ಮಂಡಗದ್ದೆ ಮೀನಿನ ರುಚಿಗೆ ವಿಜಯ್ ಸೇತುಪತಿ ಫಿದಾ; ಶಿವಮೊಗ್ಗದ ಬಗ್ಗೆ 'ಮಕ್ಕಳ್ ಸೆಲ್ವನ್' ಹೇಳಿದ್ದೇನು?

ಭಾರತೀಯ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ ವಿಜಯ್‌ ಸೇತುಪತಿ, ತಮಿಳು ರಿಯಾಲಿಟಿ ಶೋ ಪ್ರಯುಕ್ತ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅವರು 'ಮಾಸ್ಟರ್' ಸಿನಿಮಾದ ಚಿತ್ರೀಕರಣಕ್ಕಾಗಿ ಶಿವಮೊಗ್ಗಕ್ಕೆ ಬಂದಿದ್ದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಮಂಡಗದ್ದೆ ಮೀನಿನ ರುಚಿಗೆ ವಿಜಯ್ ಸೇತುಪತಿ ಫಿದಾ; ಶಿವಮೊಗ್ಗದ ಬಗ್ಗೆ 'ಮಕ್ಕಳ್ ಸೆಲ್ವನ್' ಹೇಳಿದ್ದೇನು?
Linkup
ನಟ ಬೆಂಗಳೂರಿಗೆ ಬಂದು ಮಾಸ್ಟರ್ ಶೆಫ್ ಇಂಡಿಯಾ ತಮಿಳು ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿರುವುದು ಎಲ್ಲರಿಗೂ ತಿಳಿದೇ ಇದೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಬೆಂಗಳೂರಿನ ಜೊತೆಗಿರುವ ನಂಟಿನ ಕುರಿತು ಮಾತನಾಡಿದ್ದರು. ಕಬ್ಬನ್ ಪಾರ್ಕ್‌ನಲ್ಲಿ ಓಡಾಡಿದ ದಿನಗಳನ್ನು ನೆನೆದಿದ್ದರು. ಈಗ ಶಿವಮೊಗ್ಗದ ಬಗ್ಗೆಯೂ ಮಾತನಾಡಿದ್ದಾರೆ. ಮಂಡಗದ್ದೆಯ ಮೀನಿನ ಊಟದ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ! ಶಿವಮೊಗ್ಗಕ್ಕೆ ಬಂದಿದ್ದ ಸೇತುಪತಿ ಎಲ್ಲರಿಗೂ ತಿಳಿದಿರುವಂತೆ 'ದಳಪತಿ' ವಿಜಯ್ ಮತ್ತು ವಿಜಯ್ ಸೇತುಪತಿ ಮುಖ್ಯಭೂಮಿಕೆಯ 'ಮಾಸ್ಟರ್' ಸಿನಿಮಾದ ಬಹುಪಾಲು ಚಿತ್ರೀಕರಣ ನಡೆದಿದ್ದು ಶಿವಮೊಗ್ಗದ ಲಕ್ಷ್ಮೀ ಥಿಯೇಟರ್ ಬಳಿ ಇರುವ ಹಳೇ ಕೇಂದ್ರ ಕಾರಾಗೃಹದಲ್ಲಿ. ಹಾಗಾಗಿ, ತಿಂಗಳುಗಟ್ಟಲೇ ವಿಜಯ್ ಮತ್ತು ವಿಜಯ್ ಸೇತುಪತಿ ಶಿವಮೊಗ್ಗದಲ್ಲೇ ಉಳಿದುಕೊಂಡಿದ್ದರು. ಹಾಗಾಗಿ, ಶಿವಮೊಗ್ಗದ ಬಗ್ಗೆ ಸೇತುಪತಿಗೆ ತಿಳಿದಿದೆ. ಸುಂದರವಾದ ನಗರ'ಶಿವಮೊಗ್ಗಕ್ಕೆ ನಾನು 'ಮಾಸ್ಟರ್' ಸಿನಿಮಾ ಚಿತ್ರೀಕರಣಕ್ಕಾಗಿ ಬಂದಿದ್ದೆ. ಶಿವಮೊಗ್ಗ ಒಂದು ಸುಂದರವಾದ ನಗರ. ನಾನು ಉಳಿದುಕೊಂಡಿದ್ದ ಹೋಟೆಲ್‌ನಿಂದ ಚಿತ್ರೀಕರಣಕ್ಕಾಗಿ ಒಂದು ಪ್ರದೇಶಕ್ಕೆ ಹೋಗಬೇಕಿತ್ತು. ಅಲ್ಲಿಗೆ ಹೋಗುವಾಗಿನ ರಸ್ತೆ (ಮಂಡಗದ್ದೆ ರಸ್ತೆ) ಅದ್ಭುತವಾಗಿದೆ. ರಸ್ತೆ ಬದಿಯಲ್ಲೇ ಸಣ್ಣ ಹೋಟೆಲ್‌ಗಳಿವೆ. ಅಲ್ಲಿ ಮೀನಿನ ಖಾದ್ಯಗಳನ್ನು ತಯಾರಿಸುತ್ತಿದ್ದರು. ನಾನಲ್ಲಿ ಮೀನನ್ನು ತಿಂದಿದ್ದೇನೆ. ಅದನ್ನು ತಿಂದು ನಾನು ತುಂಬ ಖುಷಿಪಟ್ಟಿದ್ದೇನೆ. ಆ ಊರು, ಅಲ್ಲಿನ ವಾತಾವರಣ ಎಲ್ಲವೂ ಚೆನ್ನಾಗಿದೆ' ಎಂದು ಸೇತುಪತಿ ಹೇಳಿದ್ದಾರೆ. ಡೇಟ್ಸ್ ಇಲ್ಲದೇ ಕನ್ನಡ ಸಿನಿಮಾ ಮಿಸ್ ಆಯ್ತು! 'ಎರಡು ವರ್ಷಗಳ ಹಿಂದೆ ಕನ್ನಡ ಸಿನಿಮಾದ ಆಫರ್ ಬಂದಿತ್ತು. ಆದರೆ ಆಗ ಡೇಟ್ಸ್‌ ಇರಲಿಲ್ಲ. ಅದೊಂದು ದೊಡ್ಡ ಹೀರೋ ಇರುವ ಸಿನಿಮಾ. ನನ್ನಿಂದಾಗಿ ಅವರು ಕಾಯುವುದು ಬೇಡ ಎಂದು ಹೇಳಿದೆ. ನಾನು ಹೆಚ್ಚಾಗಿ ಬೆಂಗಳೂರಿಗೆ ಬಂದಿಲ್ಲ, ಆದರೆ 1998ರಲ್ಲಿ ಕಾಲೇಜು ದಿನಗಳಲ್ಲಿ ಮೈಸೂರನ್ನು ನೋಡಲು ನಾನು ಮತ್ತು ಸ್ನೇಹಿತರು ಬಂದಿದ್ದೆವು. ಆಗ ಬೆಂಗಳೂರಿಗೆ ಬಂದು ಕಬ್ಬನ್‌ ಪಾರ್ಕ್‌ನಲ್ಲಿಓಡಾಡಿದ್ದೆವು. ಕಬ್ಬನ್‌ ಪಾರ್ಕ್‌ನಲ್ಲಿ ಪ್ರೇಮಿಗಳನ್ನು ನೋಡಿ ಹೊಟ್ಟೆಕಿಚ್ಚು ಪಟ್ಟುಕೊಂಡಿದ್ದೆವು. ಆಗ ನಮಗೆ ಗರ್ಲ್‌ಫ್ರೆಂಡ್‌ಗಳಿರಲಿಲ್ಲ. ಅದಾದ ಮೇಲೆ ಕನ್ನಡದ 'ಅಖಾಡ' ಸಿನಿಮಾದ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿದ್ದೆ' ಎಂದು ಅವರು ಹೇಳಿಕೊಂಡಿದ್ದಾರೆ.