ನಾನು ಪರ್ಫೆಕ್ಟ್ ಅಲ್ಲದಿದ್ರೂ ಸ್ಟ್ರಾಂಗ್ ಆಗಿದ್ದೀನಿ, ಬಿಟ್ಟುಕೊಡುವ ಮಾತೇ ಇಲ್ಲ: ಸಮಂತಾ

ನಟಿ ಸಮಂತಾ ಅವರು ನಾಗ ಚೈತನ್ಯರಿಂದ ದೂರ ಆದನಂತರದಲ್ಲಿ ಅವರ ಬಗ್ಗೆ ಅಂತೆ-ಕಂತೆ ಪುರಾಣಗಳು ಕೇಳಿ ಬಂದಿದ್ದವು. ಅದಕ್ಕೆಲ್ಲ ಸಮಂತಾ ಚೆನ್ನಾಗಿಯೇ ಉತ್ತರ ನೀಡುತ್ತಿರುತ್ತಾರೆ, ಈಗ ಅವರು ತಾನು ಸ್ಟ್ರಾಂಗ್ ಎಂಬ ಸಂದೇಶ ನೀಡಿದ್ದಾರೆ.

ನಾನು ಪರ್ಫೆಕ್ಟ್ ಅಲ್ಲದಿದ್ರೂ ಸ್ಟ್ರಾಂಗ್ ಆಗಿದ್ದೀನಿ, ಬಿಟ್ಟುಕೊಡುವ ಮಾತೇ ಇಲ್ಲ: ಸಮಂತಾ
Linkup
ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಅವರು ಸಾಕಷ್ಟು ಫೋಟೋ, ವಿಡಿಯೋ, ವಿಚಾರಧಾರೆ ಹಂಚಿಕೊಳ್ಳುತ್ತಿರುತ್ತಾರೆ. ಈಗ ಅವರು "ನಾನು ಪರ್ಫೆಕ್ಟ್ ಅಲ್ಲ, ನಾನು ಸ್ಟ್ರಾಂಗ್ ಆಗಿದ್ದೇನೆ, ಎಂದಿಗೂ ಬಿಟ್ಟು ಕೊಡೋದಿಲ್ಲ" ಎಂಬ ಮಾತುಗಳನ್ನೆಲ್ಲ ಆಡಿದ್ದಾರೆ. ಸಮಂತಾ ಹೇಳಿದ್ದೇನು? "ನಾನು ಸ್ಟ್ರಾಂಗ್ ಆಗಿದ್ದೇನೆ. ನಾನು ಚೇತರಿಸಿಕೊಳ್ಳುವ ಮನಸ್ಥಿತಿ ಹೊಂದಿದ್ದೇನೆ. ನಾನು ಪರಿಪೂರ್ಣ ಅಲ್ಲದಿದ್ದರೂ ನನಗೆ ನಾನೇ ಪರಿಪೂರ್ಣ. ನಾನು ಎಂದಿಗೂ ಬಿಟ್ಟುಕೊಡೋದಿಲ್ಲ. ನಾನು ಪ್ರೀತಿಸುವ ಮನೋಭಾವದವಳು. ನಾನು ಮನುಷ್ಯಳೂ ಹೌದು, ಯೋಧೆಯೂ ಹೌದು" ಎಂದು ನಟಿ ಸಮಂತಾ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ. ಅದರ ಜೊತೆ #MyMommaSaid ಅಂತ ಹ್ಯಾಶ್ ಟ್ಯಾಗ್ ಕೂಡ ನೀಡಿದ್ದಾರೆ. ಶಶಾ ಎಂಬ ಸಮಂತಾರ ಮುದ್ದಿನ ನಾಯಿಯ ಫೋಟೋವನ್ನು ಕೂಡ ಸಮಂತಾ ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮಗಳ ಮದುವೆಗೆ ಹಣ ಕೂಡಿಡುವ ಬದಲು ಶಿಕ್ಷಣ ಕೊಡುವತ್ತ ಗಮನಹರಿಸಿ ಎಂದು ಸಮಂತಾ ಅವರು ಹೆಣ್ಣು ಮಕ್ಕಳ ಪಾಲಕರಿಗೆ ತಿಳಿ ಹೇಳಿದ್ದರು. ಮೂಲತಃ ಹಾಕಿ ಟೀಂ ಕ್ಯಾಪ್ಟನ್ ರಾಣಿ ರಾಮ್‌ಪಾಲ್ ಅವರ ಪೋಸ್ಟ್‌ ಅದಾಗಿತ್ತು. ನಾಗ ಚೈತನ್ಯರಿಂದ ವಿಚ್ಛೇದನ ನಾಗ ಚೈತನ್ಯರಿಂದ ವಿಚ್ಛೇದನ ಪಡೆಯುತ್ತಿದ್ದಂತೆ ಸಮಂತಾ ಬಗ್ಗೆ ಕೆಲವರು ಇಲ್ಲ ಸಲ್ಲದ ಮಾತುಗಳನ್ನಾಡಿದರು, ಇನ್ನೂ ಕೆಲವರು ಕಾಳಜಿ ತೋರಿಸಿದರು, ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಸಮಂತಾ ತಾನು ಸ್ಟ್ರಾಂಗ್ ಎಂದು ಹೇಳಲು ಈ ರೀತಿ ಪೋಸ್ಟ್ ಹಾಕಿದ್ದಾರಾ ಎಂಬ ಅನುಮಾನ ಶುರುವಾಗಿದೆ. ಸಮಂತಾ ಮಧ್ಯೆ ಸರಿ ಇಲ್ಲ ಅಂತ ಅವರು ವಿಚ್ಛೇದನದ ವಿಷಯವನ್ನು ಅಧಿಕೃತಪಡಿಸುವ ತಿಂಗಳುಗಳ ಮುಂಚೆಯೇ ಸಿಕ್ಕಾಪಟ್ಟೆ ಗುಲ್ಲಾಗಿತ್ತು. ಆದರೆ ಆರಂಭದಲ್ಲಿ ಅವರಿಬ್ಬರೂ ಪ್ರತಿಕ್ರಿಯೆ ನೀಡಿರಲಿಲ್ಲ. ಮನೆಯ ಕಾರ್ಯಕ್ರಮಗಳಿಗೆ ಸಮಂತಾ ಗೈರಾದಾಗ ಅನುಮಾನ ಬಲವಾಗಿತ್ತು. ನಾಗ ಚೈತನ್ಯ ತಂದೆ ಅಕ್ಕಿನೇನಿ ನಾಗಾರ್ಜುನ ಬರ್ತ್‌ಡೇ ಪಾರ್ಟಿ, ಅಕ್ಕಿನೇನಿ ಮನೆಗೆ ಆಮೀರ್ ಖಾನ್ ಬಂದಾಗ, ಲವ್ ಸ್ಟೋರಿ ಸಿನಿಮಾ ಯಶಸ್ಸಿನ ಪಾರ್ಟಿಯಲ್ಲಿ ಸಮಂತಾ ಗೈರಾಗಿದ್ದರು. ಇನ್ನು ಪತಿ ಬಿಟ್ಟು ಸಮಂತಾ ಸಿಕ್ಕಾಪಟ್ಟೆ ಊರೂರು ತಿರುಗುತ್ತಿದ್ದರು. ತನ್ನ ಬಗ್ಗೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡಿರುವ ವಿಡಿಯೋಗಳನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ಆರೋಪಿಸಿ ನಟಿ ಸಮಂತಾ ಹೈದರಾಬಾದ್ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನಂತರದಲ್ಲಿ ಹೈದರಾಬಾದ್ ಕೋರ್ಟ್, ಸಮಂತಾರ ಬಗ್ಗೆ ಆರೋಪ ಮಾಡಿರುವ, ಆಧಾರರಹಿತ ಕಂಟೆಂಟ್‌ ಹೊಂದಿರುವ ವಿಡಿಯೋಗಳನ್ನು ಸಂಪೂರ್ಣವಾಗಿ ಯುಟ್ಯೂಬ್‌ ಚಾನೆಲ್‌ನಿಂದ ಡಿಲಿಟ್ ಮಾಡುವಂತೆ ತೀರ್ಪು ನೀಡಿತ್ತು. ಸಮಂತಾ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸಿರೀಸ್‌ನಲ್ಲಿ ಡಿಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಂಡ ನಂತರದಲ್ಲಿ ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಸಮಂತಾರನ್ನು ಅರಸಿ ಬರುತ್ತಿರುವ ಪಾತ್ರಗಳು ಕೂಡ ತುಂಬ ವಿಭಿನ್ನವಾಗುತ್ತಿದೆಯಂತೆ. ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಸಮಂತಾ ಬ್ಯುಸಿಯಾಗುವ ಎಲ್ಲ ಲಕ್ಷಣ ಕಾಣಿಸುತ್ತಿದೆ.