ಆಸ್ಪತ್ರೆಗೆ ದಾಖಲಾದ ನಯನತಾರಾ ತಂದೆ: ಮಗಳ ಮದುವೆಯದ್ದೇ ಅವರಿಗೆ ಚಿಂತೆ!

ಕುರ್ಯನ್ ಕೊಡಿಯಟ್ಟು ಅವರಿಗೆ ಮಗಳ ಮದುವೆಯದ್ದೇ ಚಿಂತೆಯಾಗಿದೆ. ತಮ್ಮ ಆರೋಗ್ಯ ಕ್ಷೀಣಿಸುತ್ತಿರುವ ಕಾರಣ, ಬೇಗ ಮದುವೆಯಾಗುವಂತೆ ಮಗಳು ನಯನತಾರಾಗೆ ಕುರ್ಯನ್ ಕೊಡಿಯಟ್ಟು ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಾದ ನಯನತಾರಾ ತಂದೆ: ಮಗಳ ಮದುವೆಯದ್ದೇ ಅವರಿಗೆ ಚಿಂತೆ!
Linkup
ಕಾಲಿವುಡ್‌ನ ಲೇಡಿ ಸೂಪರ್ ಸ್ಟಾರ್ ಅವರ ತಂದೆ ಕುರ್ಯನ್ ಕೊಡಿಯಟ್ಟು ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಕುರ್ಯನ್ ಕೊಡಿಯಟ್ಟು ಅವರನ್ನು ಕೊಚ್ಚಿಯಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಐಸಿಯುನಲ್ಲಿ ಕುರ್ಯನ್ ಕೊಡಿಯಟ್ಟುಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂಲಗಳ ಪ್ರಕಾರ, ಕುರ್ಯನ್ ಕೊಡಿಯಟ್ಟು ಅವರಿಗೆ ಮಗಳ ಮದುವೆಯದ್ದೇ ಚಿಂತೆಯಾಗಿದೆ. ತಮ್ಮ ಆರೋಗ್ಯ ಕ್ಷೀಣಿಸುತ್ತಿರುವ ಕಾರಣ, ಬೇಗ ಮದುವೆಯಾಗುವಂತೆ ಮಗಳು ನಯನತಾರಾಗೆ ಕುರ್ಯನ್ ಕೊಡಿಯಟ್ಟು ತಿಳಿಸಿದ್ದಾರೆ. ಆದಷ್ಟು ಬೇಗ ಮಗಳ ಮದುವೆಯನ್ನು ಕಣ್ತುಂಬಿಕೊಳ್ಳುವ ಆಸೆ ಕುರ್ಯನ್ ಕೊಡಿಯಟ್ಟು ಅವರಿಗಿದೆ. ಅಪ್ಪನ ಆಸೆ ನೆರವೇರಿಸುವ ಸಲುವಾಗಿ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಯನತಾರಾ ಮತ್ತು ಮನಸ್ಸು ಮಾಡಿದ್ದಾರೆ. ''ಮದುವೆಗೆ ಹಣ ಕೂಡಿಡುತ್ತಿದ್ದೇನೆ'' ಎಂದು ಇತ್ತೀಚೆಗಷ್ಟೇ ವಿಘ್ನೇಶ್ ಶಿವನ್ ತಿಳಿಸಿದ್ದರು. ಇದೀಗ ಕುರ್ಯನ್ ಕೊಡಿಯಟ್ಟು ಅವರ ಆಸೆಯಂತೆ ಶೀಘ್ರದಲ್ಲೇ ನಯನತಾರಾ-ವಿಘ್ನೇಶ್ ಶಿವನ್ ವಿವಾಹ ಮಹೋತ್ಸವ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಂದ್ಹಾಗೆ, ಕುರ್ಯನ್ ಕೊಡಿಯಟ್ಟು ನಿವೃತ್ತ ಇಂಡಿಯನ್ ಏರ್‌ಫೋರ್ಸ್ ಅಧಿಕಾರಿ. ನಿವೃತ್ತಿ ಪಡೆದ ಬಳಿಕ ಪತ್ನಿ ಒಮನಾ ಕುರಿಯನ್ ಜೊತೆ ಕೊಚ್ಚಿಯಲ್ಲಿ ಕುರ್ಯನ್ ಕೊಡಿಯಟ್ಟು ವಾಸವಾಗಿದ್ದಾರೆ. ಅನಾರೋಗ್ಯಕ್ಕೀಡಾದ ಕುರ್ಯನ್ ಕೊಡಿಯಟ್ಟು ಕೊಚ್ಚಿಯಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ವಿಚಾರಿಸಲು ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೊಚ್ಚಿಗೆ ಆಗಮಿಸಿದ್ದಾರೆ. ಸಿನಿಮಾ ವಿಷಯಕ್ಕೆ ಬರುವುದಾದರೆ, ನಯನತಾರಾ ಮತ್ತು ವಿಘ್ನೇಶ್ ಶಿವನ್ ಸದ್ಯ 'ಕಾಥುವಾಕುಲ ರೆಂಡು ಕಾದಲ್' ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ವಿಘ್ನೇಶ್ ಶಿವನ್ ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ನಯನತಾರಾ, ವಿಜಯ್ ಸೇತುಪತಿ, ಸಮಂತಾ ಅಕ್ಕಿನೇನಿ ಪ್ರಮುಖ ಪಾತ್ರದಲ್ಲಿದ್ದಾರೆ.