ಕೋವಿಡ್ 19 ನಡುವೆಯೂ Kanwar Yatra ಅನುಮತಿ: ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್

ಉತ್ತರ ಪ್ರದೇಶ ಸರಕಾರವು ಕೋವಿಡ್ 19ರ ಭಯದ ನಡುವೆಯೂ ಕನ್ವರ್ ಯಾತ್ರೆಗೆ ಅನುಮತಿ ನೀಡಿರುವುದಕ್ಕಾಗಿ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೆ ಮಾಡಿದೆ. ಕೇಂದ್ರ ಸರಕಾರಕ್ಕೂ ನೋಟಿಸ್ ನೀಡಲಾಗಿದೆ.

ಕೋವಿಡ್ 19 ನಡುವೆಯೂ Kanwar Yatra ಅನುಮತಿ: ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್
Linkup
ಹೊಸದಿಲ್ಲಿ: ಭೀತಿಯ ನಡುವೆಯೂ ಮುಂದಿನ ವಾರ ನಡೆಯಲಿರುವ ಕನ್ವರ್ ಯಾತ್ರೆಗೆ ಅನುಮತಿ ನೀಡಲು ನಿರ್ಧರಿಸಿರುವ ಸರಕಾರಕ್ಕೆ ಬುಧವಾರ ನೋಟಿಸ್ ನೀಡಿದೆ. ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಉತ್ತರ ಪ್ರದೇಶ ಸರಕಾರದಿಂದ ಪ್ರತಿಕ್ರಿಯೆ ಕೇಳಿದೆ. ಕೇಂದ್ರ ಸರಕಾರಕ್ಕೂ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಶುಕ್ರವಾರ ಮುಂದಿನ ವಿಚಾರಣೆ ನಡೆಯಲಿದೆ. ಜುಲೈ 25ರಿಂದ ನಡೆಯಬಹುದಾಗಿದ್ದು, ಅತಿ ಕನಿಷ್ಠ ಸಂಖ್ಯೆಯಲ್ಲಿ ಜನರು ಸೇರಬಹುದಾಗಿದೆ ಮತ್ತು ಕೋವಿಡ್ 19 ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಉತ್ತರ ಪ್ರದೇಶ ಸರಕಾರ ಮಂಗಳವಾರ ಹೇಳಿತ್ತು. ಅಗತ್ಯವಿದ್ದರೆ ಯಾತ್ರೆಯಲ್ಲಿ ಭಾಗವಹಿಸುವ ಭಕ್ತರು ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಹೊಂದುವುದು ಕಡ್ಡಾಯ ಮಾಡಬಹುದಾಗಿದೆ ಎಂದು ಸರಕಾರ ತಿಳಿಸಿತ್ತು. 'ಕೋವಿಡ್ ಶಿಷ್ಟಾಚಾರಗಳಿಗೆ ಸಂಪೂರ್ಣ ಬದ್ಧರಾಗಿರುವುದನ್ನು ನೋಡಿಕೊಳ್ಳಬೇಕು. ಕನ್ವರ್ ಯಾತ್ರೆಯ ಸುರಕ್ಷಿತ ಮತ್ತು ಯಶಸ್ವಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಾವುದೇ ಹಿಂಜರಿಕೆ ಇರಬಾರದು' ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದರು. ಆದರೆ, ಅತ್ತ ಸರಕಾರ ತನ್ನ ರಾಜ್ಯದ ಭಾಗದೊಳಗೆ ಕನ್ವರ್ ಯಾತ್ರೆಗೆ ಅವಕಾಶವಿಲ್ಲ ಎಂದು ಹೇಳಿದೆ. 'ಜನರು ಸಾಯುವುದನ್ನು ದೇವರೂ ಬಯಸುವುದಿಲ್ಲ' ಎಂದು ಅಲ್ಲಿನ ನೂತನ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಹೇಳಿದ್ದಾರೆ. ಉತ್ತರಾಖಂಡದಲ್ಲಿನ ಭಾರತೀಯ ವೈದ್ಯಕೀಯ ಸಂಸ್ಥೆಯ ಘಟಕವು ಯಾತ್ರೆ ರದ್ದುಗೊಳಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿತ್ತು. ಏನಿದು ಯಾತ್ರೆ?ಪ್ರತಿ ವರ್ಷವೂ ಉತ್ತರದ ವಿವಿಧ ದೇಶಗಳಿಂದ ಮೂರು ಕೋಟಿಗೂ ಅಧಿಕ ಕನ್ವರಿಗಳು (ಶಿವನ ಭಕ್ತರು) ಕಾಲ್ನಡಿಗೆ ಮೂಲಕ ಯಾತ್ರೆ ನಡೆಸುತ್ತಾರೆ. ತಮ್ಮ ಊರುಗಳಲ್ಲಿರುವ ಶಿವ ದೇವಾಲಯಗಳಿಗೆ ಅರ್ಪಿಸಲು ಹರಿದ್ವಾರದಲ್ಲಿ ಗಂಗಾ ನದಿಯಿಂದ ನೀರು ಸಂಗ್ರಹಿಸಿ ಕೊಂಡೊಯ್ಯುವುದು ಈ ಯಾತ್ರೆಯ ಉದ್ದೇಶವಾಗಿದೆ. 14 ದಿನಗಳ ಯಾತ್ರೆಯು ಶ್ರಾವಣ ಮಾಸದ ಆರಂಭದಲ್ಲಿ ಶುರುವಾಗುತ್ತದೆ. ಉತ್ತರ ಪ್ರದೇಶ, ಹರ್ಯಾಣ, ಪಂಜಾಬ್, ದಿಲ್ಲಿ ಮತ್ತು ಹಿಮಾಚಲ ಪ್ರದೇಶಗಳಿಂದ ಜನರು ಹರಿದ್ವಾರದಲ್ಲಿ ಸೇರುತ್ತಾರೆ. ಸಾಂಕ್ರಾಮಿಕದ ಕೇಂದ್ರವಾಗಲು ಬಿಡುವುದಿಲ್ಲಉತ್ತರ ಪ್ರದೇಶ ಸರಕಾರ ಕನ್ವರ್ ಯಾತ್ರೆಗೆ ಅವಕಾಶ ನೀಡಿದ್ದರೂ, ಹರಿದ್ವಾರಕ್ಕೆ ಪ್ರವೇಶಿಸಲು ಅವಕಾಶ ಸಿಗುವುದಿಲ್ಲ. ಏಕೆಂದರೆ ಉತ್ತರಾಖಂಡ ಸರಕಾರ ಯಾತ್ರೆಗೆ ನಿರ್ಬಂಧ ವಿಧಿಸಿದೆ. 'ಕಳೆದ ಅನೇಕ ದಿನಗಳಿಂದ ಅಧಿಕಾರಿಗಳು ಮತ್ತು ನೆರೆಯ ರಾಜ್ಯಗಳ ಆಡಳಿತಗಾರರೊಂದಿಗೆ ಕೂಡ ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೇನೆ. ಈ ಸಂದರ್ಭದಲ್ಲಿ ಹರಿದ್ವಾರವನ್ನು ಸಾಂಕ್ರಾಮಿಕದ ಕೇಂದ್ರವನ್ನಾಗಿ ಪರಿವರ್ತಿಸಲು ನಾವು ಬಯಸುವುದಿಲ್ಲ ಎನ್ನುವುದು ಅಂತಿಮ ನಿರ್ಧಾರವಾಗಿದೆ' ಎಂದು ಧಮಿ ಹೇಳಿಕೆ ನೀಡಿದ್ದಾರೆ.