ಪ್ರತಿ ಪತ್ರಕರ್ತನೂ ದೇಶದ್ರೋಹ ಪ್ರಕರಣದಿಂದ ರಕ್ಷಣೆಗೆ ಅರ್ಹ: ಸುಪ್ರೀಂಕೋರ್ಟ್

ಪತ್ರಕರ್ತರು ದೇಶದ್ರೋಹ ಪ್ರಕರಣಗಳ ಆರೋಪಗಳಿಂದ ರಕ್ಷಣೆ ಪಡೆಯಲು ಅರ್ಹರಾಗಿದ್ದಾರೆ ಎಂದು 1962ರ ತೀರ್ಪನ್ನು ಸುಪ್ರೀಂಕೋರ್ಟ್ ಉಲ್ಲೇಖಿಸಿದೆ. ಪತ್ರಕರ್ತ ವಿನೋದ್ ದುವಾ ವಿರುದ್ಧದ ದೇಶದ್ರೋಹದ ಪ್ರಕರಣವನ್ನು ಅತಿ ವಜಾಗೊಳಿಸಿದೆ.

ಪ್ರತಿ ಪತ್ರಕರ್ತನೂ ದೇಶದ್ರೋಹ ಪ್ರಕರಣದಿಂದ ರಕ್ಷಣೆಗೆ ಅರ್ಹ: ಸುಪ್ರೀಂಕೋರ್ಟ್
Linkup
ಹೊಸದಿಲ್ಲಿ: ಪತ್ರಕರ್ತ ವಿರುದ್ಧದ ದೇಶದ್ರೋಹದ ಪ್ರಕರಣವನ್ನು ಗುರುವಾರ ರದ್ದುಗೊಳಿಸಿದೆ. 1962ರ ಆದೇಶವು ಅಂತಹ ಆರೋಪಗಳಿಂದ ಪ್ರತಿ ಪತ್ರಕರ್ತನಿಗೂ ರಕ್ಷಣೆ ಒದಗಿಸುತ್ತದೆ ಎಂದು ಕೋರ್ಟ್ ತಿಳಿಸಿದೆ. ಕಳೆದ ವರ್ಷ ದೆಹಲಿಯಲ್ಲಿ ನಡೆದ ಗಲಭೆಯ ಕುರಿತು ಕಾರ್ಯಕ್ರಮ ನಡೆಸಿದ್ದಕ್ಕಾಗಿ ಬಿಜೆಪಿ ನಾಯಕರೊಬ್ಬರ ದೂರಿನಂತೆ ವಿನೋದ್ ದುವಾ ವಿರುದ್ಧ ಹಿಮಾಚಲ ಪ್ರದೇಶದಲ್ಲಿ ಪ್ರಕರಣ ದಾಖಲಾಗಿತ್ತು. ಸುಳ್ಳು ಸುದ್ದಿ ಹರಡಿರುವುದು, ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡಿಸುವುದು, ಮಾನಹಾನಿಕರ ವಿಷಯಗಳನ್ನು ಮುದ್ರಿಸುವುದು ಮತ್ತು ಸಾರ್ವಜನಿಕ ದುರ್ವರ್ತನೆಗೆ ಎಡೆಮಾಡಿಕೊಡುವ ಹೇಳಿಕೆಗಳನ್ನು ನೀಡುವುದು ಮುಂತಾದ ಆರೋಪಗಳನ್ನು ಮಾಡಲಾಗಿತ್ತು. ಈ ಎಫ್‌ಐಆರ್ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಹಿರಿಯ ವಿನೋದ್ ದುವಾ, ಈ ಕಿರಿಕುಳದಿಂದ ತಮಗೆ ಆಗಿರುವ ಹಾನಿಗೆ ದೊಡ್ಡ ಪರಿಹಾರ ನೀಡಬೇಕು ಎಂದು ಕೋರಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಸಮಿತಿಯು ಅನುಮೋದನೆ ನೀಡದ ಹೊರತು 10 ವರ್ಷ ಮೇಲ್ಪಟ್ಟ ಯಾವುದೇ ಪತ್ರಕರ್ತನ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸಬಾರದು ಎಂದೂ ದುವಾ ಮನವಿ ಮಾಡಿದ್ದರು. ಆದರೆ ಇದನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ಆದರೆ, ಪ್ರತಿ ಪತ್ರಕರ್ತನೂ ಇಂತಹ ದೇಶದ್ರೋಹ ಪ್ರಕರಣಗಳಿಂದ ರಕ್ಷಣೆ ಪಡೆದಿದ್ದಾನೆ ಎಂದು ಹಿಂದಿನ ತೀರ್ಪನ್ನು ಪರಿಗಣಿಸಿ ಕೋರ್ಟ್ ಉಲ್ಲೇಖಿಸಿತು. 'ದೇಶದ್ರೋಹದ ಕುರಿತಾದ ಕೇದಾರ್ ನಾಥ್ ಸಿಂಗ್ ತೀರ್ಪಿನ ಅಡಿಯಲ್ಲಿ ಪ್ರತಿ ಪತ್ರಕರ್ತನೂ ರಕ್ಷಣೆಗೆ ಅರ್ಹನಾಗಿದ್ದಾನೆ' ಎಂದು ಹೇಳಿತು. 'ಸರ್ಕಾರದ ಕ್ರಮಗಳ ವಿರುದ್ಧ ಅಸಮ್ಮತಿ ವ್ಯಕ್ತಪಡಿಸಲು ತಮ್ಮ ಸುಧಾರಿತ ಅಥವಾ ಕಾನೂನುಬದ್ಧವಾಗಿ ಕಠಿಣ ಪದಗಳನ್ನು ಬಳಸುವುದು ದೇಶದ್ರೋಹವಾಗುವುದಿಲ್ಲ' ಎಂದು 1962ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿತ್ತು.