ಅನ್ನದಾತರ ಆಶಾಕಿರಣವಾದ ಉಪೇಂದ್ರ: ರೈತರಿಂದ ನೇರವಾಗಿ ಟೊಮ್ಯಾಟೊ, ಈರುಳ್ಳಿ, ಕುಂಬಳಕಾಯಿ ಖರೀದಿ

ದೇಣಿಗೆ ರೂಪದಲ್ಲಿ ಬಂದ ಹಣದಿಂದ ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆ ವ್ಯಾಪಾರವಾಗದೆ ಸಂಕಷ್ಟದಲ್ಲಿ ಇರುವ ರೈತರ ಬೆಳೆಯನ್ನು ಖರೀದಿ ಮಾಡಿ, ಅದನ್ನು ದಿನಸಿ ಕಿಟ್ ಜೊತೆಗೆ ವಿತರಿಸಲು ಉಪೇಂದ್ರ ಪ್ಲಾನ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ರೈತರಿಂದ ನೇರವಾಗಿ ಟೊಮ್ಯಾಟೊ, ಈರುಳ್ಳಿ, ಕುಂಬಳಕಾಯಿ ಖರೀದಿ ಮಾಡಿದ್ದಾರೆ ಉಪೇಂದ್ರ.

ಅನ್ನದಾತರ ಆಶಾಕಿರಣವಾದ ಉಪೇಂದ್ರ: ರೈತರಿಂದ ನೇರವಾಗಿ ಟೊಮ್ಯಾಟೊ, ಈರುಳ್ಳಿ, ಕುಂಬಳಕಾಯಿ ಖರೀದಿ
Linkup
ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯನ್ನು ನಿಯಂತ್ರಿಸಲು ವಿಧಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅದರಲ್ಲೂ ಚಿತ್ರರಂಗವನ್ನೇ ನಂಬಿರುವ ಮೂರು ಸಾವಿರಕ್ಕೂ ಅಧಿಕ ಕುಟುಂಬಗಳು ಕೆಲಸವಿಲ್ಲದೆ, ಕೈಯಲ್ಲಿ ಕಾಸಿಲ್ಲದೆ ಪರದಾಡುತ್ತಿದ್ದಾರೆ. ಅಂತಹ ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸುವ ಮೂಲಕ ನೆರವಾಗಲು ರಿಯಲ್ ಸ್ಟಾರ್ ನಿರ್ಧರಿಸಿದ್ದಾರೆ. ಉಪೇಂದ್ರ ಜೊತೆಗೆ ಶೋಭರಾಜ್, ಸಾಧು ಕೋಕಿಲ, ಪವನ್ ಒಡೆಯರ್, ಸರೋಜಾ ದೇವಿ, ಮಾನ್ಯ ಸೇರಿದಂತೆ ಹಲವರು ಕೈಜೋಡಿಸಿದ್ದು ದೇಣಿಗೆ ನೀಡಿದ್ದಾರೆ. ಕಲಾ ಬಂಧುಗಳ ಕಷ್ಟ ನಿವಾರಿಸಲು ಮುಂದಾಗಿರುವ ಉಪೇಂದ್ರ, ರಿಗೂ ಸಹಾಯ ಮಾಡಲು ಮನಸ್ಸು ಮಾಡಿದ್ದಾರೆ. ಕೊರೊನಾ ಸಂಕಷ್ಟದಿಂದಾಗಿ ರೈತರು, ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ಕಷ್ಟಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ನೇರವಾಗಿ ರೈತರಿಂದಲೇ ಬೆಳೆ ಖರೀದಿಸಿ, ಅಗತ್ಯವಿರುವವರಿಗೆ ಉಪೇಂದ್ರ ತರಕಾರಿಯನ್ನು ಹಂಚುತ್ತಿದ್ದಾರೆ. ದೇಣಿಗೆ ರೂಪದಲ್ಲಿ ಬಂದ ಹಣದಿಂದ ಲಾಕ್‌ಡೌನ್‌ನಿಂದಾಗಿ ಬೆಳೆದ ಬೆಳೆ ವ್ಯಾಪಾರವಾಗದೆ ಸಂಕಷ್ಟದಲ್ಲಿ ಇರುವ ರೈತರ ಬೆಳೆಯನ್ನು ಖರೀದಿ ಮಾಡಿ, ಅದನ್ನು ದಿನಸಿ ಕಿಟ್ ಜೊತೆಗೆ ವಿತರಿಸಲು ಉಪೇಂದ್ರ ಪ್ಲಾನ್ ಮಾಡಿದ್ದಾರೆ. ಈ ನಿಟ್ಟಿನಲ್ಲಿ ರೈತರಿಂದ ನೇರವಾಗಿ ಟೊಮ್ಯಾಟೊ, ಈರುಳ್ಳಿ, ಕುಂಬಳಕಾಯಿ ಖರೀದಿ ಮಾಡಿದ್ದಾರೆ ಉಪೇಂದ್ರ. ಲಾಭ ಪಡೆಯದ ರೈತ ಒಂದ್ಕಡೆ ಕೋವಿಡ್-19 ಇನ್ನೊಂದ್ಕಡೆ .. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಇನ್ನೊಬ್ಬರಿಗೆ ಸಹಾಯ ಹಸ್ತ ಚಾಚುತ್ತಿರುವ ಉಪೇಂದ್ರ ಬಳಿ ಟೊಮ್ಯಾಟೊ ಬೆಳೆದ ರೈತ ಚಿಕ್ಕಬಳ್ಳಾಪುರದ ಶಿವಕುಮಾರ್ ಲಾಭ ಪಡೆಯದೆ ಬರೀ ಅಸಲು ಮತ್ತು ಸಾಗಾಣಿಕೆ ವೆಚ್ಚ - 10 ಸಾವಿರ ರೂಪಾಯಿಯನ್ನು ಮಾತ್ರ ಪಡೆದಿದ್ದಾರೆ. ಅನ್ನದಾತರ ಈ ದೊಡ್ಡ ಗುಣಕ್ಕೆ ಉಪೇಂದ್ರ ಸಲಾಂ ಹೊಡೆದಿದ್ದಾರೆ. 3 ಸಾವಿರ ಕೆ.ಜಿ ಈರುಳ್ಳಿ ಖರೀದಿಸಿದ ಉಪೇಂದ್ರ ಹಿರಿಯೂರಿನ ಮಹೇಶ್ ಎಂಬುವರು 3 ಸಾವಿರ ಕೆ.ಜಿ ಈರುಳ್ಳಿ ಹಾಗೂ ಸಾರಿಗೆ ವೆಚ್ಚ ಸೇರಿ 37 ಸಾವಿರ ರೂಪಾಯಿ ಪಡೆದಿದ್ದಾರೆ. ಸಿಹಿ ಕುಂಬಳಕಾಯಿ 3640 ಕೆ.ಜಿ ಸಿಹಿ ಕುಂಬಳಕಾಯಿಗೆ ಮಂಜುನಾಥ್ ಎಂಬ ರೈತರಿಗೆ ಉಪೇಂದ್ರ 23,000 ರೂಪಾಯಿ ನೀಡಿದ್ದಾರೆ. ಒಟ್ನಲ್ಲಿ, ಈ ಸಂಕಷ್ಟ ಸಮಯದಲ್ಲೂ ಅನ್ನದಾತರಿಗೆ ಉಪೇಂದ್ರ ಆಶಾಕಿರಣವಾಗಿದ್ದಾರೆ.