Darshan ಫ್ಯಾನ್ಸ್‌ಗೆ ಗುಡ್ ನ್ಯೂಸ್‌: 'ಡಿ ಬಾಸ್' ನಟನೆಯ 55ನೇ ಸಿನಿಮಾದ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ!

'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರು 'ರಾಬರ್ಟ್' ನಂತರ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಆ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿದೆ. ಬುಧವಾರ (ಜುಲೈ 14) ಎಲ್ಲ ಕುತೂಹಲಕ್ಕೂ 'ಡಿ ಬಾಸ್' ತೆರೆ ಎಳೆದಿದ್ದಾರೆ.

Darshan ಫ್ಯಾನ್ಸ್‌ಗೆ ಗುಡ್ ನ್ಯೂಸ್‌: 'ಡಿ ಬಾಸ್' ನಟನೆಯ 55ನೇ ಸಿನಿಮಾದ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ!
Linkup
'ಡಿ ಬಾಸ್' ಅವರು ಸಿನಿಮಾ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. 'ರಾಬರ್ಟ್' ಭರ್ಜರಿ ಗೆಲುವು ಕಂಡಮೇಲೆ ದರ್ಶನ್ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. 'ರಾಜಾ ವೀರ ಮದಕರಿ ನಾಯಕ' ಸಿನಿಮಾವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ರಾಕ್‌ಲೈನ್‌ ವೆಂಕಟೇಶ್‌ ಬ್ಯಾನರ್‌ನಲ್ಲಿಯೇ 'ಗೋಲ್ಡ್ ರಿಂಗ್' ಅನ್ನೋ ಸಿನಿಮಾವನ್ನು ದರ್ಶನ್ ಮಾಡಲಿದ್ದಾರೆ ಎಂಬ ಮಾಹಿತಿ ಇತ್ತಾದರೂ, ಆ ಬಗ್ಗೆ ಯಾವುದೇ ಬೆಳವಣಿಗೆ ಆಗಿಲ್ಲ. ಈ ಮಧ್ಯೆ ದರ್ಶನ್ ನಟನೆಯ 55ನೇ ಸಿನಿಮಾದ ಬಗ್ಗೆ ಸದ್ದಿಲ್ಲದೇ ಮಾಹಿತಿ ಹೊರಬಿದ್ದಿದೆ. 'ಯಜಮಾನ' ನಿರ್ಮಾಪಕರ ಜೊತೆ ಡಿ ಬಾಸ್'ಯಜಮಾನ' ಸಿನಿಮಾ ವೇಳೆಯೇ ನಟ ದರ್ಶನ್ ಜೊತೆಗೆ ಮತ್ತೊಂದು ಸಿನಿಮಾ ಮಾಡುವುದಾಗಿ ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಹೇಳಿದ್ದರು. ಇದೀಗ ಆ ಸುದ್ದಿ ನಿಜವಾಗಿದೆ. ದರ್ಶನ್ ಅಭಿನಯದ 55ನೇ ಸಿನಿಮಾವನ್ನು ಶೈಲಜಾ ನಾಗ್ ಮತ್ತು ಬಿ. ಸುರೇಶ ಅವರ ಮೀಡಿಯಾ ಹೌಸ್‌ ಸ್ಟುಡಿಯೋ ನಿರ್ಮಾಣ ಮಾಡಲಿದೆ. ಈ ವಿಚಾರವನ್ನು ಶೈಲಜಾ ನಾಗ್ ಅಧಿಕೃತವಾಗಿ ತಿಳಿಸಿದ್ದಾರೆ. ಈ ಹಿಂದೆ ದರ್ಶನ್ ನಾಯಕತ್ವದಲ್ಲಿ 'ಯಜಮಾನ' ಸಿನಿಮಾವನ್ನು ಮೀಡಿಯಾ ಹೌಸ್‌ ಸ್ಟುಡಿಯೋ ನಿರ್ಮಾಣ ಮಾಡಿತ್ತು. ಅ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಮತ್ತೆ ನಿರ್ದೇಶನಕ್ಕೆ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಭಾರಿ ಬೇಡಿಕೆಯಲ್ಲಿರುವಾಗಲೇ 'ಯಜಮಾನ' ಸಿನಿಮಾವನ್ನು ನಿರ್ದೇಶಿಸುವ ಮೂಲಕ ಡೈರೆಕ್ಷನ್‌ಗೆ ಎಂಟ್ರಿ ಕೊಟ್ಟಿದ್ದರು ವಿ. ಹರಿಕೃಷ್ಣ. ಕಮರ್ಷಿಯಲ್ ಅಂಶಗಳ ಜೊತೆಗೆ ಸಾಮಾಜಿಕ ಸಂದೇಶವನ್ನು 'ಯಜಮಾನ' ಹೊಂದಿತ್ತು. ಜೊತೆಗೆ ಹರಿಕೃಷ್ಣಗೂ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಇದೀಗ ದರ್ಶನ್ 55ನೇ ಸಿನಿಮಾಕ್ಕೂ ಹರಿಕೃಷ್ಣ ನಿರ್ದೇಶನ ಮಾಡಲಿದ್ದಾರೆ. ದರ್ಶನ್ ಕೈಯಲ್ಲಿ ಹಲವು ಸಿನಿಮಾಗಳುನಟ ದರ್ಶನ್ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರಲ್ಲಿ ಒಬ್ಬರು. ಅವರ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಕಾದುಕುಳಿತಿರುತ್ತಾರೆ. 'ರಾಬರ್ಟ್' ಆದಮೇಲೆ 'ರಾಜಾ ವೀರ ಮದಕರಿ ನಾಯಕ' ಸಿನಿಮಾವನ್ನು ದರ್ಶನ್ ಕೈಗೆತ್ತಿಕೊಳ್ಳಬೇಕಿತ್ತು. ಆದರೆ, ಕೊರೊನಾ ಎಫೆಕ್ಟ್‌ನಿಂದಾಗಿ ಅದು ತಡವಾಗಿದೆ. 'ಗೋಲ್ಡ್‌ ರಿಂಗ್' ಅನ್ನೋ ಮತ್ತೊಂದು ಸಿನಿಮಾಕ್ಕೂ ದರ್ಶನ್ ರೆಡಿ ಆಗಿದ್ದರು. ಅದರಲ್ಲಿ ಅವರು ನೇವಿ ಆಫೀಸರ್ ಆಗಿ ಮಿಂಚಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ, ಆ ಬಗ್ಗೆ ಈವರೆಗೂ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಸದ್ಯ ಶೈಲಜಾ ನಾಗ್ ಮತ್ತು ಬಿ. ಸುರೇಶ ಅವರ ಸಿನಿಮಾಕ್ಕೆ ಡಿ ಬಾಸ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದಾದ ಮೇಲೆ 'ಮಿಲನ' ಪ್ರಕಾಶ್, ನಿರ್ಮಾಪಕ ಎಂ.ಜಿ. ರಾಮಮೂರ್ತಿ, ತೆಲುಗು ನಿರ್ಮಾಪಕ ಬಿ.ವಿ. ಎಸ್‌.ಎನ್. ಪ್ರಸಾದ್ ಅವರೊಂದಿಗೂ ದರ್ಶನ್ ಸಿನಿಮಾ ಮಾಡಬೇಕಿದೆ.