ಸುಮನ್ ನಗರ್ಕರ್ ನಟನೆಯ ಹೊಸ ಸಿನಿಮಾಗೆ 192 ಗಂಟೆಯಲ್ಲಿ ಶೂಟಿಂಗ್ ಕಂಪ್ಲೀಟ್!

ಕೆಲ ದಿನಗಳ ಹಿಂದೆ 'ಬಬ್ರೂ' ಸಿನಿಮಾವನ್ನು ನಿರ್ಮಿಸಿ, ನಟಿಸಿದ್ದ ಸುಮನ್ ನಗರ್ಕರ್ ಈಗ 'ಬ್ರಾಹ್ಮೀ' ಅನ್ನೋ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಮಧ್ಯೆ 'ಮೃತ್ಯುಂಜಯ' ಚಿತ್ರದಲ್ಲೂ ನಟಿಸಿದ್ದಾರೆ!

ಸುಮನ್ ನಗರ್ಕರ್ ನಟನೆಯ ಹೊಸ ಸಿನಿಮಾಗೆ 192 ಗಂಟೆಯಲ್ಲಿ ಶೂಟಿಂಗ್ ಕಂಪ್ಲೀಟ್!
Linkup
ನಟಿ ಸುಮನ್‌ ನಗರ್ಕರ್ ಕನ್ನಡ ಸಿನಿಮಾಗಳಲ್ಲಿ ಪುನಃ ಸಕ್ರಿಯರಾಗಿದ್ದಾರೆ. ಈಚೆಗೆ ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಚೆಗೆ ಅವರು ನಟಿಸಿರುವ ಹೊಸ ಚಿತ್ರ ''ದ ಟೀಸರ್ ರಿಲೀಸ್ ಆಯ್ತು. ಡಿಫರೆಂಟ್ ವಿಷಯವನ್ನು ಹೊಂದಿರುವ ಈ ಸಿನಿಮಾದ ಶೂಟಿಂಗ್ ಅನ್ನು ಕೇವಲ 192 ಗಂಟೆಗಳಲ್ಲಿ ಶೂಟಿಂಗ್ ಮಾಡಿ, ಮುಗಿಸಲಾಗಿದೆ. ಅರ್ಥಾತ್, ಬರೀ ಎಂಟೇ ದಿನದಲ್ಲಿ ಇಡೀ ಸಿನಿಮಾ ಕಂಪ್ಲೀಟ್ ಆಗಿದೆ. ಈ ಬಗ್ಗೆ ಸುಮನ್ ಮಾತನಾಡಿದ್ದಾರೆ. ಮೃತ್ಯುಂಜಯದಲ್ಲಿ ಸುಮನ್ ಮನೋವೈದ್ಯೆ'ಇಲ್ಲಿ ನಾನು ಮನೋವೈದ್ಯಯಾಗಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರದ ನಾಯಕ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿರುತ್ತಾನೆ. ಅವನ ಆ ಪ್ರಯತ್ನವನ್ನು ನಾನು ಹೇಗೆ ಬದಲಾಯಿಸುತ್ತೇನೆ ಎಂಬುದನ್ನು ನನ್ನ ಪಾತ್ರದ ಮೂಲಕ ಹೇಳಲಾಗಿದೆ. ಇವತ್ತು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಸಾಮಾನ್ಯ ಪಿಡುಗು ಅಂತಾನೇ ಹೇಳಬಹುದು. ಸಣ್ಣ ಪುಟ್ಟ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದು ಎಷ್ಟು ತಪ್ಪು? ಜೀವನವನ್ನು ನಾವು ಹೇಗೆ ಎದುರಿಸಬೇಕು ಎಂಬ ಸಂದೇಶ ನೀಡುವ ಸಿನಿಮಾ ಇದು' ಎಂದು ಹೇಳುತ್ತಾರೆ ಸುಮನ್ ನಗರ್ಕರ್‌. ಬಹಳ ವೇಗವಾಗಿ ಕೆಲಸ ಮಾಡಿದ್ರು!'ನಿರ್ದೇಶಕ ಸಜ್ಜನ್ ಅವರು ಸಾಕಷ್ಟು ಸಿನಿಮಾ ಮಾಡಿದ್ದಾರೆ. ಅವರೊಂದಿಗೆ ಹೊಸ ತಂಡ ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ. 192 ಗಂಟೆಗಳಲ್ಲಿ ಶೂಟಿಂಗ್ ಮುಗಿಸಿದ್ದೇವೆ. ತುಂಬ ವೇಗವಾಗಿ ಕೆಲಸಗಳನ್ನು ಮುಗಿಸಿದರು. ವೇಗವಾಗಿ ಕೆಲಸ ಮಾಡಿದ್ರೂ ಎಂದಮಾತ್ರಕ್ಕೆ ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಂಡಿಲ್ಲ. ನನಗೆ ಈ ಸಿನಿಮಾದಿಂದ ಒಂದೊಳ್ಳೆಯ ಅನುಭವ ಸಿಕ್ಕಿತು' ಎಂದು ಖುಷಿ ವ್ಯಕ್ತಪಡಿಸುತ್ತಾರೆ ಸುಮನ್. ಈ ಸಿನಿಮಾವನ್ನು ಎಸ್‌ಎಸ್‌ ಸಜ್ಜನ್ ನಿರ್ದೇಶನ ಮಾಡಿದ್ದಾರೆ. ಸುಮನ್ ಜೊತೆಗೆ ಹಿತೇಶ್, ಶ್ರೇಯಾ ಶೆಟ್ಟಿ, ಚೇತನ್‌ ದುರ್ಗ, ಅಮಿತ್, ಪವಿತ್ರಾ, ಮಜಾಭಾರತ ಶಿವು ಮುಂತಾದವರು ನಟಿಸಿದ್ದಾರೆ. ನಿರ್ಮಾಣದ ಹೊಣೆ ಶೈಲಜಾ ಪ್ರಕಾಶ್ ಅವರದ್ದು, ಆನಂದ್ ರಾಜಾ ವಿಕ್ರಮ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಶೀಘ್ರದಲ್ಲೇ ಸಿನಿಮಾವನ್ನು ತೆರೆಗೆ ಉದ್ದೇಶ ಚಿತ್ರತಂಡದ್ದು.