ಮಹಾರಾಷ್ಟ್ರ: ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ, ನಾಲ್ವರು ರೋಗಿಗಳು ದುರ್ಮರಣ!

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾದಲ್ಲಿ ಈ ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆ ಬೆಂಕಿ ಅವಘಡ ಸಂಭವಿಸಿದೆ. ​​ಇತ್ತೀಚೆಗೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈಯಲ್ಲಿರುವ ವಿಜಯ್ ವಲ್ಲಭ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿ 13 ಮಂದಿ ರೋಗಿಗಳು ಸಜೀವ ದಹನವಾಗಿರುವ ಘಟನೆ ನಡೆದಿತ್ತು.

ಮಹಾರಾಷ್ಟ್ರ: ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ, ನಾಲ್ವರು ರೋಗಿಗಳು ದುರ್ಮರಣ!
Linkup
ಥಾಣೆ: ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಮತ್ತೆ ಸಂಭವಿಸಿದೆ. ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬೆಂಕಿ ದುರಂತ ಸಂಭವಿಸಿದ್ದು ನಾಲ್ಕು ಮಂದಿ ಸಾವನಪ್ಪಿದ್ದಾರೆ. ಮಹಾರಾಷ್ಟ್ರದ ಜಿಲ್ಲೆಯ ಮುಂಬ್ರಾದಲ್ಲಿ ಈ ಇದ್ದು, ಬುಧವಾರ ನಸುಕಿನ ಜಾವ ಸುಮಾರು 3.30ಕ್ಕೆ ಬೆಂಕಿ ಅವಘಡ ಉಂಟಾಗಿದೆ. ಆಸ್ಪತ್ರೆಯ ಒಂದು ಕೋಣೆಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಉಂಟಾಗಿದ್ದು ನಂತರ ಇದು ಇನ್ನಿತರ ಕೋಣೆಗಳಿಗೂ ಹರಡಿದೆ. ಇನ್ನು ಮಾಹಿತಿ ಸಿಕ್ಕ ತಕ್ಷಣ ಅಲ್ಲಿದ್ದ ಸಿಬ್ಬಂದಿ ರೋಗಿಗಳು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿದೆ. ಈ ಮಧ್ಯೆ ನಾಲ್ಕು ಮಂದಿ ಸಾವನಪ್ಪಿದ್ದಾರೆ. ಇನ್ನು ಮಾಹಿತಿ ಸಿಕ್ಕ ತಕ್ಷಣ ಅಗ್ನಿಶಾಮಕ ವಾಹನಗಳು ಮತ್ತು ಇತರ ರಕ್ಷಣಾ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಮತ್ತು ರೋಗಿಗಳನ್ನು ಕಾಪಾಡುವ ಕೆಲಸ ನಡೆಸಿದೆ. ಇನ್ನು ಘಟನೆ ಸಮಯದಲ್ಲಿ ಆಸ್ಪತ್ರೆಯಲ್ಲಿ ಒಟ್ಟು 20 ರೋಗಿಗಳಿದ್ದರು ಎಂದು ತಿಳಿದುಬಂದಿದೆ. ಇನ್ನು ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಜಿತೇಂದ್ರ ಅಹ್ವಾದ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಈ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಇನ್ನು ಘಟನೆಯಲ್ಲಿ ಸಾವನಪ್ಪಿರುವ ರೋಗಿಗಳಿಗೆ ತಲಾ 5 ಲಕ್ಷ ಹಾಗೂ ಗಾಯಗೊಂಡವರಿಗೆ 1 ಲಕ್ಷವನ್ನು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಘೋಷಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈಯಲ್ಲಿರುವ ವಿಜಯ್ ವಲ್ಲಭ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ಸಂಭವಿಸಿ 13 ಮಂದಿ ರೋಗಿಗಳು ಸಜೀವ ದಹನವಾಗಿರುವ ಘಟನೆ ನಡೆದಿತ್ತು. ನಸುಕಿನ ಜಾವ 3 ಗಂಟೆ ಸುಮಾರಿಗೆ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಈ ದುರಂತ ಸಂಭವಿಸಿತ್ತು. ಅದಕ್ಕೂ ಮುನ್ನ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆಯಾಗಿ 20ಕ್ಕೂ ಹೆಚ್ಚು ರೋಗಿಗಳು ಮೃತಪಟ್ಟಿದ್ದರು. ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ ಸರಣಿ ಬೆಂಕಿ ಅವಘಡಗಳು ಸಂಭವಿಸುತ್ತಲೇ ಇದೆ.