ರಾಯಭಾರ ಕಚೇರಿ ಸಿಬ್ಬಂದಿ ಸೇರಿ ಕಾಬೂಲ್‌ನಲ್ಲಿ ಸಿಲುಕೊಂಡ 200 ಭಾರತೀಯರು

ಭಾರತೀಯರನ್ನು ಕರೆತರಲೆಂದೇ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಭಾರತದ ವಿಮಾನವೊಂದನ್ನು ಕಳುಹಿಸಲಾಗಿತ್ತು. ಆದರೆ ಕಾಬೂಲ್‌ ನಗರದಲ್ಲಿ ತಾಲಿಬಾನ್‌ ಕರ್ಫ್ಯೂ ಹೇರಿದ್ದರಿಂದ, ರಾಯಭಾರ ಕಚೇರಿ ಇರುವ ಸ್ಥಳದಿಂದ ಭಾರತೀಯರನ್ನು ವಿಮಾನ ನಿಲ್ದಾಣಕ್ಕೆ ಕರೆತರಲು ಸಾಧ್ಯವಾಗಿಲ್ಲ.

ರಾಯಭಾರ ಕಚೇರಿ ಸಿಬ್ಬಂದಿ ಸೇರಿ ಕಾಬೂಲ್‌ನಲ್ಲಿ ಸಿಲುಕೊಂಡ 200 ಭಾರತೀಯರು
Linkup
ಕಾಬೂಲ್‌: ಸಂಪೂರ್ಣವಾಗಿ ಕೈವಶವಾಗಿದ್ದು, ಸುಮಾರು 200ರಷ್ಟು ಭಾರತೀಯರು ಇನ್ನೂ ರಾಜಧಾನಿ ಕಾಬೂಲ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಇವರಲ್ಲಿ ವಿದೇಶಾಂಗ ಇಲಾಖೆ ಸಿಬ್ಬಂದಿಗಳು, ಇವರ ರಕ್ಷಣೆಗೆಂದು ನಿಯೋಜಿಸಲಾಗಿದ್ದ ಅರೆಸೇನಾಪಡೆ ಸಿಬ್ಬಂದಿಗಳೂ ಸೇರಿದ್ದಾರೆ. ಇವರನ್ನೆಲ್ಲಾ ಕರತರಲೆಂದೇ ವಿಮಾನ ನಿಲ್ದಾಣದಲ್ಲಿ ಭಾರತದ ವಿಮಾನವೊಂದು ನಿಂತಿತ್ತು. ಆದರೆ ಕಾಬೂಲ್‌ ನಗರದಲ್ಲಿ ತಾಲಿಬಾನ್‌ ಕರ್ಫ್ಯೂ ಹೇರಿದ್ದರಿಂದ, ಭಾರತೀಯರನ್ನು ರಾಯಭಾರ ಕಚೇರಿ ಇರುವ ಸ್ಥಳದಿಂದ ವಿಮಾನ ನಿಲ್ದಾಣಕ್ಕೆ ಕರೆತರಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇವರಲ್ಲಿ ಇಂಡೋ-ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಅಥವಾ ಐಟಿಬಿಪಿಯ 100ರಷ್ಟು ಸೈನಿಕರು ಸೇರಿದ್ದಾರೆ. ಭಾರತದ ರಾಯಭಾರ ಕಚೇರಿಯನ್ನು ರಕ್ಷಿಸುವ ಕೆಲಸವನ್ನು ಇವರು ಮಾಡುತ್ತಿದ್ದರು. ಈಗಾಗಲೇ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿ ದೇಶ ತೊರೆದಿದ್ದು, ದೇಶದ ವಾಯು ಪ್ರದೇಶವನ್ನು ವಾಣಿಜ್ಯ ವಿಮಾನಗಳ ಹಾರಾಟಕ್ಕೆ ನಿಷೇಧಿಸಲಾಗಿದೆ. ಹೀಗಾಗಿ ಭಾರತೀಯರನ್ನು ಕರೆತರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಸ್ಪಷ್ಟವಾದ ಯೋಜನೆ ರೂಪಿಸಲು ವಿದೇಶಾಂಗ ಇಲಾಖೆ ಅಧಿಕಾರಿಗಳನ್ನು ಸಂಪುಟ ಕಾರ್ಯದರ್ಶಿ ಭೇಟಿಯಾಗುತ್ತಿದ್ದಾರೆ. ಇದಾದ ಬಳಿಕ ಸ್ಪಷ್ಟ ಯೋಜನೆ ಸಿದ್ಧವಾಗಲಿದೆ.