ವೈರಲ್ ಇನ್ಫೆಕ್ಷನ್: ತಮಿಳು ನಟ ಸಿಂಬು ಆಸ್ಪತ್ರೆಗೆ ದಾಖಲು

ಕಾಲಿವುಡ್‌ನ ಖ್ಯಾತ ನಟ ಸಿಂಬು ಅಲಿಯಾಸ್ ಸಿಲಂಬರಸನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈರಲ್ ಇನ್ಫೆಕ್ಷನ್: ತಮಿಳು ನಟ ಸಿಂಬು ಆಸ್ಪತ್ರೆಗೆ ದಾಖಲು
Linkup
ಕಾಲಿವುಡ್‌ನ ಖ್ಯಾತ ನಟ () ಅಲಿಯಾಸ್ ಸಿಲಂಬರಸನ್ () ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು (ಡಿಸೆಂಬರ್ 11) ಚೆನ್ನೈನ (Chennai) ಖಾಸಗಿ ಆಸ್ಪತ್ರೆಗೆ ನಟ ಸಿಂಬು ಅಡ್ಮಿಟ್ ಆಗಿದ್ದಾರೆ. ತೀವ್ರ ವೈರಲ್ ಇನ್ಫೆಕ್ಷನ್‌ನಿಂದ ಬಳಲುತ್ತಿರುವುದರಿಂದ ಚಿಕಿತ್ಸೆಗಾಗಿ ಸಿಂಬು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ. ನಟ ಸಿಂಬು ಅವರಿಗೆ ಕೊರೊನಾ ವೈರಸ್ ಸೋಂಕು (Covid-19) ತಗುಲಿಲ್ಲ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ನಟ ಸಿಂಬು ತಮ್ಮ ಹೊಸ ಚಿತ್ರವೊಂದರ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದರು. ಸಿಂಬು ಹಾಗೂ ಗೌತಮ್ ಮೆನನ್ ಕಾಂಬಿನೇಶನ್‌ನಲ್ಲಿ ಹೊಸ ಚಿತ್ರ ಮೂಡಿಬರುತ್ತಿದೆ. ಆ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅದು ಔಟ್ ಅಂಡ್ ಔಟ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಶೂಟಿಂಗ್ ಬಿರುಸಿನಿಂದ ಸಾಗುತ್ತಿತ್ತು. ಹೀಗಿರುವಾಗಲೇ, ನಟ ಸಿಂಬು ಅನಾರೋಗ್ಯಕ್ಕೀಡಾಗಿದ್ದಾರೆ. ಇಂದು ಬೆಳಗ್ಗೆ (ಡಿಸೆಂಬರ್ 11) ತೀವ್ರ ಜ್ವರ ಹಾಗೂ ಗಂಟಲು ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ನಟ ಸಿಂಬು ಆಸ್ಪತ್ರೆಗೆ ಭೇಟಿ ನೀಡಿದರು. ವೈರಲ್ ಇನ್ಫೆಕ್ಷನ್ ಇರುವುದಿರಂದ ಮುಂಜಾಗ್ರತಾ ಕ್ರಮವಾಗಿ ಸಿಂಬು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಸಿಂಬು ಆದಷ್ಟು ಬೇಗ ಹುಷಾರಾಗಲಿ ಅಂತ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಸಿಂಬು ಕುರಿತು ಸಿಂಬು ಅಲಿಯಾಸ್ ಸಿಲಂಬರಸನ್ ಕಾಲಿವುಡ್‌ನಲ್ಲಿ ಎಸ್‌.ಟಿ.ಆರ್ (STR) ಅಂತಲೇ ಫೇಮಸ್. ತಮಿಳು ನಟ ಟಿ.ರಾಜೇಂದರ್ ಹಾಗೂ ಉಷಾ ರಾಜೇಂದರ್ ಅವರ ಪುತ್ರ ಸಿಂಬು. ಚಿಕ್ಕವಯಸ್ಸಿನಲ್ಲಿ ಇರುವಾಗಲೇ ತಂದೆಯ ಸಿನಿಮಾಗಳ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಸಿಂಬು ನಟನಾಗಿ, ನಿರ್ದೇಶಕನಾಗಿ, ಗೀತ ಸಾಹಿತಿಯಾಗಿ, ಹಿನ್ನೆಲೆ ಗಾಯಕನಾಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಧಮ್’, ‘ಮನ್ಮದನ್’, ‘ಸರವಣ’, ‘ವಲ್ಲವನ್’, ‘ಕಾಲೈ’, ‘ಗೋವಾ’, ‘ವಿನೈತಾಂಡಿ ವರುವಾಯ’, ‘ಯೇ ಮಾಯ ಚೇಸಾವೆ’, ‘ವಾನಂ’, ‘ಒಸ್ತೆ’, ‘ಪೋಡಾ ಪೋಡಿ’, ‘ದೊಂಗಾಟ’, ‘90 ಎಂ ಎಲ್’, ‘ಈಶ್ವರನ್’, ‘ಮಾನಾಡು’ ಮುಂತಾದ ಸಿನಿಮಾಗಳಲ್ಲಿ ಸಿಂಬು ಅಭಿನಯಿಸಿದ್ದಾರೆ. ಸದ್ಯ ಸಿಂಬು ಕೈಯಲ್ಲಿ ‘ಕೊರೊನಾ ಕುಮಾರ್’ ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಿವೆ. ಕಾವೇರಿ ನೀರು ವಿಚಾರವಾಗಿ ಮಾತನಾಡಿದ್ದ ಸಿಂಬು ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳು ನಟ ಸಿಂಬು ವರ್ಷಗಳ ಹಿಂದೆ ಭಾವನಾತ್ಮಕ ಭಾಷಣ ಮಾಡಿದ್ದರು. ‘’ಕನ್ನಡಿಗರಿಗೇ ನೀರಿಲ್ಲ, ಇನ್ನೂ ನಮಗೆ ಎಲ್ಲಿಂದ ಕೊಡುತ್ತಾರೆ? ಪ್ರೀತಿಯಿಂದ ಮಾತ್ರ ಈ ಪ್ರಪಂಚದಲ್ಲಿ ಎಲ್ಲವನ್ನೂ ಗೆಲ್ಲಲು ಸಾಧ್ಯ. ಕರ್ನಾಟಕದವರೇನಾದರೂ ನಾವು ನೀರು ಕೊಡಲ್ಲ ಅಂತ ಹೇಳಿದ್ದಾರಾ? ಕರ್ನಾಟಕದಲ್ಲಿರುವ ತಾಯಿಗೆ ನಾನು ಕೇಳ್ತಾ ಇದ್ದೇನೆ. ನೀವು ಕುಡಿದು ದಣಿವಾರಿಸಿಕೊಂಡ ಬಳಿಕ ಉಳಿದಿರುವ ನೀರನ್ನು ನಮ್ಮ ಕೊಡ್ತೀರಾ ಅಮ್ಮ.. ಒಬ್ಬ ಮನುಷ್ಯನಿಗೆ ಮತ್ತೊಬ್ಬ ಮನುಷ್ಯ ಸಹಾಯ ಮಾಡಬೇಕು. ಇನ್ನೂ ಎಷ್ಟು ದಿನ ಜಾತಿ, ಧರ್ಮ ಎಂಬ ಹೆಸರಿನಲ್ಲಿ ಕಿತ್ತಾಡುತ್ತಿರುತ್ತೀರಿ?’’ ಎಂದು ತಮಿಳು ನಟ ಸಿಂಬು ಹೇಳಿದ್ದರು.