ಅಕ್ಕಿ , ಗೋಧಿ ವಿತರಣೆಗೂ ಬಂತು ಎಟಿಎಂ! ಹರಿಯಾಣದಲ್ಲಿ ಮೊದಲ ಪ್ರಯೋಗ!

ಹರಿಯಾಣದ ಗುರುಗ್ರಾಮದ ಫರೂಕ್‌ನಗರದಲ್ಲಿ ಆಹಾರ ಧಾನ್ಯಗಳ ವಿತರಣೆಗೆ ಎಟಿಎಂ ಅಸ್ತಿತ್ವಕ್ಕೆ ಬಂದಿದೆ. ಅಕ್ಕಿ, ಗೋಧಿ, ಕಿರು ಧಾನ್ಯಗಳನ್ನು ಈ ಎಟಿಎಂ ಮೂಲಕ ಜನತೆ ಪಡೆಯಬಹುದು. ವಿಶ್ವ ಆಹಾರ ಕಾರ್ಯಕ್ರಮ ಯೋಜನೆಯ ಅಡಿಯಲ್ಲಿ ಈ ಎಟಿಎಂ ತೆರೆಯಲಾಗಿದೆ.

ಅಕ್ಕಿ , ಗೋಧಿ ವಿತರಣೆಗೂ ಬಂತು ಎಟಿಎಂ! ಹರಿಯಾಣದಲ್ಲಿ ಮೊದಲ ಪ್ರಯೋಗ!
Linkup
: ತಂತ್ರಜ್ಞಾನದ ಪರಿಣಾಮ ಮುಂಬರುವ ದಿನಗಳಲ್ಲಿ ಆಹಾರ ಧಾನ್ಯಗಳ ವಿತರಣೆಯಲ್ಲಿ ಭಾರಿ ಸುಧಾರಣೆ ಆಗಲಿದೆ. ಎಟಿಎಂನಲ್ಲಿನೀವು ಹೇಗೆ ನಗದು ಪಡೆಯುತ್ತೀರೋ, ಅದೇ ರೀತಿ ಆಹಾರ ಧಾನ್ಯಗಳನ್ನು ಕೂಡ ಪಡೆಯುವ ದಿನ ದೂರವಿಲ್ಲ! ಹರಿಯಾಣದಲ್ಲಿ ಮೊಟ್ಟ ಮೊದಲ ಬಾರಿಗೆ ಆಹಾರ ಧಾನ್ಯಗಳನ್ನು ವಿತರಿಸುವ ಎಟಿಎಂ ಅಸ್ತಿತ್ವಕ್ಕೆ ಬಂದಿದೆ! ಏನಿದು ಧಾನ್ಯ ವಿತರಣೆಯ ಎಟಿಎಂ? ಹರಿಯಾಣದ ಗುರುಗ್ರಾಮದ ಫರೂಕ್‌ನಗರದಲ್ಲಿ ಆಹಾರ ಧಾನ್ಯಗಳ ವಿತರಣೆಗೆ ಎಟಿಎಂ ಅಸ್ತಿತ್ವಕ್ಕೆ ಬಂದಿದೆ. ಅಕ್ಕಿ, ಗೋಧಿ, ಕಿರು ಧಾನ್ಯಗಳನ್ನು ಈ ಎಟಿಎಂ ಮೂಲಕ ಜನತೆ ಪಡೆಯಬಹುದು. ಹರಿಯಾಣದ ಉಪ ಮುಖ್ಯಮಂತ್ರಿ ದುಷ್ಯಂತ್‌ ಚೌಟಾಲಾ ಟ್ವಿಟರ್‌ ಮೂಲಕ ಈ ಎಟಿಎಂ ಬಗ್ಗೆ ಘೋಷಿಸಿದ್ದಾರೆ. ರೇಷನ್‌ ಅಂಗಡಿಗಳಲ್ಲಿ ಸುಲಭ ಮತ್ತು ಸಮರ್ಪಕ ಪ್ರಮಾಣದಲ್ಲಿ ಪಡಿತರ ವಿತರಣೆ ಈ ಎಟಿಎಂನ ಉದ್ದೇಶ. ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ ಯೋಜನೆಯ ಅಡಿಯಲ್ಲಿ ಈ ಎಟಿಎಂ ತೆರೆಯಲಾಗಿದೆ. ಕಾರ್ಯನಿರ್ವಹಣೆ ಹೇಗೆ? ಒಬ್ಬ ವ್ಯಕ್ತಿ ತನ್ನ ಆಧಾರ್‌ ಕಾರ್ಡ್‌ ಅಥವಾ ರೇಷನ್‌ ಕಾರ್ಡ್‌ ಸಂಖ್ಯೆ ಬಳಸಿ ಎಟಿಎಂನಲ್ಲಿ ಆಹಾರ ಧಾನ್ಯ ಪಡೆಯಬಹುದು. 70 ಕೆ.ಜಿ ಧಾನ್ಯವನ್ನು 5ರಿಂದ 7 ನಿಮಿಷದೊಳಗೆ ಪಡೆಯಬಹುದು. ಟಚ್‌ ಸ್ಕ್ರೀನ್‌ ನೊಂದಿಗೆ ಬಯೊ ಮೆಟ್ರಿಕ್‌ ವ್ಯವಸ್ಥೆ ಇದರಲ್ಲಿದೆ. ಈ ಪ್ರಯೋಗ ಯಶಸ್ವಿಯಾದರೆ ರಾಜ್ಯದ ನಾನಾ ಕಡೆಗೆ ವಿಸ್ತರಿಸಲು ಸರಕಾರ ನಿರ್ಧರಿಸಿದೆ. ಫಲಾನುಭವಿಗಳಿಗೆ ತೂಕದಲ್ಲಿ ಮೋಸವಾಗದಂತೆ ಸಮರ್ಪಕ ಪ್ರಮಾಣದಲ್ಲಿ ಆಹಾರ ಧಾನ್ಯ ವಿತರಣೆಯಾಗುವುದು ಇದರ ಉದ್ದೇಶಗಳಲ್ಲೊಂದು ಎಂದು ಸರಕಾರ ತಿಳಿಸಿದೆ. ಬಳಕೆದಾರರಿಗೆ ಅನುಕೂಲ: ಅಕ್ಕಿ, ಗೋಧಿ, ಕಿರು ಧಾನ್ಯ ವಿತರಣೆಗೆ ರೇಷನ್‌ ಅಂಗಡಿಗಳಲ್ಲಿ ಸರದಿ ನಿಲ್ಲುವುದನ್ನು ತಪ್ಪಿಸಬಹುದು. ತೂಕದಲ್ಲಿ ವಂಚನೆಯಾಗುವ ಸಾಧ್ಯತೆ ಇರುವುದಿಲ್ಲ. ಸರಿಯಾದ ಪ್ರಮಾಣದಲ್ಲಿ ಫಲಾನುಭವಿಗೆ ಧಾನ್ಯ ವಿತರಣೆಯಾಗಲಿದೆ. ದೇಶದಲ್ಲೇ ಮೊದಲ ಬಾರಿಗೆ ಗುರುಗ್ರಾಮದಲ್ಲಿ ಇಂಥ ಎಟಿಎಂ ಅಸ್ತಿತ್ವಕ್ಕೆ ಬಂದಿದೆ ಎಂದು ಹರಿಯಾಣ ಸರಕಾರ ತಿಳಿಸಿದೆ.