ಗ್ಯಾಂಬ್ಲಿಂಗ್ ಆರೋಪ: ನಟಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

ಜೂಜು ಅಡ್ಡೆ ನಿರ್ಮಿಸಿ ಗ್ಯಾಂಬ್ಲಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಹರಿರಾಜ್ ಶೆಟ್ಟಿ ಅವರನ್ನು ಅರೆಸ್ಟ್ ಮಾಡಲಾಗಿದ್ದು, ಈಗ ಅವರ ವಿರುದ್ಧ ಸಿಸಿಬಿ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.

ಗ್ಯಾಂಬ್ಲಿಂಗ್ ಆರೋಪ: ನಟಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ
Linkup
'ಮುಂಗಾರು ಮಳೆ 2' ಸಿನಿಮಾದಲ್ಲಿ ಅಭಿನಯಿಸಿದ್ದ ನಟಿ ಅವರ ತಂದೆ ಅವರನ್ನು ಬಂಧಿಸಲಾಗಿದೆ. ಜೂಜು ಅಡ್ಡೆ ನಿರ್ಮಿಸಿ ಗ್ಯಾಂಬ್ಲಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಹರಿರಾಜ್ ಶೆಟ್ಟಿ ಅವರನ್ನು ಅರೆಸ್ಟ್ ಮಾಡಲಾಗಿದ್ದು, ಈಗ ಅವರ ವಿರುದ್ಧ ಸಿಸಿಬಿ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. 'ಪೂಲ್ ಅಂಡ್ ರೀ-ಕ್ರಿಯೇಷನ್' ಹೆಸರಿನಲ್ಲಿ ಕ್ಲಬ್ ನಿರ್ಮಿಸಿ, ಅದರಲ್ಲಿ ಜೂಜು ನಡೆಸುತ್ತಿದ್ದರು ಎಂಬ ಆರೋಪ ಹರಿರಾಜ್ ಶೆಟ್ಟಿ ವಿರುದ್ಧ ಕೇಳಿಬಂದಿತ್ತು. ಈ ಸಂಬಂಧ ದಾಳಿ ನಡೆಸಿದ ಪೊಲೀಸರು ಲಕ್ಷಾಂತರ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದರು. ಜೊತೆಗೆ ಕ್ಲಬ್‌ನ ಹರಿರಾಜ್ ಶೆಟ್ಟಿ ಹಾಗೂ ಜೂಜುಕೋರರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಹರಿರಾಜ್ ಶೆಟ್ಟಿ ಸೇರಿದಂತೆ 42 ಗ್ಯಾಂಬ್ಲರ್‌ಗಳ ವಿರುದ್ಧ ಸಿಸಿಬಿ ಅಧಿಕಾರಿಗಳು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. 42 ಗ್ಯಾಂಬ್ಲರ್‌ಗಳ ಪೈಕಿ ಐವರು ಮಹಿಳೆಯರಿದ್ದಾರೆ ಎಂದು ತಿಳಿದುಬಂದಿದೆ. ಐವರು ಮಹಿಳೆಯರಲ್ಲಿ ಇಬ್ಬರು ಉದ್ಯಮಿಗಳ ಪತ್ನಿಯರು, ಮತ್ತಿಬ್ಬರು ಅಧಿಕಾರಿಗಳ ಪತ್ನಿಯರು, ಇನ್ನೊಬ್ಬ ಮಹಿಳೆ ರೌಡಿ ಶೀಟರ್ ತಾಯಿ ಎನ್ನಲಾಗಿದೆ. ನೇಹಾ ಶೆಟ್ಟಿ ಮಂಗಳೂರು ಮೂಲದ ನೇಹಾ ಶೆಟ್ಟಿ 'ಮುಂಗಾರು ಮಳೆ 2' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಶಶಾಂಕ್ ನಿರ್ದೇಶನದ 'ಮುಂಗಾರು ಮಳೆ 2' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನೇಹಾ ಶೆಟ್ಟಿ ಜೋಡಿಯಾಗಿದ್ದರು. ಈ ಚಿತ್ರದ ಬಳಿಕ ಟಾಲಿವುಡ್ ಕಡೆ ಮುಖ ಮಾಡಿದ ನೇಹಾ ಶೆಟ್ಟಿ 'ಗಲ್ಲಿ ರೌಡಿ', 'ಮೆಹಬೂಬಾ' ಚಿತ್ರಗಳಲ್ಲಿ ಅಭಿನಯಿಸಿದರು.