ಈಚೆಗಷ್ಟೇ ಪೊಲೀಸ್ ಪಾತ್ರ ಮಾಡಿದ್ದ ವಿಜಯ್ ರಾಘವೇಂದ್ರ ಈಗ ಕದ್ದ ಚಿತ್ರಕ್ಕೆ ಹೀರೋ!

ಈಚೆಗಷ್ಟೇ 'ಸೀತಾರಾಮ್ ಬಿನೋಯ್' ಸಿನಿಮಾದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ ಮಾಡಿದ್ದ ನಟ ವಿಜಯ್‌ ರಾಘವೇಂದ್ರ ಈಗ ಬರಹಗಾರರಾಗಿದ್ದಾರೆ. ಹೊಸ ಸಿನಿಮಾದಲ್ಲಿ ರೈಟರ್‌ ಆಗಿ ಟಫ್‌ ಮ್ಯಾನ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈಚೆಗಷ್ಟೇ ಪೊಲೀಸ್ ಪಾತ್ರ ಮಾಡಿದ್ದ ವಿಜಯ್ ರಾಘವೇಂದ್ರ ಈಗ ಕದ್ದ ಚಿತ್ರಕ್ಕೆ ಹೀರೋ!
Linkup
ಪದ್ಮಾ ಶಿವಮೊಗ್ಗ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ ವಿಜಯ್‌ ರಾಘವೇಂದ್ರ. ಅವರು ತಮ್ಮ ನಟನೆಯ 50ನೇ ಚಿತ್ರವನ್ನು ಪೂರೈಸಿದ್ದು ಮುಂದಕ್ಕೆ ಹೆಜ್ಜೆ ಇಟ್ಟಿದ್ದಾರೆ. ಅವರ ನಟನೆಯ 'ಸೀತಾರಾಮ್‌ ಬಿನೋಯ್‌ ಕೇಸ್‌ ನಂ. 18' ಇತ್ತೀಚೆಗೆ ರಿಲೀಸ್‌ ಆಗಿದೆ. ಬಹಳ ಚಾಲೆಂಜಿಂಗ್‌ ಪಾತ್ರಗಳನ್ನೂ ಲೀಲಾಜಾಲವಾಗಿ ನಟಿಸುವ ಈ ನಟ ಈಗ ಇದುವರೆಗೆ ನಟಿಸಿದ ಎಲ್ಲಾ ಪಾತ್ರಗಳಿಗಿಂತ ವಿಭಿನ್ನ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ '' ಎಂದು ಹೆಸರಿಡಲಾಗಿದ್ದು, ಟೈಟಲ್‌ ಮತ್ತು ಫಸ್ಟ್‌ ಲುಕ್‌ ಟೀಸರ್‌ ರಿಲೀಸ್‌ ಆಗಿದೆ. ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ ಇದಾಗಿದ್ದು, ಸುಹಾಸ್‌ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ವಿಜಯ್‌ ಲುಕ್‌ ಬೇರೆ ಥರ ಇರಲಿದೆ ಎಂದಿದ್ದಾರೆ ನಿರ್ದೇಶಕರು. 'ಸಿನಿಮಾದಲ್ಲಿ ವಿಜಯ್‌ ರಾಘವೇಂದ್ರ ಅವರ ಕ್ಯಾರೆಕ್ಟರ್‌ ಪೂರ್ಣ ಬೇರೆ ರೀತಿ ಇರಲಿದೆ. ಇಲ್ಲಿಯವರೆಗೆ ಅವರು ನಟಿಸಿರುವ ಪಾತ್ರಗಳಿಗಿಂತ ಶೇ.100 ಬೇರೆ ರೀತಿಯ ಚಿತ್ರ. ರೈಟರ್‌ಗಳು ಎಂದರೆ ಎಲ್ಲರ ಮನಸ್ಸಲ್ಲಿಒಂದು ಇಮೇಜ್‌ ಬರುತ್ತೆ. ಆದರೆ, ಚಿತ್ರದಲ್ಲಿ ಹೀರೋ ಆ ಥರ ಇರಲ್ಲ. ಸ್ವಲ್ಪ ಆಂಗ್ಸೈಟಿ, ಡೋಂಟ್‌ ಕೇರ್‌ ಕ್ಯಾರೆಕ್ಟರ್‌ ಇರುತ್ತೆ. ವಿಜಯ್‌ ಅವರು ಕೂಡ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ' ಎಂದಿದ್ದಾರೆ ಸುಹಾಸ್‌. ಚಿತ್ರದಲ್ಲಿ ಕ್ರೈಂ, ಸಸ್ಪೆನ್ಸ್‌ ಸುತ್ತ ಕಥೆ ಸಾಗುತ್ತದೆ. ಕಥೆಯನ್ನು ನಿರ್ದೇಶಕ ಸುಹಾಸ್‌ ಅವರೇ ಬರೆದಿದ್ದಾರೆ. 'ಹೀರೋ ತನ್ನ ಖುಷಿಗೆ ಇಷ್ಟಬಂದಂತೆ ಬರೆದುಕೊಂಡಿರುತ್ತಾನೆ. ಬರಹಗಾರನೊಬ್ಬ ದಿನಬೆಳಗಾಗುವುದರಲ್ಲಿ ಖ್ಯಾತಿ ಗಳಿಸಿ ಸ್ಟಾರ್‌ ಆಗುತ್ತಾನೆ. ಕೆಲವೊಮ್ಮೆ ದಿನಬೆಳಗಾಗುವುದರಲ್ಲಿ ಕೆಳಕ್ಕೂ ಬೀಳುತ್ತಾನೆ. ಹೀಗಾದಾಗ ಹೇಗನ್ನಿಸುತ್ತೆ ಅನ್ನೋದು ಚಿತ್ರದಲ್ಲಿದೆ. ಇದರ ನಡುವೆ ಒಂದು ಕ್ರೈಂ ನಡೆಯುತ್ತೆ. ರೈಟರ್‌ ಮತ್ತು ಕ್ರೈಂ ಕನೆಕ್ಟ್ ಆದಾಗ ಏನಾಗುತ್ತೆ ಎನ್ನುವುದು ಕಥೆ. ಚಿತ್ರದಲ್ಲಿಎಮೋಷನ್ಸ್‌ ಬಹಳ ಇವೆ. ಹೀರೋಗೆ ಮೂರ್ನಾಲ್ಕು ಥರದ ಎಮೋಷನ್ಸ್‌ ಇದ್ದಕ್ಕಿದ್ದಂತೆ ಬಂದು ಹೋಗುತ್ತಿರುತ್ತವೆ. ಭಾವನೆಯಲ್ಲಿಏರಿಳಿತಗಳಿರುತ್ತವೆ. ಸಿಕ್ಕಾಪಟ್ಟೆ ನಟನೆಯನ್ನು ಬೇಡುತ್ತೆ. ಇದು ವಿಜಯ್‌ ಅವರಿಗೆ ಬಹಳ ಎಕ್ಸೈಟಿಂಗ್‌ ವಿಷಯ ಎನ್ನಿಸಿತು. ಸಿನಿಮಾ ಒಪ್ಪಿಕೊಂಡರು. ತುಂಬಾ ಒಳ್ಳೆಯ ನಟ ಬೇಕಿದ್ದರಿಂದಲೇ ನಾವು ವಿಜಯ್‌ ಅವರನ್ನು ಕೇಳಿದ್ದು. ಬೇರೆ ಶೇಡ್‌ಗಳಿರುವ ಪಾತ್ರ ಇದು' ಎನ್ನುತ್ತಾರೆ ಸುಹಾಸ್‌. ರಂಗಭೂಮಿಯಿಂದ ಬಂದ ಸುಹಾಸ್‌ ಹಲವು ನಿರ್ದೇಶಕರ ಜತೆ ಕೆಲಸ ಮಾಡಿದ್ದು, 'ಪಿ5' ಎಂಬ ಚಿತ್ರ ನಿರ್ದೇಶನದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಚಿತ್ರ ರಿಲೀಸ್‌ ಆಗಬೇಕಿದೆ. ಚಿತ್ರದಲ್ಲಿ ವಿಜಯ್‌ ರಾಘವೇಂದ್ರ ಜೋಡಿಯಾಗಿ ನಮ್ರತಾ ಸುರೇಂದ್ರನಾಥ್‌ ನಟಿಸುತ್ತಿದ್ದಾರೆ. ಮಗಳ ಪಾತ್ರದಲ್ಲಿ ಬಾಲನಟಿ ಆರಾಧ್ಯ ನಟಿಸಿದ್ದಾಳೆ. ಮಿರ್ಚಿ ಮಂಡಕ್ಕಿ ಖಡಕ್‌ ಚಾಯ್‌, ಶಿವಾಜಿ ಸುರತ್ಕಲ್‌, ಪಿ5 ಚಿತ್ರಗಳಲ್ಲಿ ನಮ್ರತಾ ನಟಿಸಿದ್ದಾರೆ. 'ಕದ್ದ ಚಿತ್ರ'ದಲ್ಲಿ ಕಿರುತೆರೆ ನಟ ತ್ರಿವಿಕ್ರಮ್‌, ರಾಘು ಶಿವಮೊಗ್ಗ, ಬಾಲಾಜಿ ಮನೋಹರ್‌ ನಟಿಸಿದ್ದು, ನೆಗೆಟಿವ್‌ ರೋಲ್‌ನಲ್ಲಿ ಸುಜಿತ್‌ ಸುಪ್ರಭಾ, ಸ್ಟೀಫನ್‌, ವಿನಯ್‌ ನಟಿಸಿದ್ದಾರೆ. ಕೇರಳ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಕೋಟ್ಸ್‌ 'ಕದ್ದ ಚಿತ್ರ' ಸಿನಿಮಾದ ಹೀರೋ ಪಾತ್ರದಲ್ಲಿ ವಿಜಯ್‌ ರಾಘವೇಂದ್ರ ಅವರು ಬೇರೆ ಥರ ಕಾಣಿಸಿಕೊಂಡಿದ್ದಾರೆ. ಭಾವನೆಗಳ ಏರಿಳಿತಗಳಿರುವ ಈ ಪಾತ್ರಕ್ಕೆ ಅತ್ಯುತ್ತಮ ನಟ ಬೇಕಿತ್ತು. ವಿಜಯ್‌ ಅವರು ಅದ್ಭುತ ನಟ. ಮೊದಲ ಬಾರಿಗೆ ಅವರು ಇಂಥದ್ದೊಂದು ಪಾತ್ರದಲ್ಲಿನಟಿಸಿದ್ದಾರೆ. -ಸುಹಾಸ್‌ ಕೃಷ್ಣ, ನಿರ್ದೇಶಕ