Suriya: ಹಿಂದಿಯಲ್ಲಿ ಕನ್ನಡಿಗನ ಕುರಿತಾದ ಸಿನಿಮಾ ಮಾಡಲು ತಡೆಯಾಜ್ಞೆ ನೀಡಿದ ಮದ್ರಾಸ್ ಹೈಕೋರ್ಟ್

'ಏರ್ ಡೆಕ್ಕನ್' ಸಂಸ್ಥಾಪಕ, ಕನ್ನಡಿಗ ಕ್ಯಾಪ್ಟನ್ ಜಿ ಆರ್‌ ಗೋಪಿನಾಥ್ ಅವರ ಜೀವನ ಕಥೆ ಆಧರಿಸಿದ 'ಸೂರರೈ ಪೊಟ್ರು' ಸಿನಿಮಾವನ್ನು ಹಿಂದಿಯಲ್ಲಿ ನಿರ್ಮಾಣ ಮಾಡಲು ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ಅದಕ್ಕೆ ಕಾರಣ ಏನು?

Suriya: ಹಿಂದಿಯಲ್ಲಿ ಕನ್ನಡಿಗನ ಕುರಿತಾದ ಸಿನಿಮಾ ಮಾಡಲು ತಡೆಯಾಜ್ಞೆ ನೀಡಿದ ಮದ್ರಾಸ್ ಹೈಕೋರ್ಟ್
Linkup
ಕನ್ನಡಿಗ ಜೀವನಾಧಾರಿತ ತಮಿಳು ಚಿತ್ರ 'ಸೂರರೈ ಪೊಟ್ರು' ಸಿನಿಮಾಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಓಟಿಟಿಯಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು ಐಎಂಡಿಬಿ ರೇಟಿಂಗ್‌ನಲ್ಲಿ 10ಕ್ಕೆ 9.1 ರೇಟಿಂಗ್ ಪಡೆದು ಅತಿ ಹೆಚ್ಚು ರೇಟಿಂಗ್ ಪಡೆದ ಚಿತ್ರಗಳ ಪಟ್ಟಿಯಲ್ಲಿ 'ಸೂರರೈ ಪೊಟ್ರು' ಕೂಡ ಸೇರಿಕೊಂಡಿತ್ತು. ಈ ಸಿನಿಮಾವನ್ನು ಬೇರೆ ಬೇರೆ ಭಾಷೆಯಲ್ಲಿ ತಯಾರಿಸುವ ಕುರಿತು ಚರ್ಚೆ ನಡೆಯುತ್ತಿದೆ. ಹೀಗಿರುವಾಗ ಹಿಂದಿಯಲ್ಲಿ ತಯಾರಿಸಲು ಮದ್ರಾಸ್ ಹೈಕೋರ್ಟ್ ತಡೆ ನೀಡಿದೆಯಂತೆ. ಯಾಕೆ? ಹೈಕೋರ್ಟ್ ತಡೆ ನೀಡಿದೆ ನಟ ಅಭಿನಯದ 'ಸೂರರೈ ಪೊಟ್ರು' ಸಿನಿಮಾಕ್ಕೆ ಸುಧಾ ಕೊಂಗರ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಮಾಜಿ ಪೈಲೆಟ್ ಆಗಿ ಸೂರ್ಯ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ತುಂಬ ಇಷ್ಟವಾಗಿತ್ತು. ಕೆಲವೊಂದು ವಿಚಾರಗಳಿಗೋಸ್ಕರ ವಿಮರ್ಶೆಯೂ ಆಯ್ತು. ಇತ್ತೀಚೆಗೆ 'ಸೂರರೈ ಪೊಟ್ರು' ಸಿನಿಮಾವನ್ನು ಹಿಂದಿಯಲ್ಲಿ ನಿರ್ಮಾಣ ಮಾಡಲಿದ್ದೇವೆ ಎಂದು ಸುಧಾ ಕೊಂಗರ ಘೋಷಣೆ ಮಾಡಿದ್ದರು. ಈ ಸಿನಿಮಾದ ಹಿಂದಿ ರಿಮೇಕ್‌ಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ಮಾತಿನ ಮೂಲಕ ಬಗೆಹರಿಸಿಕೊಳ್ಳಿ ಎಂದ ಹೈಕೋರ್ಟ್ 'ಸೂರರೈ ಪೊಟ್ರು' ಸಿನಿಮಾವನ್ನು ಸೂರ್ಯ ಅವರ 2ಡಿ ಎಂಟರ್‌ಟೇನ್‌ಮೆಂಟ್ ಹಾಗೂ ಗುಣೀತ್ ಮೊಂಗ ಅವರ ಸಿಖ್ಯಾ ಎಂಟರ್‌ಟೇನ್‌ಮೆಂಟ್ ಸೇರಿ ನಿರ್ಮಾಣ ಮಾಡಿತ್ತು. ಆದರೆ ಸಹನಿರ್ಮಾಪಕರನ್ನು ಗಮನಕ್ಕೆ ತೆಗೆದುಕೊಳ್ಳದೆ, ಈಗಾಗಲೇ ಇಬ್ಬರು ಮಾಡಿಕೊಂಡಿದ್ದ ಕಾಂಟ್ರ್ಯಾಕ್ಟ್‌ನ್ನು ಪರಿಗಣಿಸದೆ ಸೂರ್ಯ ಅವರು 'ಸೂರರೈ ಪೊಟ್ರು' ಹಿಂದಿ ರಿಮೇಕ್ ಹಕ್ಕನ್ನು ಮಾರಿದ್ದರು. ಹೀಗಾಗಿ ಸಿಖ್ಯಾ ಎಂಟರ್‌ಟೇನ್‌ಮೆಂಟ್‌ನ ಗುಣೀತ್ ಮೊಂಗ ಅವರು ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ಬಳಿಕ ಮದ್ರಾಸ್ ಹೈಕೋರ್ಟ್, ಇಬ್ಬರೂ ಮಾತಿನ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದೆ, ಅದರ ಜೊತೆಗೆ ಹಿಂದಿ ರಿಮೇಕ್‌ಗೆ ತಡೆ ನೀಡಿದೆ. ಒಳ್ಳೆಯ ಬೆಲೆಗೆ ಹಿಂದಿ ರಿಮೇಕ್ ಹಕ್ಕು ಮಾರಾಟ 'ಸೂರರೈ ಪೊಟ್ರು' ಸಿನಿಮಾದ ಹಿಂದಿ ರಿಮೇಕ್ ಹಕ್ಕನ್ನು ಅಬುಂದಟಿಯಾ ಎಂಟರ್‌ಟೇನ್‌ಮೆಂಟ್ ಒಳ್ಳೆಯ ಬೆಲೆಗೆ ಖರೀದಿ ಮಾಡಿದೆ. 'ಅಂಜಾನ್' ಸಿನಿಮಾದಲ್ಲಿ ನಟ ಸೂರ್ಯ ಜೊತೆಗೆ ನಟಿಸಿದ್ದ ನಟ ವಿದ್ಯುತ್ ಜಮ್ವಾಲ್ ಅವರು 'ಸೂರರೈ ಪೊಟ್ರು' ಹಿಂದಿ ರಿಮೇಕ್‌ನಲ್ಲಿ ಸೂರ್ಯ ಮಾಡಿದ್ದ ಪಾತ್ರ ಮಾಡಲಿದ್ದಾರಂತೆ. ಈ ಚಿತ್ರವು ತಮಿಳು, ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ತೆರೆಗೆ ಬಂದಿತ್ತು. 'ಏರ್ ಡೆಕ್ಕನ್' ಸಂಸ್ಥಾಪಕ ಎ ಆರ್‌ ಗೋಪಿನಾಥ್ ಅವರ ಪುಸ್ತಕ 'ಸಿಂಪ್ಲಿ ಫ್ಲೈ' ಪುಸ್ತಕ ಆಧರಿಸಿ 'ಸೂರರೈ ಪೊಟ್ರು' ಸಿನಿಮಾ ಮಾಡಲಾಗಿತ್ತು.