ಅದಾನಿ ಕಂಪನಿಗಳ ಬಗ್ಗೆ ಸೆಬಿ, ಡಿಆರ್‌ಐನಿಂದ ತನಿಖೆ - ಕೇಂದ್ರ ಸಚಿವ

ಅದಾನಿ ಸಮೂಹದ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ಮಾರಿಷಸ್‌ ಮೂಲದ 6 ಫಂಡ್‌ಗಳ ಖಾತೆಗಳ ಪೈಕಿ 3 ಫಂಡ್‌ಗಳ ಬಗ್ಗೆ ಸೆಬಿ ತನಿಖೆ ನಡೆಸುತ್ತಿದೆ ಎಂದಿರುವ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್‌ ಚೌಧರಿ, ಡಿಆರ್‌ಐ ಕೂಡ ಕೆಲ ಕಂಪನಿಗಳ ಬಗ್ಗೆ ತನಿಖೆ ಕೈಗೊಂಡಿದೆ ಎಂದು ತಿಳಿಸಿದ್ದಾರೆ

ಅದಾನಿ ಕಂಪನಿಗಳ ಬಗ್ಗೆ ಸೆಬಿ, ಡಿಆರ್‌ಐನಿಂದ ತನಿಖೆ - ಕೇಂದ್ರ ಸಚಿವ
Linkup
ಹೊಸದಿಲ್ಲಿ: ಅದಾನಿ ಗ್ರೂಪ್‌ನ ಕೆಲ ಕಂಪನಿಗಳ ಬಗ್ಗೆ ಮತ್ತು ಕಸ್ಟಮ್ಸ್‌ ಅಧಿಕಾರಿಗಳು ಮಾರುಕಟ್ಟೆ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಸೋಮವಾರ ಲೋಕಸಭೆಗೆ ತಿಳಿಸಿದ್ದಾರೆ. ಅದಾನಿ ಸಮೂಹದ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿರುವ ಮಾರಿಷಸ್‌ ಮೂಲದ 6 ಫಂಡ್‌ಗಳ ಖಾತೆಗಳ ಪೈಕಿ ಮೂರು ಫಂಡ್‌ಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. 2016ರಲ್ಲಿ ಈ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಸೆಬಿಯ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ತನಿಖೆ ನಡೆಯುತ್ತದೆ ಎಂದು ಸಚಿವರು ತಿಳಿಸಿದ್ದು, ವಿವರ ಬಹಿರಂಗಪಡಿಸಿಲ್ಲ. ಕಂದಾಯ ಇಲಾಖೆಯ ವಿಚಕ್ಷಣ ದಳ () ಕೂಡ ಕೆಲ ಕಂಪನಿಗಳ ಬಗ್ಗೆ ತನಿಖೆ ಕೈಗೊಂಡಿದೆ ಎಂದವರು ತಿಳಿಸಿದ್ದಾರೆ. ಹೀಗಿದ್ದರೂ ಜಾರಿ ನಿರ್ದೇಶನಾಲಯವು ಬಗ್ಗೆ ತನಿಖೆ ನಡೆಸುತ್ತಿಲ್ಲ ಎಂದರು. ಅದಾನಿ ಗ್ರೂಪ್‌ ಯಾವಾಗಲೂ ಸೆಬಿಯ ನಿಯಮಾವಳಿಗಳನ್ನು ಪಾಲಿಸಿದ್ದು, ಇತ್ತೀಚೆಗೆ ಸೆಬಿಯಿಂದ ಯಾವುದೇ ನೋಟಿಸ್‌ ಸ್ವೀಕರಿಸಿಲ್ಲ ಎಂದು ಗ್ರೂಪ್‌ನ ವಕ್ತಾರರು ತಿಳಿಸಿದ್ದಾರೆ. ಡಿಆರ್‌ಐ ಸುಮಾರು 5 ವರ್ಷಗಳ ಹಿಂದೆ, ಅದಾನಿ ಪವರ್‌ಗೆ ನೋಟಿಸ್‌ ಜಾರಿಗೊಳಿಸಿತ್ತು. ನಂತರ ತನಿಖೆ ನಡೆಸಿ ಅದಾನಿ ಪವರ್‌ ಪರ ಆದೇಶ ಹೊರಡಿಸಿತ್ತು ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.