ಪುತ್ರನ ಕಾರು ಅಪಘಾತದ ಬಗ್ಗೆ ಹಾಕಿದ್ದ ಟ್ವೀಟ್‌ ಡಿಲೀಟ್ ಮಾಡಿದ ಜಗ್ಗೇಶ್! ಕಾರಣವೇನು?

ನಟ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ಅವರು ಪ್ರಯಾಣ ಮಾಡುತ್ತಿದ್ದ ಐಷಾರಾಮಿ ಕಾರು ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದ ಕುರಿತು ಜಗ್ಗೇಶ್‌ ಟ್ವೀಟ್ ಮಾಡಿದ್ದರು. ನಂತರ ಡಿಲೀಟ್ ಮಾಡಿದ್ದರು! ಅದಕ್ಕೀಗ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಪುತ್ರನ ಕಾರು ಅಪಘಾತದ ಬಗ್ಗೆ ಹಾಕಿದ್ದ ಟ್ವೀಟ್‌ ಡಿಲೀಟ್ ಮಾಡಿದ ಜಗ್ಗೇಶ್! ಕಾರಣವೇನು?
Linkup
'ನವರಸ ನಾಯಕ' ಅವರ ಪುತ್ರ ಪ್ರಯಾಣಿಸುತ್ತಿದ್ದ ಕಾರು ಇಂದು (ಜು.1) ಮಧ್ಯಾಹ್ನ ಚಿಕ್ಕಬಳ್ಳಾಪುರದ ಬಳಿ ಅಪಘಾತಕ್ಕೆ ಈಡಾಗಿತ್ತು. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಅದೃಷ್ಟವಶಾತ್‌ ಜಗ್ಗೇಶ್ ಪುತ್ರ ಯತಿರಾಜ್‌ಗೆ ಯಾವುದೇ ಗಾಯಗಳಾಗಿರಲಿಲ್ಲ. ಈ ಕುರಿತು ಜಗ್ಗೇಶ್ ಟ್ವೀಟ್ ಮಾಡಿದ್ದರು. 'ರಾಯರ ದಯೆ ಹಾಗೂ ನಿಮ್ಮ ಶುಭ ಹಾರೈಕೆ ಯತಿರಾಜನಿಗೆ ಸಣ್ಣ ಗಾಯವೂ ಇಲ್ಲ' ಎಂದು ಜಗ್ಗೇಶ್ ತಿಳಿಸಿದ್ದರು. ಆದರೆ, ಪುತ್ರನ ಕಾರಿನ ಬಗ್ಗೆ ಮಾಡಿದ್ದ ಟ್ವೀಟ್‌ಗಳನ್ನು ಕೆಲ ಸಮಯದ ನಂತರ ಡಿಲೀಟ್ ಮಾಡಿದ್ದರು. ಇದೀಗ ಅದಕ್ಕೂ ಜಗ್ಗೇಶ್ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಕೆಟ್ಟ ಕಲ್ಪನೆಗಳು ನನ್ನ ಕಾಡುತ್ತಿದೆ!'ಮಗನ ಕಾರ್ ಆಕ್ಸಿಡೆಂಟ್ ಚಿತ್ರ ನೋಡಿದರೆ ನನಗೆ ಹೃದಯದ ಬಡಿತ ಹೆಚ್ಚಾಗುತ್ತಿದೆ. ಕೆಟ್ಟ ಭಯ ಆವರಿಸುತ್ತದೆ. ಬೆಳಿಗ್ಗೆಯಿಂದ ಏನು ತಿನ್ನಲಾಗದೆ ಕೆಟ್ಟ ಕಲ್ಪನೆಗಳು ನನ್ನ ಕಾಡುತ್ತಿದೆ. ಮನೆಯವರು ಅದ ನೋಡದಂತೆ ವಿನಂತಿ ಮಾಡಿದರು. ಹಾಗಾಗಿ ಹಾಕಿದ ವಿಷಯ ಡಿಲೀಟ್ ಮಾಡಿದೆ' ಎಂದು ಜಗ್ಗೇಶ್ ತಿಳಿಸಿದ್ದಾರೆ. ಡಿಲೀಟ್ ಆಗಿರುವ ಟ್ವೀಟ್‌ನಲ್ಲಿ ಇದ್ದ ವಿಷಯವೇನು?ಆಕ್ಸಿಡೆಂಟ್ ಆಗಿರುವ ಕಾರಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದ ಜಗ್ಗೇಶ್‌, 'ಕೊರೊನಾ ಬಂದಾಗಿನಿಂದ ಹೊರ ಹೋಗಿಲ್ಲ.. ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಹೊರ ಹೋದ ಮಗ ಯತಿರಾಜ್. ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ ಬೆಂಗಳೂರು ಟು ಚಿಕ್ಕಬಳ್ಳಾಪುರ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆ ಬಿದ್ದಿದೆ. ರಾಯರ ದಯೆ ಹಾಗೂ ನಿಮ್ಮ ಶುಭ ಹಾರೈಕೆ ಯತಿರಾಜನಿಗೆ ಸಣ್ಣ ಗಾಯವೂ ಇಲ್ಲ' ಎಂದು ಟ್ವೀಟ್ ಮಾಡಿದ್ದರು ಜಗ್ಗೇಶ್. ಆದಾದ ಕೆಲವೇ ಕ್ಷಣಗಳಲ್ಲಿ ಮತ್ತೊಂದು ಟ್ವೀಟ್ ಮಾಡಿದ್ದರು. ಅದರಲ್ಲಿ, 'ರಾಯರು ನನ್ನ ಜೊತೆ ಸದಾ ಇರುತ್ತಾರೆ ಇದ್ದಾರೆ! ಇಂಥ ಘಟನೆಗಳು ಚಮತ್ಕಾರ ನನ್ನ ಬದುಕಲ್ಲಿ ನಡೆಯುವುದೇ ನಾನಿದ್ದೀನೋ ಇರುತ್ತೀನೋ ನಿನ್ನ ಜೊತೆ ಯಾವಾಗಲೂ ಎಂದು ರಾಯರು ಅವರ ಪವಾಡ ನಿರೂಪಿಸಲು! ನಿನ್ನೆ ಪೂಜೆಯಲ್ಲಿ ಕುಟುಂಬದ ರಕ್ಷಣೆಗೆ ಪ್ರಾರ್ಥಿಸಿದ್ದೆ. ಸದಾ ಅವರ ಸ್ಮರಣೆಯಲ್ಲೇ ಬದುಕುವ ನನಗೆ ಇದು ಮತ್ತೊಂದು ಪವಾಡ. ನಂಬಿ ಕೆಟ್ಟವರಿಲ್ಲಾ ಗುರುರಾಯರ.. ರಾಯರ ದಯೆ ಹಾಗೂ ನಿಮ್ಮ ಶುಭ ಹಾರೈಕೆ ಯತಿರಾಜನಿಗೆ ಸಣ್ಣ ಗಾಯವೂ ಇಲ್ಲ' ಎಂದು ಟ್ವೀಟ್ ಮಾಡಿದ್ದರು. ಇದೀಗ ಈ ಎರಡು ಟ್ವೀಟ್‌ಗಳನ್ನು ಡಿಲೀಟ್ ಮಾಡಿದ್ದರ ಕುರಿತು ಸ್ಪಷ್ಟನೆ ನೀಡಿದ್ದಾರೆ.