Atlee: ಯಾವ ಸಿನಿಮಾ ಕಥೆಗಿಂತಲೂ ಕಮ್ಮಿಯೇನಿಲ್ಲ ಈ ನಿರ್ದೇಶಕನ ರಿಯಲ್ ಲೈಫ್‌ನ ಲವ್ ಸ್ಟೋರಿ!

ದಳಪತಿ ವಿಜಯ್, ಆರ್ಯರಂತ ಸ್ಟಾರ್ ನಟರ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ನಿರ್ದೇಶಕ ಅಟ್ಲೀ ಹಾಗೂ ಅವರ ಪತ್ನಿ ಪ್ರಿಯಾರನ್ನು ಅನೇಕ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಆದರೆ ಅವರ ಪ್ರೀತಿ ಎಲ್ಲ ಬೇಧ-ಭಾವವನ್ನು ಮೀರಿದೆ

Atlee: ಯಾವ ಸಿನಿಮಾ ಕಥೆಗಿಂತಲೂ ಕಮ್ಮಿಯೇನಿಲ್ಲ ಈ ನಿರ್ದೇಶಕನ ರಿಯಲ್ ಲೈಫ್‌ನ ಲವ್ ಸ್ಟೋರಿ!
Linkup
ಭೂಮಿ ಮೇಲೆ ಪ್ರೀತಿಗೆ ಪವಿತ್ರವಾದ ಸ್ಥಾನವಿದೆ. ಮನುಷ್ಯನಿಗೆ ಒಂದು ವ್ಯಕ್ತಿಯ ಮೇಲೆ ಪ್ರೀತಿ ಹುಟ್ಟಿದಮೇಲೆ ಅವರಲ್ಲಿ ಏನೇ ಕೊರತೆ, ಲೋಪದೋಷ ಕಂಡುಬಂದರೂ ಕೂಡ ಅದು ಲೆಕ್ಕಕ್ಕೆ ಬರೋದಿಲ್ಲ. ಜಾತಿ, ಧರ್ಮ, ಬಣ್ಣ, ಶ್ರೀಮಂತ-ಬಡತನಕ್ಕೂ ಮೀರಿದ ಪ್ರೀತಿಯಿದೆ. ಸಿನಿಮಾದಲ್ಲಿ ವಿಭಿನ್ನವಾದ ಪ್ರೇಮಕಥೆ ನೋಡಿ ಬೆರಗಾಗಿರುತ್ತೇವೆ. ಈ ರೀತಿ ತೆರೆ ಮೇಲೆ ಸುಂದರ ಪ್ರೇಮಕಾವ್ಯ ಕಟ್ಟಿಕೊಡುವ ನಿರ್ದೇಶಕ ಅಟ್ಲೀಯ ನಿಜ ಜೀವನದ ಲವ್ ಸ್ಟೋರಿ ಯಾವ ಸಿನಿಮಾ ಸ್ಟೋರಿಗಿಂತ ಕಮ್ಮಿ ಇಲ್ಲ, ಸ್ವಾಮೀ! ಪ್ರಿಯಾ-ಅಟ್ಲೀಗೆ ಕಾಮನ್ ಫ್ರೆಂಡ್ಸ್ ಇದ್ದರು ಕಾಲೇಜು ದಿನಗಳಲ್ಲಿ ಪತ್ನಿ ಪ್ರಿಯಾ ಡ್ಯಾನ್ಸಿಂಗ್, ಮ್ಯೂಸಿಕ್, ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಆಮೇಲೆ ಕೆಲ ಕಿರುಚಿತ್ರ, ಧಾರಾವಾಹಿಗಳಲ್ಲಿ ಅವರು ಬಣ್ಣಹಚ್ಚಿದ್ದರು. 'ಸಿಂಗಂ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಪ್ರಿಯಾ ಸಣ್ಣ ಸಣ್ಣ ಪಾತ್ರ ಮಾಡಿದ್ದರು. ಅದೇ ಸಮಯಕ್ಕೆ ನಿರ್ದೇಶಕ ಅಟ್ಲೀ 'ರಾಜ ರಾಣಿ' ಸಿನಿಮಾ ಕಥೆ ಬರೆಯುತ್ತಿದ್ದರು. ಈ ಚಿತ್ರಕ್ಕಾಗಿ ಅವರು ಜನರನ್ನು ಭೇಟಿ ಮಾಡುತ್ತಿದ್ದರು. ಪ್ರಿಯಾ, ಅಟ್ಲೀಗೆ ಕಾಮನ್ ಫ್ರೆಂಡ್ಸ್ ಇದ್ದಿದ್ದರಿಂದ ಅವರಿಬ್ಬರಿಗೂ ಪರಿಚಯ ಇತ್ತು. ಮೊದಲ ಸಿನಿಮಾವೇ ಸೂಪರ್‌ಹಿಟ್ ಸಿನಿಮಾದಲ್ಲಿ ಇದ್ದ ಆಸಕ್ತಿ ಅವರನ್ನು ಕೆಲ ವರ್ಷಗಳ ಕಾಲ ಸ್ನೇಹಿತರನ್ನಾಗಿ ಮಾಡಿತು. 2013ರಲ್ಲಿ ಅಟ್ಲೀ ಮೊದಲ ಸಿನಿಮಾ ಘೋಷಣೆ ಮಾಡಿದಾಗ ಪ್ರಿಯಾ ಉತ್ತಮ ಸ್ನೇಹಿತೆಯಾಗಿ ಅಟ್ಲೀ ಬೆಂಬಲಕ್ಕೆ ನಿಂತಿದ್ದರು. ತಮಿಳು ನಟ ಆರ್ಯ, ನಯನತಾರಾ, ನಜ್ರಿಯಾ ನಾಜೀಮ್ ನಟಿಸಿದ್ದ ಅಟ್ಲೀ ಮೊದಲ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಆಮೇಲೆ ಈ ಚಿತ್ರ ತೆಲುಗು, ಓಡಿಯಾ, ಬಂಗಾಳಿ ಭಾಷೆಯಲ್ಲಿಯೂ ಡಬ್ ಆಗಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿತು. ಎಲ್ಲರಿಗೂ ಗೊತ್ತಿದ್ದರೂ ಪ್ರಿಯಾಗೆ ಗೊತ್ತಿರಲಿಲ್ಲ ಸಂದರ್ಶನವೊಂದರಲ್ಲಿ ಪ್ರಿಯಾ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದ ಅಟ್ಲೀ, "ನಟ ಶಿವಕಾರ್ತಿಕೇಯನ್ ಸೇರಿ ಅನೇಕರಿಗೆ ನನಗೆ ಪ್ರಿಯಾ ಮೇಲೆ ಪ್ರೀತಿಯಿದೆ ಎಂದು ಗೊತ್ತಿತ್ತು, ಆದರೆ ಪ್ರಿಯಾಗೆ ಮಾತ್ರ ಈ ಬಗ್ಗೆ ಸುಳಿವೇ ಇರಲಿಲ್ಲ. ಇಂದಿನ ಲವ್ ಸ್ಟೋರಿಯಲ್ಲಿ ಹೊಂದಾಣಿಕೆ, ಸಾಮರಸ್ಯ ಕಾಣಿಸೋದಿಲ್ಲ. ಪ್ರೀತಿಯಲ್ಲಿ ಸ್ವಾರ್ಥ ಇರಬಾರದು" ಎಂದಿದ್ದರು. ಅಟ್ಲೀ-ಪ್ರಿಯಾ ಟ್ರೋಲ್ ಆಗಿದ್ರು ಅಟ್ಲೀ ತುಂಬ ಕಪ್ಪಗಿದ್ದು, ಪ್ರಿಯಾ ಬೆಳ್ಳಗಿದ್ದರು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯನ್ನು ಟ್ರೋಲ್ ಮಾಡಲಾಗಿತ್ತು. ಇವರಿಬ್ಬರು ಸಾಕಷ್ಟು ವರ್ಷ ಒಟ್ಟಿಗೆ ಬಾಳೋದಿಲ್ಲ ಎಂದು ಕೂಡ ಹೇಳಿದ್ದರು. 2014ರಲ್ಲಿ ಪ್ರಿಯಾ ಹಾಗೂ ಅಟ್ಲೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಂದಿಗೂ ಕೂಡ ಈ ಜೋಡಿ ಖುಷಿಯಾಗಿ ಅನ್ಯೋನ್ಯವಾಗಿ ಬದುಕುತ್ತಿದೆ. ಪ್ರಶಸ್ತಿ ಸಮಾರಂಭದಲ್ಲಿ ಗಂಡನ ಬಗ್ಗೆ ಮಾತನಾಡಿದ್ದ ಪ್ರಿಯಾ, "ಅಟ್ಲೀ ತುಂಬ ವಿಧೇಯ, ಕಾಳಜಿ ಮಾಡುವ ವ್ಯಕ್ತಿ, ಅದೇ ಅವನಲ್ಲಿರುವ ಉತ್ತಮ ಗುಣ" ಎಂದಿದ್ದರು. ಅಟ್ಲೀ ಸಿನಿಮಾಗಳೆಲ್ಲವೂ ಹಿಟ್ 'ರಾಜ ರಾಣಿ' ಸಿನಿಮಾ ನಂತರ ಅಟ್ಲೀ ತಮಿಳು ಚಿತ್ರರಂಗದಲ್ಲಿ ನೆಲೆ ನಿಂತರು. 2016ರಲ್ಲಿ ದಳಪತಿ ವಿಜಯ್, ಸಮಂತಾ ಅಕ್ಕಿನೇನಿ ಜೊತೆಗೆ 'ಥೇರಿ', ಮತ್ತೆ ಜೊತೆಗೆ 'ಮರ್ಸಲ್', 'ಬಿಗಿಲ್' ಸಿನಿಮಾ ಮಾಡಿದ್ದರು. ಈ ಎಲ್ಲ ಸಿನಿಮಾಗಳು ಹಿಟ್ ಆಗಿವೆ. ಇಲ್ಲಿಯವರೆಗೆ ಅಟ್ಲೀ ನಿರ್ದೇಶನ ಮಾಡಿರುವ ನಾಲ್ಕು ಸಿನಿಮಾಗಳು ಹಿಟ್ ಆಗಿರೋದು ವಿಶೇಷ.