ರಾಜ್ಯ ಸರ್ಕಾರದ ಅಡಳಿತ ವೈಖರಿಗೆ ಜನರು ನೀಡಿದ ಮನ್ನಣೆ ಎಂದು ಹೇಳಿದ್ದಾರೆ. ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಜನತೆ ಪ್ರಧಾನಿ ಮೋದಿ ಅವರ ಅಡಳಿತ ವೈಖರಿಯನ್ನುಯ ಮೆಚ್ಚಿಕೊಂಡಿದ್ದು, ಉಪಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಗೆಲ್ಲಿಸುವ ಮೂಲಕ ನಮಗೆ ಮತ್ತಷ್ಟು ಶಕ್ತಿ ತುಂಬಿದ್ದಾರೆ ಎಂದು ಶರ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ಅಸ್ಸಾಂನಲ್ಲಿ ನಡೆದ ಉಪಚುನಾವಣೆಗಳಲ್ಲಿ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಮತದಾರ ತನ್ನ ಅಧಿಕೃತ ಮುದ್ರೆಯನ್ನು ಒತ್ತಿದ್ದಾನೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಅಸ್ಸಾಂ ಅಭಿವೃದ್ಧಿಯ ಹೊಸ ಭಾಷ್ಯ ಬರೆಯಲಿರುವುದು ಖಚಿತ ಎಂದು ಹೀಮಂತ್ ಬಿಸ್ವಾ ಶರ್ಮಾ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು. ಇನ್ನು ಮೇಘಾಲಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಎನ್‌ಪಿಪಿ ಎರಡು ಕ್ಷೇತ್ರಗಳಲ್ಲಿ ಮತ್ತು ಯುಡಿಪಿ ಒಂದು ಕ್ಷೇತ್ರದಲ್ಲಿ ಜಯ ಗಳಿಸಿದೆ. ಅದರಂತೆ ಮಿಜೋರಾಂನ ಒಂದು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಭಾರ್ಜರಿ ಜಯ ದಾಖಲಿಸಿದೆ. ಒಟ್ಟಿನಲ್ಲಿ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಪ್ರಭಾವ ಹೆಚ್ಚಾಗಿದ್ದು, ಕಾಂಗ್ರೆಸ್ ಮತ್ತಷ್ಟು ನೆಲ ಕಚ್ಚಿರುವುದು ಸ್ಪಷ್ಟವಾಗಿದೆ.