Sandalwood Actress suicide: ಆತ್ಮಹತ್ಯೆಗೆ ಶರಣಾದ ಕನ್ನಡ ನಟಿ ಸವಿ ಮಾದಪ್ಪ

ಸ್ಯಾಂಡಲ್‌ವುಡ್‌ನ ಕೆಲವು ಸಿನಿಮಾಗಳಲ್ಲಿ ಹಾಗೂ ಕನ್ನಡ ಕಿರುತೆರೆಯ ಕೆಲವು ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದ ನಟಿ ಸವಿ ಮಾದಪ್ಪ (ಸೌಜನ್ಯ) ಆತ್ಮಹತ್ಯೆಗೆ ಶರಣಾಗಿದ್ದಾರೆ.

Sandalwood Actress suicide: ಆತ್ಮಹತ್ಯೆಗೆ ಶರಣಾದ ಕನ್ನಡ ನಟಿ ಸವಿ ಮಾದಪ್ಪ
Linkup
ಸ್ಯಾಂಡಲ್‌ವುಡ್‌ನ ಕೆಲವು ಸಿನಿಮಾಗಳಲ್ಲಿ ಹಾಗೂ ಕನ್ನಡ ಕಿರುತೆರೆಯ ಕೆಲವು ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದ ನಟಿ () ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಸವಿ ಮಾದಪ್ಪ ನೇಣು ಹಾಕಿಕೊಂಡಿದ್ದಾರೆ. ನಟಿ ಸವಿ ಮಾದಪ್ಪ ಡೆತ್ ನೋಟ್ ಬರೆದಿಟ್ಟು, ನೇಣು ಬಿಗಿದುಕೊಂಡು ಮಾಡಿಕೊಂಡಿದ್ದಾರೆ. ಬೆಂಗಳೂರು ದಕ್ಷಿಣ ಭಾಗದ ದೊಡ್ಡಬೆಲೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಸವಿ ಮಾದಪ್ಪ (ಸೌಜನ್ಯ) ವಾಸಿಸುತ್ತಿದ್ದರು. ಗೆಳೆಯನ ಜೊತೆಗೆ ಸವಿ ಮಾದಪ್ಪ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಗೆಳೆಯನಿಗೆ ಊಟ ತರುವಂತೆ ಸವಿ ಮಾದಪ್ಪ ಹೇಳಿದ್ದರು. ಗೆಳೆಯ ಹೊರಗೆ ಹೋಗಿ, ಊಟ ತೆಗೆದುಕೊಂಡು ವಾಪಸ್ ಬರುವಷ್ಟರಲ್ಲಿ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೆಳೆಯ ಊಟ ತೆಗೆದುಕೊಂಡು ವಾಪಸ್ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕುಂಬಳಗೋಡು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸವಿ ಮಾದಪ್ಪ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ಗೆ ಪೊಲೀಸರು ಭೇಟಿ ಕೊಟ್ಟು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ, ಸವಿ ಮಾದಪ್ಪ ಡೆತ್ ನೋಟ್ ಬರೆದಿರುವುದು ಪತ್ತೆಯಾಗಿದೆ. ಸದ್ಯ ಡೆತ್ ನೋಟ್‌ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತ್ಮಹತ್ಯೆಗೂ ಮುನ್ನ ಸವಿ ಮಾದಪ್ಪ ನಾಲ್ಕು ಪುಟಗಳ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ. ಡೆತ್ ನೋಟ್‌ನಲ್ಲಿ ‘’ನನ್ನ ಸಾವಿಗೆ ನಾನೇ ಕಾರಣ. ನನ್ನನ್ನು ಕ್ಷಮಿಸಿಬಿಡಿ’’ ಎಂದು ತಂದೆ-ತಾಯಿಯಲ್ಲಿ ಸವಿ ಮಾದಪ್ಪ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಯಾರೀ ಸವಿ ಮಾದಪ್ಪ? ಸವಿ ಮಾದಪ್ಪ ಕೂರ್ಗಿ ಹುಡುಗಿ. ಇವರು ಮೂಲತಃ ಕುಶಾಲನಗರದವರು. ಸವಿ ಮಾದಪ್ಪ ಅವರಿಗೆ ಸೌಜನ್ಯ ಎಂಬ ಹೆಸರೂ ಇದೆ. ಕೊಡಗಿನ ಬೆಡಗಿ ಸವಿ ಮಾದಪ್ಪ ಸಂದೀಪ್ ಕೋಟ್ಯಾನ್ ನಿರ್ದೇಶನದ ಕನ್ನಡದ ‘ಚೌಕಟ್ಟು’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ‘ಫನ್’, ‘ಅರ್ಜುನ್ ಗೌಡ’ ಮುಂತಾದ ಸಿನಿಮಾಗಳಲ್ಲೂ ಸವಿ ಮಾದಪ್ಪ ನಟಿಸಿದ್ದರು. ನಟನೆ ಮತ್ತು ಸಿನಿಮಾಟೋಗ್ರಫಿಯಲ್ಲಿ ಆಸಕ್ತಿ ಚಿಕ್ಕಂದಿನಿಂದಲೂ ಸವಿ ಮಾದಪ್ಪ ಅವರಿಗೆ ನಟನೆ ಮತ್ತು ಸಿನಿಮಾಟೋಗ್ರಫಿಯಲ್ಲಿ ಆಸಕ್ತಿಯಿತ್ತು. ಸಿನಿಮಾಟೋಗ್ರಫಿಯಲ್ಲಿ ಅವರು ತರಬೇತಿಯನ್ನೂ ಪಡೆದಿದ್ದರು. ಸಿನಿಮಾಟೋಗ್ರಫಿ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಬೇಕು ಎಂಬ ಬಯಕೆ ಅವರಿಗಿತ್ತು. ‘’ಕನ್ನಡದಲ್ಲಿ ಮಹಿಳಾ ಸಿನಿಮಾಟೋಗ್ರಾಫರ್ ಕಡಿಮೆ. ನಿಜಕ್ಕೂ ಅದು ಸವಾಲಿನ ಕೆಲಸ. ಆದರೂ, ನನಗೆ ಈ ಕ್ಷೇತ್ರದಲ್ಲೂ ಕೆಲಸ ಮಾಡುವ ಹುಮ್ಮಸ್ಸು ಇದೆ. ಅವಕಾಶ ಸಿಕ್ಕರೆ ಈ ಕ್ಷೇತ್ರದಲ್ಲೂ ಮುಂದುವರೆಯುತ್ತೇನೆ’’ ಎಂದು ಈ ಹಿಂದೆ ಸವಿ ಮಾದಪ್ಪ ಹೇಳಿದ್ದರು. ಹಾಗೇ, ‘’ಸಿನಿಮಾ ರಂಗಕ್ಕೆ ನಾನು ಬರಲು ಪ್ರೇರಣೆ ನನ್ನ ತಂದೆ. ಈಗಾಗಲೇ ಅವರು ಸಿನಿಮಾ ರಂಗದ ಜೊತೆ ಗುರುತಿಸಿಕೊಂಡಿದ್ದಾರೆ. ‘ಚೌಕಟ್ಟು’ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದೇನೆ. ನಟಿಯಾಗಿ ನನಗೆ ಹಲವು ಕನಸುಗಳಿವೆ. ಸಿಕ್ಕ ಪಾತ್ರಗಳನ್ನು ಒಪ್ಪಿಕೊಳ್ಳುವುದಕ್ಕಿಂತ ಸವಾಲಿನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಇಷ್ಟ. ‘ಚೌಕಟ್ಟು’ ಸಿನಿಮಾದಲ್ಲಿ ನನಗೆ ಅಂಥದ್ದೊಂದು ಪಾತ್ರ ಸಿಕ್ಕಿದೆ. ಇಂತಹ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಡುತ್ತಿರುವುದು ಸಹಜವಾಗಿಯೇ ಖುಷಿ ಆಗಿದೆ’’ ಎಂದು ‘ಚೌಕಟ್ಟು’ ಸಿನಿಮಾ ಸೆಟ್ಟೇರುವ ಸಮಯದಲ್ಲಿ ನಟಿ ಸವಿ ಮಾದಪ್ಪ ಸಂತಸ ಹಂಚಿಕೊಂಡಿದ್ದರು. ಆದ್ರೀಗ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.