ನಟ ಯಶ್, ರಾಧಿಕಾ ಪಂಡಿತ್ ಹೊಸ ಮನೆ ವಿನ್ಯಾಸಕ್ಕೆ ಬೇಕಾಗಿದ್ದು 2 ವರ್ಷ; ಕನಸಿನ ಮನೆಯಲ್ಲಿದೆ ಭಾರೀ ವಿಶೇಷ

ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಹೊಸ ಮನೆ ವಿನ್ಯಾಸ ಮಾಡಲು 2 ವರ್ಷಗಳು ಯಾಕೆ ಬೇಕಾಯ್ತು. ಅವರ ಹೊಸ ಮನೆಯ ವಿಶೇಷತೆ ಏನು? ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಈ ಲೇಖನ ಪೂರ್ತಿ ಓದಿ

ನಟ ಯಶ್, ರಾಧಿಕಾ ಪಂಡಿತ್ ಹೊಸ ಮನೆ ವಿನ್ಯಾಸಕ್ಕೆ ಬೇಕಾಗಿದ್ದು 2 ವರ್ಷ; ಕನಸಿನ ಮನೆಯಲ್ಲಿದೆ ಭಾರೀ ವಿಶೇಷ
Linkup
'ರಾಕಿಂಗ್ ಸ್ಟಾರ್' ಹಾಗೂ ಅವರ ಹೊಸ ಗೃಹ ಪ್ರವೇಶ ಕಳೆದ ಜುಲೈ 1 ರಂದು ನಡೆದಿತ್ತು. ಸೋಶಿಯಲ್ ಮೀಡಿಯಾದಲ್ಲಿ ರಾಕಿಂಗ್ ದಂಪತಿಗಳ ಮನೆಯ ಫೋಟೋಗಳು ವೈರಲ್ ಆಗಿದ್ದವು. ಯಶ್ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮನೆ ಖರೀದಿ ಮಾಡಿ 2 ವರ್ಷಗಳಾದ ನಂತರ ಈಗ ಹೊಸ ಮನೆಗೆ ಶಿಫ್ಟ್ ಆಗಿದ್ದಾರೆ. ಕಾರಣ ಏನು? ಸೃಜನಾತ್ಮಕವಾಗಿದೆ ಯಶ್ ಮನೆ ಕೊರೊನಾ ವೈರಸ್ ಕಾರಣದಿಂದ ಕೆಲವೇ ಕೆಲವು ಮಂದಿ ಯಶ್ ಮನೆಯ ಪ್ರವೇಶಕ್ಕೆ ಆಗಮಿಸಿದ್ದರು. ಶಾಸ್ತ್ರೋಕ್ತವಾಗಿ ಈ ಕಾರ್ಯಕ್ರಮ ನಡೆದಿದೆ. 2 ವರ್ಷಗಳ ಕಾಲ ಮನೆಯ ಒಳ ವಿನ್ಯಾಸ ನಡೆದಿದೆ. ಹೌದು, ಸ್ಟಾರ್ ನಟ-ನಟಿಯ ಮನೆಯೆಂದರೆ ಅಲ್ಲಿ ವಿಶಿಷ್ಟತೆ, ವಿಭಿನ್ನತೆ, ಅದ್ದೂರಿತನ ಇರೋದು ಸಾಮಾನ್ಯ. ಹೀಗಾಗಿ ಇಷ್ಟು ಸಮಯ ಬೇಕಾಯ್ತು. ರಾಧಿಕಾ ಹಾಗೂ ಯಶ್ ಅವರ ಜೀವನದ ಖುಷಿಯ ಕ್ಷಣಗಳನ್ನು ತುಂಬ ಸೃಜನಾತ್ಮಕವಾಗಿ ಇಲ್ಲಿಯವರೆಗೆ ಹೇಳಿಕೊಂಡಿದ್ದಾರೆ, ಆಚರಿಸಿದ್ದಾರೆ. ಇನ್ನು ಅವರ ಕನಸಿನ ಮನೆ ಕೂಡ ಸೃಜನಾತ್ಮಕವಾಗಿರಬೇಕಲ್ಲವೇ! ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ ಪತ್ನಿ ಸಾನಿಯಾ ಸರ್ದಾರಿಯ ತಂಡವು ಯಶ್ ಮನೆಯ ಒಳ ವಿನ್ಯಾಸ ಮಾಡಿದೆ. ಕಾರ್ಕಳದಿಂದ ಮಾಡಿಸಿ ತಂದ ತುಳಸಿ ಕಟ್ಟೆ ಮೂರು ತಿಂಗಳಗಳ ಕಾಲ ಯಶ್-ರಾಧಿಕಾ ಜೊತೆ ಸಾನಿಯಾ ತಂಡ ಚರ್ಚೆ ಮಾಡಿ, ಆಮೇಲೆ ಮೂರು ತಿಂಗಳುಗಳ ಕಾಲ ಮಟೀರಿಯಲ್ ಆಯ್ಕೆ ಮಾಡಿ, ಆಮೇಲೆ ಕೆಲಸ ಮಾಡಲು ಆರಂಭಿಸಿದ್ದಾರೆ. ಯಶ್ ದಂಪತಿ ಸಂಸ್ಕೃತಿ-ಸಂಪ್ರದಾಯದಲ್ಲಿ ನಂಬಿಕೆ ಇಟ್ಟವರು. ಹೀಗಾಗಿ ಆಧುನಿಕ-ಸಂಪ್ರದಾಯ ಎರಡೂ ಸೇರಿಸಿ ಒಳ ವಿನ್ಯಾಸ ಮಾಡಬೇಕಿತ್ತು. ರಾಧಿಕಾಗೆ ತುಳಸಿ ಕಟ್ಟೆ ಹೀಗೆ ಇಲ್ಲಿಯೇ ಇರಬೇಕು ಎಂಬುದಿತ್ತಂತೆ, ಹೀಗಾಗಿ ಕಾರ್ಕಳದಿಂದ ವಿಶೇಷವಾಗಿ ತುಳಸಿ ಕಟ್ಟೆಯನ್ನು ಕೆತ್ತಿಸಿಕೊಂಡು, ತರಿಸಲಾಗಿತ್ತು. ಗ್ರೀಕ್ ಮಾದರಿಯ ಬಾಲ್ಕನಿ ಯಶ್ ಮನೆಯನ್ನು ನೈಸರ್ಗಿಕ ಕಲ್ಲುಗಳು, ಬೆಳಕಿನ ದೀಪ, ಮೆಟಲ್‌ಗಳಿಂದ ಸಿಂಗರಿಸಲಾಗಿದೆ. ಗ್ರೀಸ್ ಮಾದರಿಯಲ್ಲಿ ಬಾಲ್ಕನಿಯಿದೆ. ಯಶ್ ದಂಪತಿ ತೆರೆದ ಜಾಗ ಇಷ್ಟಪಡುವುದರಿಂದ ಕೆಲ ಗೋಡೆಗಳನ್ನು ಕೆಡವಲಾಗಿದೆ. ರಾಧಿಕಾರಿಗೆ ಅಡುಗೆ ಮಾಡೋದು ಇಷ್ಟ. ಹೀಗಾಗಿ ಎಲ್ಲರ ಜೊತೆ ಮಾತನಾಡುತ್ತ ಅಡುಗೆ ಮಾಡಲು ತೆರೆದ ಅಡುಗೆ ಮನೆ ಇಡಲಾಗಿದೆ. ಕಳೆದ ಆರು ವರ್ಷಗಳಿಂದ ಯಶ್-ರಾಧಿಕಾ ಜೋಡಿಯ ಡಿಸೈನರ್ ಆಗಿ ಸಾನಿಯಾ ಕೆಲಸ ಮಾಡುತ್ತಿದ್ದಾರೆ.