ಉಗ್ರ ಅಜ್ಮಲ್‌ ಕಸಾಬ್‌ ಜೊತೆ ತೇಜಸ್ವಿ ಸೂರ್ಯರನ್ನು ಹೋಲಿಕೆ ಮಾಡಿದ ನಟ ಸಿದ್ದಾರ್ಥ್; ಟ್ವಿಟ್ಟರ್‌ನಲ್ಲಿ ಚರ್ಚೆ ಶುರು

ಸಂಸದ ತೇಜಸ್ವಿ ಸೂರ್ಯ ಬೆಡ್ ದಂಧೆ ಪ್ರಕರಣದಲ್ಲಿ ಮಾಡಿದ ಕೆಲಸದ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಹೀಗಿರುವಾಗ ತೆಲುಗು ನಟ ಸಿದ್ದಾರ್ಥ್ ಅವರು ತೇಜಸ್ವಿ ಸೂರ್ಯರನ್ನು ಉಗ್ರರಿಗೆ ಹೋಲಿಕೆ ಮಾಡಿದ್ದಾರೆ.

ಉಗ್ರ ಅಜ್ಮಲ್‌ ಕಸಾಬ್‌ ಜೊತೆ ತೇಜಸ್ವಿ ಸೂರ್ಯರನ್ನು ಹೋಲಿಕೆ ಮಾಡಿದ ನಟ ಸಿದ್ದಾರ್ಥ್; ಟ್ವಿಟ್ಟರ್‌ನಲ್ಲಿ ಚರ್ಚೆ ಶುರು
Linkup
ಕಳೆದ ಎರಡು ದಿನದಿಂದ ಎಂಪಿ ಅವರು ಸುದ್ದಿಯಲ್ಲಿದ್ದಾರೆ. ಬೆಡ್ ದಂಧೆ ಹಗರಣವನ್ನು ಬಯಲಿಗೆಳೆದರು ಎಂದು ತೇಜಸ್ವಿ ಸೂರ್ಯರನ್ನು ಹೊಗಳುವವರು ಒಂದುಕಡೆಯಾದರೆ, ಇನ್ನೊಂದು ಕಡೆ ಬೇಲಿನೇ ಎದ್ದು ಹೊಲ ಮೇಯುತ್ತದೆ ಎಂದು ಹೇಳುವವರೂ ಇದ್ದಾರೆ. ಹೀಗಿರುವಾಗ ನಟ ಅವರು ಮಾಡಿದ ಟ್ವೀಟ್ ವೈರಲ್ ಆಗಿದೆ. ಉಗ್ರನಿಗೆ ತೇಜಸ್ವಿ ಸೂರ್ಯ ಹೋಲಿಕೆ ತೇಜಸ್ವಿ ಸೂರ್ಯ ಅವರ ಕೆಲಸದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ. ತೇಜಸ್ವಿ ಪರ-ವಿರೋಧವಾಗಿ ಜನರು ಚರ್ಚೆ ಮಾಡುತ್ತಿರುತ್ತಾರೆ. ಇನ್ನು ಈ ಕುರಿತು ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಹಳೆಯ ಘಟನೆಗಳು ಕೂಡ ಹೊರಗಡೆ ಬರುತ್ತಿವೆ. ನಟ ಸಿದ್ದಾರ್ಥ್ ಅವರು ತೇಜಸ್ವಿ ಸೂರ್ಯರನ್ನು ಉಗ್ರನೋರ್ವನಿಗೆ ಹೋಲಿಸಿದ್ದಾರೆ. ಸಿದ್ದಾರ್ಥ್ ಮಾಡಿದ ಟ್ವೀಟ್‌ನಲ್ಲಿ ಏನಿತ್ತು? "ಅಜ್ಮಲ್ ಕಸಬ್‌ಗಿಂತ 10 ವರ್ಷ ಚಿಕ್ಕವರಾದ ತೇಜಸ್ವಿ ಸೂರ್ಯ ಅವರು ಅಜ್ಮಲ್‌ಗಿಂತ ಅಪಾಯಕಾರಿ. ಈ ಟ್ವೀಟ್ ಸೇವ್ ಮಾಡಿಕೊಳ್ಳಿ, ದುರದೃಷ್ಟಕರ ಚೆನ್ನಾಗಿ ವಯಸ್ಸಾಗುತ್ತದೆ" ಎಂದು ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ. ಇನ್ನು ಕೆಲ ಗಂಟೆಗಳ ನಂತರದಲ್ಲಿ ಸಿದ್ದಾರ್ಥ್ ಅವರು ಮಾಡಿದ ಟ್ವೀಟ್ ಕಾಣಿಸುತ್ತಿರಲಿಲ್ಲ. ಹೀಗಾಗಿ ಅವರು ಟ್ವೀಟ್ ಡಿಲಿಟ್ ಮಾಡಿ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಸಿದ್ದಾರ್ಥ್ ಅವರೇ ಮತ್ತೊಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಸಿದ್ದಾರ್ಥ್ ಟ್ವೀಟ್ ಡಿಲಿಟ್ ಮಾಡಿಲ್ಲ "ಈ ಟ್ವೀಟ್ ನನ್ನ ಫಾಲೋವರ್ಸ್‌ಗಳಿಗೆ ಯಾಕೆ ಕಾಣಿಸುತ್ತಿಲ್ಲ? ಕೆಲವು ಮೊಸಳೆಗಳು ನಾನು ಈ ಟ್ವೀಟ್ ಡಿಲಿಟ್ ಮಾಡಿದ್ದೇನೆ ಎಂದು ಭಾವಿಸಿದ್ದಾರೆ. ನಾನು ಯಾಕೆ ಈ ಭೂಮಿ ಮೇಲಿರಬೇಕು? ಶತ್ರುಗಳನ್ನು ಹೆಸರಿಸಲಾಗುವುದು. ದಯವಿಟ್ಟು ನೆರಳು ಮರೆಮಾಚುವ ಆಟ ಆಡಬೇಡಿ. ನೀವು ಯಾರಿಗೆ ವರದಿ ಒಪ್ಪಿಸುತ್ತೀರಿ?" ಎಂದು ಮತ್ತೊಂದು ಟ್ವೀಟ್ ಮೂಲಕ ಸಿದ್ದಾರ್ಥ್ ಸ್ಪಷ್ಟನೆ ನೀಡಿದ್ದಾರೆ. ಸಿದ್ದಾರ್ಥ್ ಅವರ ಪೋಸ್ಟ್‌ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಒಟ್ಟಿನಲ್ಲಿ ಸಿದ್ದಾರ್ಥ್ ಕಾಮೆಂಟ್ಸ್‌ಗೆ ಜನರು ತಿರುಗಿಬಿದ್ದಿದ್ದಾರೆ.
  • ನಿಮಗೆ ಮೆಡಿಕಲ್ ಚಿಕಿತ್ಸೆ ಅಗತ್ಯವಿದೆ, ಇದು ಯಾವ ರೀತಿಯ ಹೋಲಿಕೆ? ಬಿಜೆಪಿಗರನ್ನು ದ್ವೇಷ ಮಾಡ್ತೀರಿ ಅಂತ ಈ ರೀತಿ ಹೋಲಿಕೆ ಮಾಡಿರೋದು ಸರಿಯಲ್ಲ.
  • ನೀವು ಮತ್ತೇನು? ಪಶ್ಚಿಮ ಬಂಗಾಳದಲ್ಲಿ ಮಾತನಾಡುವ ಧೈರ್ಯವಿದೆಯೇ?
  • ಮುಂಬೈನ 100 ಜನರನ್ನು ಕೊಂದಿರುವ ಅಜ್ಮಲ್ ಕಸಾಬ್‌ಗಿಂತ ತೇಜಸ್ವಿ ಸೂರ್ಯ ಅಪಾಯಕಾರಿಯಾ? ಇದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳಬಹುದಾ? ಮೇಲೆ ಕರುಣೆ ಯಾಕೆ? ಬಿಜೆಪಿ ಬಳಸಿಕೊಂಡ ಯುವಕ ತೇಜಸ್ವಿ ಅಂತಾನಾ ಅಥವಾ ಬಿಜೆಪಿ ಸದಸ್ಯ ಅಂತಾನಾ? ಆರ್‌ಎಸ್‌ಎಸ್ ಅಂತಾನಾ?