Cyclone Jawad: ಚಂಡಮಾರುತದಿಂದ ಭಾರಿ ಮಳೆ ಭೀತಿ: 54 ಸಾವಿರ ಜನರ ಸ್ಥಳಾಂತರ

ಜವಾದ್ ಚಂಡಮಾರುತವು ಶನಿವಾರ ಬೆಳಿಗ್ಗೆ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿ ಪ್ರದೇಶಗಳ ಕಡೆಗೆ ಧಾವಿಸುತ್ತಿದ್ದು, ಭಾರಿ ಮಳೆ ಹಾಗೂ ಗಾಳಿಯ ಮುನ್ನೆಚ್ಚರಿಕೆ ನೀಡಲಾಗಿದೆ. ಆಂಧ್ರಪ್ರದೇಶದಲ್ಲಿ 54 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿದೆ.

Cyclone Jawad: ಚಂಡಮಾರುತದಿಂದ ಭಾರಿ ಮಳೆ ಭೀತಿ: 54 ಸಾವಿರ ಜನರ ಸ್ಥಳಾಂತರ
Linkup
ಅಮರಾವತಿ: ಬಂಗಾಳ ಕೊಲ್ಲಿ ಭಾಗದಲ್ಲಿ ವಾಯುಭಾರ ಕುಸಿತದಿಂದ ಬಲಗೊಂಡಿರುವ ಶನಿವಾರ ಉತ್ತರ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದೆ. ಭಾರಿ ಗಾಳಿ ಸಹಿತ ಬಿರುಸು ಸುರಿಯುವ ಅಪಾಯದ ಬಗ್ಗೆ ಭಾರತೀಯ ಹವಾಮಾನ ಇಲಾಖೆ () ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಅಪಾಯಕಾರಿ ಎಂದು ಗುರುತಿಸಲಾದ ಸ್ಥಳಗಳಿಂದ 54 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರ ಮಾಡಿದೆ. ಶ್ರೀಕಾಕುಳಂ ಜಿಲ್ಲೆಯಿಂದ 15,755 ಜನರು ಮತ್ತು ವಿಜಯನಗರಂನಿಂದ 1700 ಮತ್ತು ವಿಶಾಖಪಟ್ಟಣಂ ಜಿಲ್ಲೆಯ 36,553 ಜನರನ್ನು ಸ್ಥಳಾಂತರ ಮಾಡಲಾಗಿದೆ. ಸರ್ಕಾರ ಶಾಲೆಗಳು ಹಾಗೂ ಸಮುದಾಯ ಸಭಾಂಗಣಗಳಲ್ಲಿ 197 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. 11 ರಾಷ್ಟ್ರೀಯ ವಿಪತ್ತು ಪರಿಹಾರ ತಂಡ (NDRF) ಮತ್ತು ಐದು ರಾಜ್ಯ ವಿಪತ್ತು ಪರಿಹಾರ ತಂಡಗಳು (SDRF) ಹಾಗೂ ಆರು ಕರಾವಳಿ ಕಾವಲು ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಒಡಿಶಾದಲ್ಲಿ ಕಟ್ಟೆಚ್ಚರಬಂಗಾಳ ಕೊಲ್ಲಿಯಿಂದ ಚಂಡಮಾರುತ ಹೊರ ಚಲಿಸುವ ಮುನ್ನ ಒಡಿಶಾದ ಪುರಿಯಲ್ಲಿ ಅಪ್ಪಳಿಸುವ ನಿರೀಕ್ಷೆ ಇದೆ. ಐಎಂಡಿ ಶುಕ್ರವಾರ ನೀಡಿದ ಸೂಚನೆ ಪ್ರಕಾರ, ಬಂಗಾಳದ ಪಶ್ಚಿಮ- ಕೇಂದ್ರ ಭಾಗ, ವಿಶಾಖಪಟ್ಟಣಂನ 250 ಕಿಮೀ ಆಗ್ನೇಯ ಭಾಗ, ಪುರಿಯ 430 ಕಿಮೀ ದಕ್ಷಿಣ- ನೈಋತ್ಯ ಭಾಗ ಮತ್ತು ಪಾರಾದೀಪ್‌ನ 510 ಕಿಮೀ ದಕ್ಷಿಣ- ನೈಋತ್ಯ ಭಾಗದ ಮೇಲೆ ಚಂಡಮಾರುತದ ವಾತಾವರಣ ರೂಪುಗೊಂಡಿದೆ. ಶನಿವಾರ ಬೆಳಗಿನವರೆಗೂ ಚಂಡಮಾರುತದ ಗಾಳಿ ಉತ್ತರ- ವಾಯವ್ಯ ದಿಕ್ಕಿನ ಕಡೆ ಚಲಿಸಲಿದೆ. ಡಿಸೆಂಬರ್ 5ರ ಮಧ್ಯಾಹ್ನದ ಬಳಿಕ ಪುರಿ ಕರಾವಳಿ ತಲುಪಿದ ನಂತರ ಉತ್ತರ- ಈಶಾನ್ಯ ದಿಕ್ಕಿನತ್ತ ತಿರುಗಲಿದೆ. ಪುರಿಯಲ್ಲಿ 688 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಒಡಿಶಾದ 19 ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 90-100 ಕಿಮೀ ವೇಗದಲ್ಲಿ ಬೀಸುವ ಗಾಳಿಯು ಚಂಡಮಾರುತ ಒಡಿಶಾದ ಮೇಲೆ ಅಪ್ಪಳಿಸುವ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 17 ಎನ್‌ಡಿಆರ್‌ಎಫ್ ತಂಡಗಳು ಒಡಿಶಾದಲ್ಲಿ ಮತ್ತು 19 ತಂಡಗಳು ಪಶ್ಚಿಮ ಬಂಗಾಳದಲ್ಲಿ ನೆಲೆಯೂರಿವೆ. ತಮಿಳುನಾಡಿನಲ್ಲಿ ಏಳು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಎರಡು ಎನ್‌ಡಿಆರ್‌ಎಫ್ ತಂಡಗಳಿವೆ. ಜವಾದ್ ಚಂಡಮಾರುತದ () ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಶನಿವಾರ 36 ರೈಲುಗಳನ್ನು ರದ್ದುಗೊಳಿಸಿದೆ. ಭಾನುವಾರ 38 ಹಾಗೂ ಸೋಮವಾರ ಒಂದು ರೈಲು ಸಂಚಾರ ರದ್ದುಗೊಳಿಸಲಾಗಿದೆ. ಆಂಧ್ರಪ್ರದೇಶದ ಉತ್ತರ ಭಾಗದ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. , ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಶನಿವಾರ ಹಾಗೂ ಮುಂದಿನ ಎರಡು ಮೂರು ದಿನ ವಿಪರೀತ ಮಳೆ ಸಾಧ್ಯತೆ ಇದೆ.