Rashmika Mandanna’s Last Name: ಸಮಂತಾ, ಪ್ರಿಯಾಂಕಾ ಬಳಿಕ ರಶ್ಮಿಕಾ ಬಗ್ಗೆ ಈಗ ಗುಲ್ಲೋ ಗುಲ್ಲು!

ನಟಿ ಸಮಂತಾ ಮತ್ತು ಪ್ರಿಯಾಂಕಾ ಚೋಪ್ರಾ ಬಳಿಕ ನಟಿ ರಶ್ಮಿಕಾ ಮಂದಣ್ಣ ಅವರ ಲಾಸ್ಟ್ ನೇಮ್ ಬಗ್ಗೆ ಇದೀಗ ಎಲ್ಲೆಡೆ ಚರ್ಚೆ ಆಗುತ್ತಿದೆ.

Rashmika Mandanna’s Last Name: ಸಮಂತಾ, ಪ್ರಿಯಾಂಕಾ ಬಳಿಕ ರಶ್ಮಿಕಾ ಬಗ್ಗೆ ಈಗ ಗುಲ್ಲೋ ಗುಲ್ಲು!
Linkup
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಟಿ ತಮ್ಮ ಸೋಷಿಯಲ್ ಮೀಡಿಯಾದ ಪ್ರೋಫೈಲ್‌ಗಳಲ್ಲಿ ‘ಅಕ್ಕಿನೇನಿ’ ಹೆಸರನ್ನ ಕೈಬಿಟ್ಟಿದ್ದರು. ‘ಅಕ್ಕಿನೇನಿ’ ಹೆಸರಿಗೆ ಸಮಂತಾ ಕತ್ತರಿ ಪ್ರಯೋಗ ಮಾಡುತ್ತಿದ್ದಂತೆಯೇ, ಸೋಷಿಯಲ್ ಮೀಡಿಯಾದಲ್ಲಿ ಗಾಸಿಪ್ ಶುರುವಾಯಿತು. ನಾಗ ಚೈತನ್ಯ ಮತ್ತು ಸಮಂತಾ ಮಧ್ಯೆ ಎಲ್ಲವೂ ಸರಿಯಿಲ್ಲ.. ಸದ್ಯದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಅಂತೆಲ್ಲಾ ಗುಸುಗುಸು ಆರಂಭವಾಯಿತು. ಇದೇ ಗುಸುಗುಸು ಬಳಿಕ ಸತ್ಯವಾಗೋಯ್ತು. ನಾಗ ಚೈತನ್ಯ ಮತ್ತು ಸಮಂತಾ ಬೇರೆ ಬೇರೆಯಾದರು. ತಾವು ದೂರಾಗುತ್ತಿರುವ ವಿಚಾರವನ್ನು ನಾಗ ಚೈತನ್ಯ ಹಾಗೂ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಖಚಿತ ಪಡಿಸಿದರು. ಇನ್ನೂ, ಮೊನ್ನೆಮೊನ್ನೆಯಷ್ಟೇ ಬಾಲಿವುಡ್ ಹಾಗೂ ಹಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ನಟಿ ಕೂಡ ತಮ್ಮ ಹೆಸರಿಗೆ ಕತ್ತರಿ ಹಾಕಿದರು. ಟ್ವಿಟ್ಟರ್‌ ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ ‘ಪ್ರಿಯಾಂಕಾ ಚೋಪ್ರಾ ಜೋನಸ್’ ಅಂತಿದ್ದ ತಮ್ಮ ಹೆಸರಿನಲ್ಲಿ ‘ಚೋಪ್ರಾ’ ಹಾಗೂ ‘ಜೋನಸ್’ ಹೆಸರುಗಳನ್ನು ನಟಿ ಪ್ರಿಯಾಂಕಾ ತೆಗೆದುಬಿಟ್ಟರು. ಇದನ್ನ ಗಮನಿಸಿದ ನೆಟ್ಟಿಗರು ಪ್ರಿಯಾಂಕಾ ಮತ್ತು ನಿಕ್ ಜೋನಸ್ ಮಧ್ಯೆ ಬಿರುಕು ಮೂಡಿದೆ ಅಂತಲೇ ಭಾವಿಸಿದರು. ಆದರೆ, ‘’ಪ್ರಿಯಾಂಕಾ ಮತ್ತು ನಿಕ್ ಜೋನಸ್ ಮಧ್ಯೆ ಮನಸ್ತಾಪ ಉಂಟಾಗಿಲ್ಲ. ಇದೆಲ್ಲ ಸುಳ್ಳು ಸುದ್ದಿ’’ ಅಂತ ತಾಯಿ ಮಧು ಚೋಪ್ರಾ ಸ್ಪಷ್ಟ ಪಡಿಸಿದರು. ಹಾಗೇ, ನಿಕ್ ಜೋನಸ್ ಅವರ ವಿಡಿಯೋವೊಂದಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಕಾಮೆಂಟ್ ಮಾಡಿ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟರು. ನಟಿ ಸಮಂತಾ ಮತ್ತು ಪ್ರಿಯಾಂಕಾ ಚೋಪ್ರಾ ಬಳಿಕ ನಟಿ ಅವರ ಲಾಸ್ಟ್ ನೇಮ್ ಬಗ್ಗೆ ಇದೀಗ ಎಲ್ಲೆಡೆ ಚರ್ಚೆ ಆಗುತ್ತಿದೆ. ರಶ್ಮಿಕಾ ಮಂದಣ್ಣ ಅವರ ಲಾಸ್ಟ್ ನೇಮ್ ಕಂಡ ನೆಟ್ಟಿಗರು ತಲೆಗೆ ಹುಳ ಮಾತ್ರವಲ್ಲ.. ಹೆಬ್ಬಾವನ್ನೇ ಬಿಟ್ಟುಕೊಂಡಿದ್ದಾರೆ. ಫೋಟೋ ಹಂಚಿಕೊಂಡಿದ್ದ ನಟಿ ರಶ್ಮಿಕಾ ಮಂದಣ್ಣ ತಮ್ಮ ಬೋರ್ಡಿಂಗ್ ಪಾಸ್ ಹಾಗೂ ಪಾಸ್‌ಪೋರ್ಟ್‌ನ ಫೋಟೋಗಳನ್ನು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದರು. ಬೋರ್ಡಿಂಗ್ ಪಾಸ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಲಾಸ್ಟ್ ನೇಮ್ ‘ಮುಂಡಚಾಡಿರ’ (Mundachadira) ಅಂತ ಇದೆ. ರಶ್ಮಿಕಾ ಮಂದಣ್ಣ ಅವರ ಈ ಕೊನೆಯ ಹೆಸರಿನ ಪರಿಚಯ ಅವರ ಅಭಿಮಾನಿಗಳಿಗಿಲ್ಲ. ಹೀಗಾಗಿ, ‘ಮುಂಡಚಾಡಿರ’ ಬಗ್ಗೆ ಅಭಿಮಾನಿಗಳಿಗೆ ಅನೇಕ ಪ್ರಶ್ನೆಗಳು ಎದುರಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ನೂರೆಂಟು ಗಾಸಿಪ್ ಹಬ್ಬಿವೆ. ಅದು ತಂದೆಯ ಪೂರ್ತಿ ಹೆಸರು! ಅಸಲಿಗೆ, ನಟಿ ರಶ್ಮಿಕಾ ಮಂದಣ್ಣ ಅವರ ತಂದೆಯ ಪೂರ್ಣ ಹೆಸರು - ಮದನ್ ಮಂದಣ್ಣ ಮುಂಡಚಾಡಿರ. ರಶ್ಮಿಕಾ ಮಂದಣ್ಣ ಮೂಲತಃ ಕೊಡಗಿನವರು. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿನ ಕೊಡವ ಕುಟುಂಬದಲ್ಲಿ ಜನಿಸಿದವರು ರಶ್ಮಿಕಾ ಮಂದಣ್ಣ. ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಅವರ ಇಡೀ ಕುಟುಂಬ ‘ಮುಂಡಚಾಡಿರ’ ಎಂಬ ಸರ್‌ನೇಮ್ ಹೊಂದಿದೆ ಎಂದು ವರದಿಯಾಗಿದೆ. ಸಿನಿಮಾಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಬಿಜಿ ‘ಕಿರಿಕ್ ಪಾರ್ಟಿ’, ‘ಚಮಕ್’, ‘ಚಲೋ’, ‘ಗೀತ ಗೋವಿಂದಂ’, ‘ಭೀಷ್ಮ’, ‘ಪೊಗರು’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ರಶ್ಮಿಕಾ ಮಂದಣ್ಣ ಸದ್ಯ ‘ಪುಷ್ಪ’, ‘ಮಿಷನ್ ಮಜ್ನು’, ‘ಗುಡ್ ಬೈ’ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.