ಕೇಂದ್ರ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌, ತುಟ್ಟಿ ಭತ್ಯೆ 3% ಹೆಚ್ಚಳ

ತುಟ್ಟಿ ಭತ್ಯೆ ಮತ್ತು ಡಿಆರ್‌ ಏರಿಕೆಯ ಘೋಷಣೆಯಿಂದ ಕೇಂದ್ರ ಸರಕಾರದ 47.14 ಲಕ್ಷ ಉದ್ಯೋಗಿಗಳು, 68.62 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಪ್ರತಿ ವರ್ಷ 9,488.70 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.

ಕೇಂದ್ರ ಸರಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌, ತುಟ್ಟಿ ಭತ್ಯೆ 3% ಹೆಚ್ಚಳ
Linkup
ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರಿಗೆ ಹೆಚ್ಚುವರಿ () ಬಿಡುಗಡೆಗೆ ಕೇಂದ್ರ ಸಂಪುಟ ಸಭೆ ಗುರುವಾರ ಅನುಮೋದನೆ ನೀಡಿದೆ. ಪಿಂಚಣಿದಾರರಿಗೆ ಡಿಯರ್‌ನೆಸ್‌ ರಿಲೀಫ್‌ (ಡಿಆರ್‌) ಬಿಡುಗಡೆಗೂ ಅನುಮೋದನೆ ನೀಡಲಾಗಿದೆ. ಜುಲೈ 1, 2021ರಿಂದಲೇ ಇದು ಅನ್ವಯವಾಗಲಿದೆ. ತುಟ್ಟಿ ಭತ್ಯೆ ಮತ್ತು ಡಿಆರ್‌ ಏರಿಕೆಯ ಘೋಷಣೆಯಿಂದ ಕೇಂದ್ರ ಸರಕಾರದ 47.14 ಲಕ್ಷ ಉದ್ಯೋಗಿಗಳು ಹಾಗೂ 68.62 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ತುಟ್ಟಿ ಭತ್ಯೆ ಹಾಗೂ ಡಿಆರ್‌ ಹೆಚ್ಚಳದಿಂದ ಸರಕಾರದ ಬೊಕ್ಕಸಕ್ಕೆ ಪ್ರತಿ ವರ್ಷ 9,488.70 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ. ಸೆಪ್ಟೆಂಬರ್‌ನಲ್ಲಿ, ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ವೆಚ್ಚ ಇಲಾಖೆಯು, ನಿವೃತ್ತ ಕೇಂದ್ರ ಸರ್ಕಾರಿ ನೌಕರರು ನಗದು ಪಾವತಿ ಮತ್ತು ಗ್ರಾಚ್ಯುಟಿ ಪಡೆಯಲಿದ್ದಾರೆ ಎಂದು ತಿಳಿಸಿತ್ತು. ಇದಕ್ಕೂ ಮೊದಲು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೀಡಲಾಗುವ ಡಿಎ ಮತ್ತು ಡಿಯರ್‌ನೆಸ್‌ ರಿಲೀಫ್ (ಡಿಆರ್) ಅನ್ನು ಶೇ. 17 ರಿಂದ ಶೇ. 28ಕ್ಕೆ ಹೆಚ್ಚಿಸಲು ಕೇಂದ್ರವು ಅನುಮೋದನೆ ನೀಡಿತ್ತು. ಕೋವಿಡ್ -19 ಸಾಂಕ್ರಾಮಿಕದ ದೃಷ್ಟಿಯಿಂದ, ಸರ್ಕಾರವು ಡಿಎ ಮತ್ತು ಡಿಆರ್‌ನ ಹೆಚ್ಚುವರಿ ಕಂತುಗಳನ್ನು ಸ್ಥಗಿತಗೊಳಿಸಿದೆ. ಜುಲೈ 1 ರಿಂದ ಜಾರಿಗೆ ಬರುವ ಕೇಂದ್ರದ ಡಿಎ ಹೆಚ್ಚಳದಲ್ಲಿ, ಒಂದೊಮ್ಮೆ ಹಿಂದಿನ ಅವಧಿಯಲ್ಲಿ ಡಿಎ ಪರಿಷ್ಕರಣೆ ಮಾಡದಿದ್ದಲ್ಲಿ ನೌಕರರು ಯಾವುದೇ ಬಾಕಿಯನ್ನು ಪಡೆಯುವುದಿಲ್ಲ ಎಂದು ಹೇಳಲಾಗಿದೆ.