ಅಮೆರಿಕದಲ್ಲಿ ಭಾರತವನ್ನು ಅವಮಾನಿಸಿದ ಹಾಸ್ಯ ನಟ; ಕಂಗನಾ ರಣಾವತ್, ಬಿಜೆಪಿ ಲೀಡರ್ ಆಕ್ರೋಶ

ಹಿಂದಿಯ ಕೆಲ ಸಿನಿಮಾಗಳಲ್ಲಿ ನಟಿಸಿರುವ ಸ್ಟ್ಯಾಂಡಪ್ ಕಾಮಿಡಿಯನ್ ವೀರ್ ದಾಸ್ ಅವರು ಅಮೆರಿಕದಲ್ಲಿ ಭಾರತವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಕಂಗನಾ ರಣಾವತ್, ಬಿಜೆಪಿ ನಾಯಕರೊಬ್ಬರು ವೀರ್ ದಾಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಅಮೆರಿಕದಲ್ಲಿ ಭಾರತವನ್ನು ಅವಮಾನಿಸಿದ ಹಾಸ್ಯ ನಟ; ಕಂಗನಾ ರಣಾವತ್, ಬಿಜೆಪಿ ಲೀಡರ್ ಆಕ್ರೋಶ
Linkup
ಹಾಸ್ಯನಟ ವೀರ್‌ ದಾಸ್ ಅವರು ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅಮೆರಿಕದಲ್ಲಿ ನಡೆದ ಇವೆಂಟ್‌ವೊಂದರಲ್ಲಿ ಮಾತನಾಡಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಭಾರತವನ್ನು ಅವಮಾನ ಮಾಡಿದ್ದಕ್ಕೆ ನೆಟ್ಟಿಗರು ವೀರ್ ದಾಸ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವೀರ್ ದಾಸ್ ಹೇಳಿದ್ದೇನು? ದೆಹಲಿಯ ತಿಲಕ್ ಮಾರ್ಗ್ ಪೊಲೀಸ್ ಸ್ಟೇಶನ್‌ನಲ್ಲಿ ವೀರ್ ದಾಸ್ ವಿರುದ್ಧ ದೂರು ದಾಖಲಾಗಿದೆ. "ಮಹಿಳೆಯನ್ನು ಗೌರವಿಸುವ, ರಾತ್ರಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಮಾಡುವ ದೇಶದಿಂದ ನಾನು ಬಂದಿದ್ದೇನೆ. ಅಲ್ಲಿ ಮಾಸ್ಕ್‌ ಹಾಕಿಕೊಂಡು ಮಕ್ಕಳು ಕೈ ಮುಗಿಯುವಾಗ, ನಾಯಕರು ಮಾಸ್ಕ್ ಇಲ್ಲದೆ ಅಪ್ಪಿಕೊಳ್ಳುತ್ತಾರೆ. ಅತಿ ದೊಡ್ಡ ಜನಸಂಖ್ಯೆಯಿರುವ ರಾಷ್ಟ್ರದಿಂದ ಬಂದಿರುವೆ. ಅಲ್ಲಿ 75 ವರ್ಷದ ಮುದುಕರಿಂದ 150 ವರ್ಷ ಹಳೆಯದಾದ ಐಡಿಯಾಗಳನ್ನು ಕೇಳಲಾಗುತ್ತದೆ" ಎಂದು ವೀರ್ ದಾಸ್ ವಿಡಿಯೋದಲ್ಲಿ ಹೇಳಿದ್ದಾರೆ. ಅಮೆರಿಕದ ಜನರ ಮುಂದೆ ಭಾರತದಲ್ಲಿರುವ ಸಮಸ್ಯೆ, ಒಳ್ಳೆಯ ಗುಣಗಳನ್ನು ಕೂಡ ಹಂಚಿಕೊಂಡಿದ್ದಾರೆ. ಒಟ್ಟಾರೆಯಲ್ಲಿ ಭಾರತದಲ್ಲಿ ಏನಿದೆ? ಏನಿಲ್ಲ ಎಂಬುದನ್ನು ಅವರು ಹೇಳಿದ್ದಾರೆ. ಆಕ್ರೋಶ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ವೀರ್ ದಾಸ್‌ಗೆ ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. "ಎಲ್ಲ ಭಾರತೀಯ ಪುರುಷರು ರೇಪಿಸ್ಟ್‌ಗಳು ಎಂದು ಸಾಮಾನ್ಯವಾಗಿ ಹೇಳಿದರೆ ವಿಶ್ವದಾದ್ಯಂತ ಭಾರತವನ್ನು ವರ್ಣಬೇಧ ನೀತಿ, ಬೆದರಿಸುವಿಕೆಗೆ ಉತ್ತೇಜನ ನೀಡಿದಂತಾಗುತ್ತದೆ. ಬಂಗಾಳದ ಬರಗಾಲದ ನಂತರ ಚರ್ಚಿಲ್ 'ಈ ಭಾರತೀಯರು ಮೊಲಗಳಿದ್ದಂತೆ, ಆದರೆ ಅವರು ಈ ರೀತಿ ಸಾಯುತ್ತಾರೆ' ಎಂದಿದ್ದರು. ಹಸಿವಿನಿಂದ ಸಾಯುವ ಮಿಲಿಯನ್‌ಗಟ್ಟಲೇ ಜನರಿಗೆ ಅವರ ಲೈಂಗಿಕ ಬಯಕೆ ಕಾರಣ ಎಂದು ದೂಷಿಸಿದರು. ಇದು ಮೃದುವಾದ ಭಯೋತ್ಪಾದಕತೆಗೆ ದಾರಿ ಮಾಡಿಕೊಡುತ್ತದೆ. ಇಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಕಂಗನಾ ಹೇಳಿದ್ದಾರೆ. ಸ್ಪಷ್ಟನೆ ನೀಡಿದ ವೀರ್ ದಾಸ್ ನಾನು ಯೂಟ್ಯೂಬ್‌ನಲ್ಲಿ ಹಂಚಿಕೊಂಡ ವಿಡಿಯೋ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಭಿನ್ನ ಕೆಲಸಗಳನ್ನು ಮಾಡುವ ಎರಡು ಪ್ರತ್ಯೇಕ ಭಾರತದ ದ್ವಂದ್ವತೆಯ ಕುರಿತಾದ ವಿಡಂಬನೆ ಅಲ್ಲಿದೆ. ಯಾವುದೇ ರಾಷ್ಟ್ರದಲ್ಲಿಯೂ ಬೆಳಕು ಮತ್ತು ಕತ್ತಲೆ, ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ಅದೇನೂ ಗುಟ್ಟಲ್ಲ. ನಾವು ಶ್ರೇಷ್ಠರು ಎಂಬುದನ್ನು ಎಂದಿಗೂ ಮರೆಯಬಾರದು ಎಂದು ವಿಡಿಯೋ ಮನವಿ ಮಾಡುತ್ತದೆ. ನಮ್ಮನ್ನು ಶ್ರೇಷ್ಠರು ಎಂದು ಹೇಳುವುದರ ಮೇಲೆ ಕೇಂದ್ರೀಕರಿಸುವುದನ್ನು ಎಂದಿಗೂ ನಿಲ್ಲಿಸಬಾರದು. ನಾವೆಲ್ಲರೂ ಪ್ರೀತಿಸುವ, ನಂಬುವ ಮತ್ತು ಹೆಮ್ಮೆಪಡುವ ದೇಶಕ್ಕೆ ದೇಶಭಕ್ತಿಯ ಚಪ್ಪಾಳೆ ಹೊಡೆಯುತ್ತೇವೆ, ಅದೇ ಎಲ್ಲವೂ" ಎಂದು ವೀರ್ ದಾಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದಾರೆ. ವೀರ್ ದಾಸ್ ಬಂಧಿಸಲು ಒತ್ತಾಯ ದೆಹಲಿಯಲ್ಲಿ ಬಿಜೆಪಿ ಲೀಡರ್ ಆದಿತ್ಯ ಜಾ ಮಾತನಾಡಿ "ಬೇರೆ ದೇಶದ ಮುಂದೆ ನಮ್ಮ ದೇಶವನ್ನು ಅವಮಾನ ಮಾಡುವ ಘಟನೆಯನ್ನು ನಾನು ಸಹಿಸಲಾರೆ. ವೀರ್ ದಾಸ್ ಬಂಧಿಸಲು ಹೋರಾಟ ಮಾಡುವೆ. ಮುಂದೆ ಯಾರೂ ಕೂಡ ನಮ್ಮ ದೇಶವನ್ನು ಅವಮಾನ ಮಾಡಬಾರದು" ಎಂದಿದ್ದಾರೆ. ವೀರ್ ದಾಸ್ ಯಾರು?'Delhi Belly', 'Badmaash Company' and 'Go Goa Gone' ಮುಂತಾದ ಬಾಲಿವುಡ್‌ನ 18 ಪ್ರಾಜೆಕ್ಟ್‌ಗಳಲ್ಲಿ ವೀರ್ ದಾಸ್ ನಟಿಸಿದ್ದಾರೆ, 100ಕ್ಕೂ ಅಧಿಕ ಸ್ಟ್ಯಾಂಡಪ್ ಕಾಮಿಡಿ ಮಾಡಿದ್ದಾರೆ. ಸ್ಟ್ಯಾಂಡಪ್ ಕಾಮಿಡಿ ಮಾಡುವ ವೀರ್ ದಾಸ್‌ಗೆ ಈಗ 42ರ ಹರೆಯ.