'ಕೋಟಿ' ರಾಮು ನಿರ್ಮಾಣದ ಕಡೆಯ ಸಿನಿಮಾ 'ಅರ್ಜುನ್‌ ಗೌಡ' ರಿಲೀಸ್‌ ಡೇಟ್ ಫಿಕ್ಸ್‌!

ಪ್ರಜ್ವಲ್ ದೇವರಾಜ್, ಪ್ರಿಯಾಂಕಾ ತಿಮ್ಮೇಶ್ ಅಭಿನಯದ ಸಿನಿಮಾ 'ಅರ್ಜುನ್ ಗೌಡ'. ಈ ಸಿನಿಮಾವನ್ನು ನಿರ್ಮಾಪಕ ರಾಮು ನಿರ್ಮಾಣ ಮಾಡಿದ್ದರು. ಆದರೆ ಸಿನಿಮಾ ತೆರೆಕಾಣುವ ಮುನ್ನವೇ ಅವರು ನಿಧನರಾದರು. ಇದೀಗ ಚಿತ್ರದ ಬಿಡುಗಡೆ ದಿನಾಂಕ ಕನ್ಫರ್ಮ್‌ ಆಗಿದೆ.

'ಕೋಟಿ' ರಾಮು ನಿರ್ಮಾಣದ ಕಡೆಯ ಸಿನಿಮಾ 'ಅರ್ಜುನ್‌ ಗೌಡ' ರಿಲೀಸ್‌ ಡೇಟ್ ಫಿಕ್ಸ್‌!
Linkup
ಕನ್ನಡ ಚಿತ್ರರಂಗದಲ್ಲಿ 'ಕೋಟಿ' ರಾಮು ಎಂದೇ ಖ್ಯಾತರಾದವರು ರಾಮು. ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಿದ್ದ ಅವರು, ಕೊರೊನಾದಿಂದಾಗಿ ನಿಧನರಾದರು. ಇದೀಗ ಅವರು ನಿರ್ಮಾಣ ಮಾಡಿದ್ದ '' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇದು ರಾಮು ನಿರ್ಮಾಣದ ಕೊನೇ ಸಿನಿಮಾವಾಗಿದ್ದು, ಪ್ರಜ್ವಲ್‌ ದೇವರಾಜ್ ಹೀರೋ ಆಗಿದ್ದಾರೆ. ಈ ವರ್ಷದ ಕೊನೇ ದಿನದಂದು 'ಅರ್ಜುನ್ ಗೌಡ' ತೆರೆಗಪ್ಪಳಿಸಲಿದೆ. ಡಿ.31ರಂದು ಈ ಸಿನಿಮಾವನ್ನು ರಾಜ್ಯಾದ್ಯಂತ ತೆರೆಕಾಣಿಸಲು ರಾಮು ಪತ್ನಿ, ನಟಿ ಮಾಲಾಶ್ರೀ ನಿರ್ಧರಿಸಿದ್ದಾರೆ. ಚಿಕ್ಕ ವಯಸ್ಸಿಗೆ ನಿರ್ಮಾಪಕರಾಗಿದ್ದ ರಾಮುತಮ್ಮ 21ನೇ ವಯಸ್ಸಿನಲ್ಲಿ ರಾಮು ಚಿತ್ರರಂಗಕ್ಕೆ ಕಾಲಿಟ್ಟರು. 1993ರಲ್ಲಿ ತೆರೆಕಂಡ 'ಗೋಲಿಬಾರ್' ಚಿತ್ರದ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟರು. ಆ ಸಿನಿಮಾದಲ್ಲಿ ನಾಯಕರಾಗಿ ಮಿಂಚಿದವರು ದೇವರಾಜ್. ಆ ಬಳಿಕ ಅವರೊಂದಿಗೆ 'ಲಾಕಪ್ ಡೆತ್', 'ಸರ್ಕಲ್ ಇನ್ಸ್‌ಪೆಕ್ಟರ್' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಅದೇ ರೀತಿ ದೇವರಾಜ್ ಅವರ ಪುತ್ರ ಪ್ರಜ್ವಲ್ ದೇವರಾಜ್ ಜೊತೆಗೆ 'ಗುಲಾಮ', 'ಸಾಗರ್' ಸಿನಿಮಾಗಳನ್ನು ಮಾಡಿದ್ದರು. ಆನಂತರ 'ಅರ್ಜುನ್ ಗೌಡ' ಚಿತ್ರಕ್ಕೆ ಹಣ ಹಾಕಿದ್ದರು. ಆದರೆ, ಆ ಸಿನಿಮಾ ತೆರೆಗೆ ಬರುವ ಮೊದಲೇ ರಾಮು ನಿಧನರಾದರು. ಇದೀಗ ಪತಿ ಕಂಡ ಕನಸನ್ನು ಪತ್ನಿ ಮಾಲಾಶ್ರೀ ನನಸು ಮಾಡಲು ಮುಂದಾಗಿದ್ದಾರೆ. 'ಅರ್ಜುನ್ ಗೌಡ' ಸಿನಿಮಾವನ್ನು ಲಕ್ಕಿ ಶಂಕರ್ ನಿರ್ದೇಶನ ಮಾಡಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ ಈ ಸಿನಿಮಾದ ನಾಯಕಿ. ಚಿತ್ರದ ಹಾಡುಗಳನ್ನು ಕವಿರಾಜ್, ರಾಘವೇಂದ್ರ ಕಾಮತ್, ಶಂಕರ್ ಬರೆದಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಜೈ ಆನಂದ್ ಛಾಯಾಗ್ರಹಣ ಮಾಡಿದ್ದಾರೆ. ಸಾಧು ಕೋಕಿಲ, ರೇಖಾ, 'ಕಡ್ಡಿಪುಡಿ' ಚಂದ್ರು, ಅರವಿಂದ್, ದೀಪಕ್ ಶೆಟ್ಟಿ, ಪ್ರಕಾಶ್, ಯಮುನಾ ಶ್ರೀನಿಧಿ, 'ಭಜರಂಗಿ' ಚೇತನ್, ಜೀವ, ಸೂರಜ್, ದಿನೇಶ್ ಮಂಗಳೂರು, ಹನುಮಂತೇಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕನ್ನಡದ 'ಅಭಿಮನ್ಯು', 'ಓಂಕಾರ್‌', 'ಬೊಂಬಾಟ್‌' ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ರಾಹುಲ್‌ ದೇವ್‌ 'ಅರ್ಜುನ್ ಗೌಡ' ಚಿತ್ರದಲ್ಲಿ ಖಡಕ್‌ ವಿಲನ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ಪ್ರಜ್ವಲ್‌ ದೇವರಾಜ್ ಕಿಕ್‌ ಬಾಕ್ಸರ್‌ ಪಾತ್ರದಲ್ಲಿ ನಟಿಸುತ್ತಿದ್ದು, ಮೂರು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ತಮ್ಮ ಪಾತ್ರವು ಸಾಕಷ್ಟು ರಿಯಲಿಸ್ಟಿಕ್‌ ಆಗಿ ಇರಬೇಕು ಎನ್ನುವ ಕಾರಣಕ್ಕೆ ಕಿಕ್‌ ಬಾಕ್ಸರ್‌ ಸಲಹೆಯನ್ನು ಅವರು ಪಡೆದುಕೊಂಡು ಚಿತ್ರೀಕರಣ ಮಾಡಿದ್ದಾರೆ. ಪ್ರಜ್ವಲ್ ಈ ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತರಬೇತಿಯನ್ನೂ ಪಡೆದಿದ್ದಾರೆ.