Oscars 2021: 93ನೇ ಅಕಾಡೆಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ತಾರೆಯರ ಪಟ್ಟಿ

ಆಸ್ಕರ್ ಪ್ರಶಸ್ತಿ 2021 ಅರ್ಥಾತ್ 93ನೇ ಅಕಾಡೆಮಿ ಅವಾರ್ಡ್ಸ್ ಮುಡಿಗೇರಿಸಿಕೊಂಡ ತಾರೆಯರ ಪಟ್ಟಿ ಇಲ್ಲಿದೆ.

Oscars 2021: 93ನೇ ಅಕಾಡೆಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ತಾರೆಯರ ಪಟ್ಟಿ
Linkup
ಬಣ್ಣದ ಜಗತ್ತಿನ ಪ್ರತಿಷ್ಟಿತ ಹಾಗೂ ಅತ್ಯುನ್ನತ ಪ್ರಶಸ್ತಿ 'ಆಸ್ಕರ್ ಅವಾರ್ಡ್ಸ್'. ಈ ಬಾರಿಯ ಅಕಾಡೆಮಿ ಅವಾರ್ಡ್ಸ್ ಸಮಾರಂಭ ಅಮೇರಿಕಾದ ಎರಡು ವೆನ್ಯೂಗಳಲ್ಲಿ ನಡೆಯಿತು. ಕೊರೊನಾ ವೈರಸ್ ಸೋಂಕಿನ ಭೀತಿ ಇದ್ದ ಕಾರಣ 93ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಲಿವುಡ್‌ನ ಡಾಲ್ಬಿ ಥಿಯೇಟರ್ ಮತ್ತು ಲಾಸ್‌ಏಂಜಲೀಸ್‌ನ ಯೂನಿಯನ್ ಸ್ಟೇಷನ್‌ನಲ್ಲಿ ನಡೆಯಿತು. ಬ್ರಾಡ್ ಪಿಟ್, ರೆಜೀನಾ ಕಿಂಗ್, ಹ್ಯಾರಿಸನ್ ಫೋರ್ಡ್ ಸೇರಿದಂತೆ ಹಲವರು ಈ ಬಾರಿ ವೇದಿಕೆಗೆ ಬಂದು ಪ್ರಶಸ್ತಿ ಪ್ರದಾನ ಮಾಡಿದರು. ಈ ಬಾರಿ 'ಬೆಸ್ಟ್ ಡೈರೆಕ್ಟರ್' ಪ್ರಶಸ್ತಿಗೆ ಇಬ್ಬರು ಮಹಿಳಾ ನಿರ್ದೇಶಕರು ನಾಮಿನೇಟ್ ಆಗಿ ಹೊಸ ಇತಿಹಾಸ ಸೃಷ್ಟಿಸಿದ್ದರು. ಕೊನೆಗೆ 'ಬೆಸ್ಟ್ ಡೈರೆಕ್ಟರ್' ಪ್ರಶಸ್ತಿಯನ್ನು 'ನೊಮ್ಯಾಡ್‌ಲ್ಯಾಂಡ್' ಚಿತ್ರಕ್ಕಾಗಿ ಚೀನಾ ಮೂಲದ ಕ್ಲೋವಿ ಜಾವೊ ಮುಡಿಗೇರಿಸಿಕೊಂಡರು. ಅಕಾಡೆಮಿ ಅವಾರ್ಡ್ಸ್ ಇತಿಹಾಸದಲ್ಲಿ 'ಬೆಸ್ಟ್ ಡೈರೆಕ್ಟರ್' ಅವಾರ್ಡ್ ಪಡೆದ ಎರಡನೇ ಮಹಿಳೆ ಎಂಬ ಖ್ಯಾತಿಗೆ ಕ್ಲೋವಿ ಜಾವೊ ಪಾತ್ರರಾದರು. ಈ ವರ್ಷ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದವರು 83 ವರ್ಷದ ನಟ ಆಂಥೋನಿ ಹಾಪ್‌ಕಿನ್ಸ್. 'ದಿ ಫಾದರ್' ಚಿತ್ರದಲ್ಲಿನ ಮನಮಿಡಿಯುವ ಅಭಿನಯಕ್ಕಾಗಿ ಆಂಥೋನಿ ಹಾಪ್‌ಕಿನ್ಸ್‌ಗೆ ಆಸ್ಕರ್ ಅವಾರ್ಡ್ ಲಭಿಸಿದೆ. ಹಾಗ್ನೋಡಿದ್ರೆ, ಇದು ಆಂಥೋನಿ ಹಾಪ್‌ಕಿನ್ಸ್‌ರವರಿಗೆ ಸಿಕ್ಕಿರುವ ಎರಡನೇ ಅಕಾಡೆಮಿ ಪ್ರಶಸ್ತಿ. 1992ರಲ್ಲಿ 'ದಿ ಸೈಲೆನ್ಸ್ ಆಫ್ ದಿ ಲ್ಯಾಂಬ್ಸ್' ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕೆ ಆಂಥೋನಿ ಹಾಪ್‌ಕಿನ್ಸ್‌ಗೆ 'ಅತ್ಯುತ್ತಮ ನಟ' ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು. ಅರ್ಥಾತ್ ಮುಡಿಗೇರಿಸಿಕೊಂಡ ತಾರೆಯರ ಪಟ್ಟಿ ಇಲ್ಲಿದೆ. ಅತ್ಯುತ್ತಮ ಆನಿಮೇಟೆಡ್ ಕಿರು ಚಿತ್ರ - 'ಐಫ್ ಎನಿಥಿಂಗ್ ಹ್ಯಾಪೆನ್ಸ್ ಐ ಲವ್ ಯು' ಅತ್ಯುತ್ತಮ ನಿರ್ದೇಶಕಿ - ಕ್ಲೋವಿ ಜಾವೊ - ಚಿತ್ರ: ನೊಮ್ಯಾಡ್‌ಲ್ಯಾಂಡ್ ಅತ್ಯುತ್ತಮ ಲೈವ್ ಆಕ್ಷನ್ ಕಿರು ಚಿತ್ರ - 'ಟೂ ಡಿಸ್ಟೆಂಟ್ ಸ್ಟ್ರೇಂಜರ್ಸ್' ಬೆಸ್ಟ್ ಸೌಂಡ್ - 'ಸೌಂಡ್ ಆಫ್ ಮೆಟಲ್' ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್ - 'Ma Rainey's ಬ್ಲಾಕ್ ಬಾಟಮ್' ಅತ್ಯುತ್ತಮ ಹೇರ್‌ ಸ್ಟೈಲ್-ಮೇಕಪ್ - 'Ma Rainey's ಬ್ಲಾಕ್ ಬಾಟಮ್' ಅತ್ಯುತ್ತಮ ಪೋಷಕ ನಟ - ಡೇನಿಯಲ್ ಕಾಲೂಯಾ - ಚಿತ್ರ: Judas and the black messaih ಬೆಸ್ಟ್ ಇಂಟರ್‌ನ್ಯಾಷನಲ್ ಫೀಚರ್ - ಅನದರ್ ರೌಂಡ್ ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್‌ಪ್ಲೇ - ದಿ ಫಾದರ್ ಬೆಸ್ಟ್ ಒರಿಜಿನಲ್ ಸ್ಕ್ರೀನ್‌ಪ್ಲೇ - ಪ್ರಾಮಿಸಿಂಗ್ ಯಂಗ್ ವುಮನ್ ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ - ಮ್ಯಾಂಕ್ ಅತ್ಯುತ್ತಮ ಪೋಷಕ ನಟಿ - Yuh-Jung Youn - ಚಿತ್ರ: ಮಿನಾರಿ ಅತ್ಯುತ್ತಮ ವಿಶುವಲ್ ಎಫೆಕ್ಟ್ಸ್ - ಟೆನೆಟ್ ಬೆಸ್ಟ್ ಡಾಕ್ಯುಮೆಂಟರಿ ಫೀಚರ್ - ಮೈ ಆಕ್ಟೋಪಸ್ ಟೀಚರ್ ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್ ಸಬ್ಜೆಕ್ಟ್ - Colette ಬೆಸ್ಟ್ ಆನಿಮೇಟೆಡ್ ಫೀಚರ್ - ಸೋಲ್ ಬೆಸ್ಟ್ ಫಿಲ್ಮ್ ಎಡಿಟಿಂಗ್ - 'ಸೌಂಡ್ ಆಫ್ ಮೆಟಲ್' ಅತ್ಯುತ್ತಮ ಛಾಯಾಗ್ರಹಣ - ಮ್ಯಾಂಕ್ ಬೆಸ್ಟ್ ಒರಿಜಿನಲ್ ಸಾಂಗ್ - 'ಫೈಟ್ ಫಾರ್ ಯು', 'Judas and the Black Messaih' ಬೆಸ್ಟ್ ಒರಿಜಿನಲ್ ಸ್ಕೋರ್ - ಸೋಲ್ ಅತ್ಯುತ್ತಮ ಚಿತ್ರ - ನೊಮ್ಯಾಡ್‌ಲ್ಯಾಂಡ್ ಅತ್ಯುತ್ತಮ ನಟಿ - ಫ್ರಾನ್ಸೆಸ್ ಮೆಕ್‌ಡಾರ್ಮ್ಯಾಂಡ್ - ಚಿತ್ರ: ನೊಮ್ಯಾಡ್‌ಲ್ಯಾಂಡ್ ಅತ್ಯುತ್ತಮ ನಟ - ಆಂಥೋನಿ ಹಾಪ್‌ಕಿನ್ಸ್ - ಚಿತ್ರ: ದಿ ಫಾದರ್