ಪ್ರತಿಷ್ಠಿತ ಢಾಕಾ ಫಿಲ್ಮ್‌ ಫೆಸ್ಟ್‌ಗೆ ಆಯ್ಕೆಯಾದ ಪವನ್‌ ಒಡೆಯರ್ ನಿರ್ಮಾಣದ 'ಡೊಳ್ಳು' ಸಿನಿಮಾ

ಸ್ಯಾಂಡಲ್‌ವುಡ್‌ನಲ್ಲಿ 'ಗೋವಿಂದಯನಮಃ', 'ಗೂಗ್ಲಿ', 'ರಣವಿಕ್ರಮ', 'ನಟಸಾರ್ವಭೌಮ' ಮುಂತಾದ ಸಿನಿಮಾಗಳಿಂದ ಗಮನಸೆಳೆದ ನಿರ್ದೇಶಕ ಪವನ್‌ ಒಡೆಯರ್ ಈಗ 'ಡೊಳ್ಳು' ಸಿನಿಮಾದ ಮೂಲಕ ನಿರ್ಮಾಣಕ್ಕಿಳಿದಿದ್ದಾರೆ.

ಪ್ರತಿಷ್ಠಿತ ಢಾಕಾ ಫಿಲ್ಮ್‌ ಫೆಸ್ಟ್‌ಗೆ ಆಯ್ಕೆಯಾದ ಪವನ್‌ ಒಡೆಯರ್ ನಿರ್ಮಾಣದ 'ಡೊಳ್ಳು' ಸಿನಿಮಾ
Linkup
ಸ್ಯಾಂಡಲ್‌ವುಡ್‌ನಲ್ಲಿ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಗಮನಸೆಳೆದ ನಿರ್ದೇಶಕ ಈಗ ನಿರ್ಮಾಪಕರಾಗಿದ್ದಾರೆ. ನಿರ್ದೇಶನದಲ್ಲಿ ಮೂಡಿಬಂದಿರುವ '' ಸಿನಿಮಾಗೆ ಪವನ್ ಬಂಡವಾಳ ಹೂಡಿದ್ದಾರೆ. ಸಿನಿಮಾ ತೆರೆಗೆ ಬರುವ ಮುನ್ನವೇ ಒಂದು ಸಾಧನೆ ಮಾಡಿದೆ. ಪ್ರತಿಷ್ಠಿತ ಢಾಕಾ ಇಂಟರ್‌ನ್ಯಾಷನಲ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ಆಗಲಿದೆ. ಇದು ತಂಡದ ಖುಷಿಗೆ ಕಾರಣವಾಗಿದೆ. ಈ ಹಿಂದೆ 'ಮಹಾನ್ ಹುತಾತ್ಮ' ಕಿರುಚಿತ್ರ ಮಾಡಿ, ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಸಾಗರ್ ಪುರಾಣಿಕ್‌ಗೆ ಇದು ನಿರ್ದೇಶನದ ಮೊದಲ ಸಿನಿಮಾ. 'ನಾನು ಒಮ್ಮೆ ಡೊಳ್ಳು ಕುಣಿತ ನೋಡಿದೆ. ಅದು ನನಗೆ ಬಹಳ ಆಸಕ್ತಿಕರ ಎನಿಸಿತು. ನಂತರ ಇದರ ಬಗ್ಗೆಯೇ ಯಾಕೆ ಸಿನಿಮಾ ಮಾಡಬಾರದು ಎಂದು ಯೋಚಿಸಿ, ಈ ಸಿನಿಮಾ ಮಾಡಿದ್ದೇನೆ. ಇದೊಂದು ಸ್ಥಳೀಯ ಕಲಾಪ್ರಕಾರವಾಗಿದೆ. ನಗರೀಕರಣ ಇದರ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬುದನ್ನು ಸಿನಿಮಾದಲ್ಲಿ ಹೇಳಲಾಗಿದೆ. ಪೂರ್ತಿ ಚಿತ್ರೀಕರಣವನ್ನು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಾಡಲಾಗಿದೆ. ಕಿರುತೆರೆ ನಟ ಕಾರ್ತಿಕ್ ಮಹೇಶ್, ಈ ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿಧಿ ಹೆಗ್ಡೆ ನಾಯಕಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ಗೆ 'ಗೋವಿಂದಯನಮಃ' ಸಿನಿಮಾ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟವರು ಪವನ್‌ ಒಡೆಯರ್. ಆನಂತರ 'ರಾಕಿಂಗ್ ಸ್ಟಾರ್' ಯಶ್‌ಗೆ 'ಗೂಗ್ಲಿ', ಪುನೀತ್ ರಾಜ್‌ಕುಮಾರ್ ಜೊತೆ 'ರಣವಿಕ್ರಮ', 'ನಟಸಾರ್ವಭೌಮ' ಸಿನಿಮಾಗಳನ್ನು ಮಾಡಿ, ಸ್ಟಾರ್ ನಿರ್ದೇಶಕ ಎನಿಸಿಕೊಂಡರು ಪವನ್, ಇದೀಗ ಡೊಳ್ಳು ಸಿನಿಮಾದ ಮೂಲಕ ನಿರ್ಮಾಪಕರಾಗಿದ್ದಾರೆ. ನಿರ್ಮಾಣದಲ್ಲಿ ಅವರಿಗೆ ಪತ್ನಿ ಅಪೇಕ್ಷಾ ಪುರೋಹಿತ್ ಕೂಡ ಸಾಥ್ ನೀಡಿದ್ದಾರೆ. ತಮ್ಮ ಬ್ಯಾನರ್‌ಗೆ ಅವರು ಒಡೆಯರ್ ಮೂವೀಸ್‌ ಅಂತ ನಾಮಕರಣ ಮಾಡಿದ್ದಾರೆ. 'ನಾನು ನಿರ್ದೇಶನ ಮಾಡಿದ್ದ 'ಮಹಾನ್ ಹುತಾತ್ಮ' ಕಿರುಚಿತ್ರವನ್ನು ಪವನ್‌ ಅವರು ನೋಡಿದ್ದರು. ಅದು ಅವರಿಗೆ ಸಖತ್ ಖುಷಿ ನೀಡಿತ್ತು. ಆಗಲೇ ಅವರು ನನ್ನ ಜೊತೆಗೆ ಸಿನಿಮಾ ಮಾಡುವ ಕುರಿತು ಮಾತನಾಡಿದ್ದರು. 'ಡೊಳ್ಳು' ಸ್ಕ್ರಿಪ್ಟ್‌ ಅವರಿಗೆ ತುಂಬ ಇಷ್ಟವಾಯ್ತು. ಉತ್ತಮ ಕಲಾವಿದರನ್ನು ಆಯ್ಕೆಮಾಡಿಕೊಂಡು, ಸಿನಿಮಾವನ್ನು ಚೆನ್ನಾಗಿ ಮಾಡಿದ್ದೇವೆ ಎಂಬ ಭರವಸೆ ಇದೆ' ಎಂದು ಸಾಗರ್ ಹೇಳಿಕೊಂಡಿದ್ದಾರೆ. ಸಿನಿಮಾ ತೆರೆಗೆ ಬರುವ ಮುನ್ನವೇ ಢಾಕಾ ಇಂಟರ್‌ನ್ಯಾಷನಲ್ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಪ್ರೀಮಿಯರ್ ಆಗುತ್ತಿರುವುದು ನಿರ್ಮಾಪಕ ಪವನ್ ಒಡೆಯರ್ ಮತ್ತು ನಿರ್ದೇಶಕ ಸಾಗರ್‌ಗೆ ಖುಷಿ ನೀಡಿದೆ. ಈ ಸಿನಿಮಾಗೆ ಶ್ರೀನಿಧಿ ಡಿ.ಎಸ್‌. ಚಿತ್ರಕಥೆ ಬರೆದಿದ್ದು, ಅನಂತ್ ಕಾಮತ್ ಸಂಗೀತ ನೀಡಿದ್ದಾರೆ. ಬಿ.ಎಸ್. ಕೆಂಪರಾಜು ಸಂಕಲನ ಮಾಡಿದ್ದಾರೆ. ಅಭಿಲಾಷ್‌ ಕಲಾಥಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪೋಷಕ ಪಾತ್ರಗಳಲ್ಲಿ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮತ್ತು ಶರಣ್ ಸುರೇಶ್ ಮುಂತಾದವರು ನಟಿಸಿದ್ದಾರೆ.