Rhymes: 'ಬಿಗ್‌ ಬಾಸ್‌'ನಿಂದ ಹೊರಬಂದ ಮೇಲೆ ಪತ್ರಕರ್ತೆಯಾದ ನಟಿ ಶುಭಾ ಪೂಂಜಾ!

ನಟಿ ಶುಭಾ ಪೂಂಜಾ ಬಿಗ್ ಬಾಸ್ ಶೋನಿಂದ ಹೊರಬಂದ ಬಳಿಕ ಏನು ಮಾಡುತ್ತಿದ್ದಾರೆ? ಯಾವ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ. ಅವರ ಹೊಸ ಸಿನಿಮಾ ರೈಮ್ಸ್‌ನ ಟ್ರೈಲರ್ ಲಾಂಚ್ ಆಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ.

Rhymes: 'ಬಿಗ್‌ ಬಾಸ್‌'ನಿಂದ ಹೊರಬಂದ ಮೇಲೆ ಪತ್ರಕರ್ತೆಯಾದ ನಟಿ ಶುಭಾ ಪೂಂಜಾ!
Linkup
'ಬಿಗ್ ಬಾಸ್' ಶೋನಿಂದ ಹೊರಬಂದ ಬಳಿಕ ನಟಿ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ. ಅವರು ಸದ್ದಿಲ್ಲದೆ, ಕ್ರೈಮ್ ರಿಪೋರ್ಟರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದ ಹೆಸರು ''. ಅಜಿತ್ ಕುಮಾರ್ ನಿರ್ದೇಶನ ಮಾಡಿರುವ, ನಾಯಕರಾಗಿ ಕಾಣಿಸಿಕೊಂಡಿರುವ 'ರೈಮ್ಸ್' ಸಿನಿಮಾದಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಪತ್ರಕರ್ತೆಯಾಗಿ ಶುಭಾ ಕಾಣಿಸಿಕೊಂಡಿದ್ದಾರೆ. ಈಚೆಗೆ ಚಿತ್ರದ ಟ್ರೈಲರ್ ಲಾಂಚ್ ಆಗಿದ್ದು, ಡಿ.10ರಂದು ಸಿನಿಮಾ ತೆರೆಗೆ ಬರಲಿದೆ. ತಮ್ಮ ಪಾತ್ರದ ಬಗ್ಗೆ ಮಾತನಾಡುವ ಶುಭಾ ಪೂಂಜಾ, 'ಈ ಸಿನಿಮಾದಲ್ಲಿ ನನಗೆ ಜರ್ನಲಿಸ್ಟ್ ಪಾತ್ರ. ಅದನ್ನು ನೀವು ಮಾಡಬೇಕು, ಅದಕ್ಕಾಗಿ ತಯಾರಿ ಮಾಡಿಕೊಳ್ಳಿ ಎಂದು ನಿರ್ದೇಶಕರು ಹೇಳಿದರು. ಆದರೆ, ನನಗೆ ತುಂಬ ಜನ ಜರ್ನಲಿಸ್ಟ್ ಫ್ರೆಂಡ್ಸ್ ಇದ್ದಾರೆ. ಹಾಗಾಗಿ, ಪತ್ರಕರ್ತೆ ಪಾತ್ರಕ್ಕೆ ಬೇಕಾದ ಬೇಸಿಕ್ ತಯಾರಿಗಳು ನನಗೆ ಗೊತ್ತಿದೆ. ಆದರೆ ಶೂಟಿಂಗ್ ಮಾಡುವಾಗ ಸ್ವಲ್ಪ ಕಷ್ಟ ಆಯ್ತು. ಕೀಬೊರ್ಡ್‌ ಮೇಲೆ ಟೈಪ್ ಮಾಡಲು ಗೊತ್ತಾಗುತ್ತಿರಲಿಲ್ಲ. ಅಲ್ಲದೇ ಪತ್ರಕರ್ತೆಯಾಗಿ ಸೀರಿಯಸ್ ಆಗಿ ಕಾಣಿಸಿಕೊಳ್ಳಬೇಕಿತ್ತು. ಅದು ಸ್ವಲ್ಪ ಕಷ್ಟ ಎನಿಸಿತು. ನನಗೆ ಎಲ್ಲಿಯೂ ನಗುವುದಕ್ಕೆ ಬಿಟ್ಟಿಲ್ಲ' ಎಂದು ಪಾತ್ರದ ಬಗ್ಗೆ ಹೇಳಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಹೀರೋ ಅಜಿತ್ ಜಯರಾಜ್, '5 ವರ್ಷ ಕಷ್ಟಪಟ್ಟು ಈಗ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದರಲ್ಲಿ ಮೊದಲ ಬಾರಿಗೆ ಸಿಂಗಲ್‌ ಲೀಡ್ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ನಟನೆಯ ಅನೇಕ ಸಿನಿಮಾಗಳು ತೆರೆಗೆ ಸಿದ್ಧವಾಗಿವೆ. ಅದರಲ್ಲಿ ನಾನು ಹೀರೋ ಆಗಿರುವ 'ರೈಮ್ಸ್' ಕೂಡ ಒಂದು. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ಈ ಸಿನಿಮಾ ಟೆಕ್ನಿಕಲಿ ತುಂಬ ಉತ್ತಮವಾಗಿ ಮೂಡಿಬಂದಿದೆ. ಜನರಿಗೆ ರೈಮ್ಸ್ ಸಿನಿಮಾ ಇಷ್ಟವಾಗಲಿದೆ ಎಂಬ ನಂಬಿಕೆ ನಮಗಿದೆ. ಜನರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ' ಎನ್ನುತ್ತಾರೆ. ಸಿನಿಮಾ ಬಗ್ಗೆ ಮಾತನಾಡುವ ನಿರ್ದೇಶಕ ಅಜಿತ್ ಕುಮಾರ್, 'ಈ ಸಿನಿಮಾಕ್ಕಾಗಿ ಕಳೆದ 3 ವರ್ಷಗಳಿಂದ ಶ್ರಮಿಸಿದ್ದೇವೆ. ಟ್ರೈಲರ್ ನೋಡಿದ ಎಲ್ಲರೂ ಕೂಡ ಬಹಳ ಮೆಚ್ಚುಗೆ ಸೂಚಿಸಿದ್ದಾರೆ. ಅದು ನಮ್ಮ ಖುಷಿಯನ್ನು ಜಾಸ್ತಿ ಮಾಡಿದೆ. ಕ್ರೈಮ್ ಥ್ರಿಲ್ಲರ್ ಮಾದರಿಯ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಯಾವುದೇ ಥರದ ಹೀರೋಯಿಸಂ ಇರುವುದಿಲ್ಲ. ಕಥೆಗೆ ಹೆಚ್ಚು ಮಹತ್ವ ನೀಡಿದ್ದೇವೆ. ತೆರೆಮೇಲೆ ಕಾಣುವ ಎಲ್ಲ ಪಾತ್ರಗಳಿಗೂ ತುಂಬ ಪ್ರಾಮುಖ್ಯತೆ ಇದೆ. ತಾಂತ್ರಿಕವಾಗಿ ಈ ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ' ಎನ್ನುತ್ತಾರೆ. ರೈಮ್ಸ್ ಚಿತ್ರದಲ್ಲಿ ನಾಯಕಿಯಾಗಿ ನಟಿ ಸುಷ್ಮಾ ನಾಯರ್ ಕಾಣಿಸಿಕೊಂಡಿದ್ದಾರೆ. ಅಜಿತ್ ಜಯರಾಜ್‌ಗೆ ಪತ್ನಿಯಾಗಿ ಅವರು ನಟಿಸಿದ್ದಾರೆ. ಕನ್ನಡದಲ್ಲಿ ಇದು ಅವರಿಗೆ ಮೊದಲ ಸಿನಿಮಾ. ಜ್ಞಾನಶೇಖರ್, ರವಿಕುಮಾರ್, ಗಿರೀಶ್, ರಮೇಶ್ ಆರ್ಯ 'ರೈಮ್ಸ್' ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.